ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನಿ ಅವನ ರಾಣಿಯೂ ಮಹಾ ದುಃಖಕ್ಕೆ ಒಳಗಾದರು. ಆದರೆ ರಾಣನು ತನ್ನ ಕರ್ತವ್ಯವನ್ನು ನೆನೆದು ಮಗನನ್ನು ತಿರುಗಿ ಕರೆಯಿಸಲು ಸಮ್ಮತಿಸಲಿಲ್ಲ. - ಪತಿಯ ಮರಣವಾರ್ತೆಯನ್ನು ಕೇಳಿ ಗೋರಾಸಿಂಗನ ಪತ್ನಿಯು ಮನಸ್ಸಿ. ನಲ್ಲಿ ಅತ್ಯಂತ ಮರುಗಿದಳು. ಅವಳಿಗೆ ಜಗತ್ತೇ ಶೂನ್ಯವೆನಿಸಿತು. ಆದರೆ ಅವಳು ಪರಕಣದಲ್ಲಿಯೇ ತಕ್ಕ ಸಮಾಧಾನವನ್ನು ಪಡೆದಳು. ಅವಳು ಬಾದಲನನ್ನು ಕರೆದು “ಮಗುವೇ, ಒಮ್ಮೆ ಅವರ ಶೌರ್ಯ ರಣಚಾತುರ್ಯಗಳ ಸಂಗತಿಯನ್ನು ವರ್ಣಿಸಿ ಹೇಳು, ಅದನ್ನು ಕೇಳಿ ನಾನು ಸಂತೋಷದಿಂದ ಚಿತಾರೋಹಣಮಾಡು ವೆನು, ” ಎಂದಳು. ಬಾದಲನು ಅವಳ ಬಳಿಯಲ್ಲಿ ನಿಂತುಕೊಂಡು, ಗೋರಾಸಿಂಗನು ಯಾವರೀತಿಯಾಗಿ ಶತ್ರುಸೇನೆಯನ್ನು ತುಂಡುಗಡಿದನು, ಯಾವ ರೀತಿ ಹಾಗಿ ಮರಣಕಾಲದಲ್ಲಿಯೂ ಶತ್ರುಗಳ ಮೃತದೇಹಗಳನ್ನು ಕೂಡಿಹಾಕಿ ಅವುಗಳ ಮೇಲೆ ಮಲಗಿಕೊಂಡು ಅತ್ಯಂತ ಸಮಾಧಾನದಿಂದ ಪ್ರಾಣವನ್ನು ಬಿಟ್ಟನು, ಇವೆಲ್ಲ ಸಂಗತಿಗಳನ್ನು ಒಳ್ಳೆ ಗಾಂಭೀರ್ಯಯುಕ್ತವಾದ ವಾಣಿ ಯಿಂದ ವರ್ಣಿಸಿ ಹೇಳಿದನು, ಆ ವಾರ್ತೆಯನ್ನು ಕೇಳಿ ಅವಳ ಕಣ್ಣುಗಳಿಂದ ಆನಂದಾಶ್ರುಗಳು ಉದುರಿದುವು. ಅವಳು ಬಾದಲನನ್ನು ಅಪ್ಪಿಕೊಂಡು, ಮಗುವೇ ಇನ್ನೊಮ್ಮೆ ಅದನ್ನೆಲ್ಲ ಹೇಳು, ಎಂದಳು, ಬಾದಲನು ಪುನಃ ಹೇಳಿದನು. ಆ ಬಳಿಕ ಅವಳು ಆನಂದದಿಂದ ಚಿತೋರೇಶ್ವರಿಯ ಮಂದಿರದ ಕಡೆಗೆ ನಡೆದಳು, ಅಂತ್ಯವಿಧಿಯನ್ನು ನೆರವೇರಿಸುವುದಕ್ಕಾಗಿ ಅವಳ ಪತಿಯ ಮೃತದೇಹವನ್ನು ಅಲ್ಲಿಗೆ ತಂದಿದ್ದರು. ಚಿತ್ತೂರಿನ ಯಾವತ್ತು ಸ್ತ್ರೀ ಪುರುಷರು ಅಲ್ಲಿಗೆ ಬಂದಿದ್ದರು. ಅವರೆಲ್ಲರೂ ಹೂವಿನ ಮಾಲೆಗಳಿಂದಲೂ ಕುಂಕುಮಾದಿ ಸೌಭಾಗ್ಯಾಲಂಕಾರಗಳಿಂದಲೂ ಗೋರಾಸಿಂಗನ ವ್ರತವನ್ನೂ ಆತನ ಪತ್ನಿಯನ್ನೂ ಅಲಂಕರಿಸಿದರು, ಪುರೋ ಹಿತನು ಮಂತ್ರವನ್ನು ಅನ್ನುತ್ತಿರಲು ಅವಳು ಆನಂದದಿಂದ ಪತಿಯ ಚಿತೆಯಲ್ಲಿ ದೇಹವನ್ನು ಈಡಾಡಿದಳು. ರಜಪೂತರೆಲ್ಲರೂ ದುಃಖಮಯವೋ ಸುಖವ ಯವೋ ಆದ ಭಾವನೆಯಿಂದ " ಹರಹರ ಮಹಾದೇವ !' ಎಂದು ಜಯಘೋಷ ಮಾಡಿದರು, ೧೨೪