ಐದನೆಯ ಖಂಡ ಎರಡನೆಯ ಪರಿಚ್ಛೇದ ಗೆ ಭೀರವಾದ ರಾತ್ರಿಯಲ್ಲಿ, ನಿಶೆಯ ನಿಶ್ಚಲತೆಯನ್ನು ಭೇದಿಸಿಕೊಂಡು ಇಬ್ಬರು ಅಲ್ಲಾವುದ್ದೀನನ ಜನಾನಖಾನೆಯ ಬಳಿಯಲ್ಲಿ ಬಂದು ನಿಂತರು. ಅವ ರಲ್ಲಿ ಒಬ್ಬನು ಗಂಡಸು, ಇನ್ನೊಬ್ಬಳು ಹೆಂಗಸು. ಗಂಡಸು ಕೇಳಿದನು:- ಇದೇ ಏನು ಕಮಲಾಬೇಗಮಳ ರಾಣೀವಾಸ ? ಹೆಂಗಸು :- ಹೌದು, ( ಬಹು ಮೆಲ್ಲಗೆ ಹೇಳಿದಳು. ) ಗಂಡಸು :- ಅಲ್ಲಿ ಯಾರು ಯಾರು ಇದ್ದಾರೆ ? ಹೆಂಗಸು '-ಅಲ್ಲಿ ಇನ್ನಾರೂ ಇಲ್ಲ, ಬೇಗವಳೊಬ್ಬಳೇ ಮಲಗಿರುವಳು. ಗಂಡಸು :- ಒಳ್ಳೇದು, ನೀನಿನ್ನು ಹೋಗಬಹುದು. ಹಿಡಿ, ಈ ಉಂಗುರವನ್ನು ಬಾಗಿಲಲ್ಲಿರುವ ದ್ವಾರಪಾಲಕರಿಗೆ ತೋರಿಸು, ಅವರು ನಿನ್ನನ್ನು ಹೊರಗೆ ಬಿಡುವರು. ನಡೆ, ನಿಲ್ಲಬೇಡ, ಹೊರಗೆ ಹೋದವಳೇ ಮಾರ್ಗದ ಬಳಿ ಯಲ್ಲಿರುವ ಸೈನಿಕರಿಗೆ ಯಾವ ರೀತಿಯಿಂದಲೂ ಸದ್ದು ಮಾಡದೆ ನಿಂತಿರಬೇಕೆಂದು ಹೇಳಿದೆನೆಂದು ತಿಳಿಸು, ಇಲ್ಲಿ ಇನ್ನಾರೂ ದಾಸಿಯರಿಲ್ಲವಷ್ಟೇ ? ಹೆಂಗಸು '- ಇಲ್ಲ. ನಾನೇ ಬೇಗಮಳ ಮುಖ್ಯದಾಸಿಯು, ಇಲ್ಲಿ ಇನ್ನಾರೂ ಇಲ್ಲ. ಅರಮನೆಯ ಆ ಭಾಗದಲ್ಲಿ ಇನ್ನೊಬ್ಬ ದಾಸಿಯು ಎಚ್ಚರದಿಂದಿ ರುವಳು. ಆದರೆ ಆ ಸ್ಪಳವು ಬಹಳ ದೂರದಲ್ಲಿದೆ. ಗಂಡಸು :- ಸರಿ ಈಗ ನೀನು ಹೋಗು, ನಾಳೆ ಬೆಳಗಾಗುತ್ತಲೇ ನೀನು ಇನ್ನೊಮ್ಮೆ ನನ್ನನ್ನು ಕಾಣಬೇಕು. ಹೆಂಗಸು ಹೊರಟುಹೋದಳು. ಪಾರಕಮಹಾಶಯ, ಆ ಗಂಡಸು ಯಾರು ? ಗುರ್ಜರೇಶ್ವರನಾದ ಕರಣರಾಯ! ಕರಣರಾಯನು ದಾಸಿಯು ಹೊರಟು ಹೋದಬಳಿಕ ಬೇಗಮಳು ಮಲಗಿರುವ ಕೋಣೆಯನ್ನು ಪ್ರವೇಶಿಸಿದನು. ಕೋಣೆಯ ಬಾಗಿಲಿಗೆ ಬಂದಕೂಡಲೆ ಒಳಗೆ ಯಾರೋ ಮಾತಾಡುವ ಹಾಗೆ ಕೇಳಿತು. ಕರಣರಾಯನು ಅಲ್ಲಿಯ ಮರೆಗೆ ನಿಂತು ಕೇಳತೊಡಗಿದನು. “ ಬಹಳವಾದರೆ ಹದಿನೈದು ದಿನಗಳಲ್ಲಿಯೇ ತಿರುಗಿ ಬರುವೆನೆಂದು ಹೇಳಿ ೧೨೭
ಪುಟ:ಪದ್ಮಿನಿ .djvu/೧೪೨
ಗೋಚರ