ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಮ್ಮಿನಿ ಹೋಗಿದ್ದಿರಿ. ಹದಿನೈದು ದಿನಗಳಾದವು, ಹದಿನೈದು ತಿಂಗಳುಗಳಾದವು! ಇನ್ನೂ ಇಲ್ಲ ಸರದಾರ ತೊರಾಬಖಾನನು ಇಂದು ಮುಂಜಾನೆ ಹೇಳಿದನು... ಇಂದು ರಾತ್ರಿಯ ಹತ್ತು ಘಂಟೆಗೆ ಎಲ್ಲಿದ ರೂ ಬರುವರು, ಎಲ್ಲಿ? ಹತ್ಕಾಯಿತು. ಹನ್ನೊಂದಾಯಿತು; ಹನ್ನೆರಡು ಬಡಿಯಿತು ಎಂದು ಬೇಗವಳು ಕನವರಿಸಿದಳು. ಕರಣರಾಯನು ಕೇಳಿ ಆಶ್ಚರ್ಯಗೊಂಡನು; ಮನಸ್ಸಿನಲ್ಲಿ ರೋಷವೂ ಉಂಟಾಯಿತು. ಅಲ್ಲಾವುದ್ದೀನನು ಇಂದೇ ಬರುವನೇ ? ಅಹಹಾ! ಕಮಲೆಯು ಅವನಲ್ಲಿ ಈ ರೀತಿಯಾಗಿ ಅನುರಕ್ತಳಾಗಿರುವಳೇ ? ರೋಷಾವೇಶದಿಂದ ಅವನ ಮೈನಡುಗಿತು. ಅವನು ತಟ್ಟನೆ ಬಾಗಿಲಿನ ಪರದೆಯನ್ನು ಸರಿಸಿ ಒಳಗೆ ಹೋದನ್ನು ನೋಡುತ್ತಾನೆ, .. ಆಶ್ಚರ್ಯ! ಆಶ್ಚರ್ಯ! ಅಲ್ಲಿದ್ದ ವಳು ಕಮಲೆ ಯಲ್ಲ. ಅವಳ ದಾಸಿಯಾದ ನತಿಯಾ ಕರುಣರಾಯನು ಆಶ್ಚರ್ಯೊದ್ವೇಗ ಗಳಿ೦ದ ತಟಸ್ಥನಾಗಿ ನಿಂತುಬಿಟ್ಟನು, * ವತಿಯಳೂ ಮೊದಲು ವರವೆಯನ್ನು ಸರಿಸಿದ ಸಪ್ಪಳವಾದ ಕೂಡಲೆ ಬಾದಷಹನೇ ಬಂದನೆಂದು ಉತಂರೆಯಿಂದ ಆ ಕಡೆಗೆ ನೋಡುತ್ತಲಿದ್ದಳು. ಆದರೆ ಒಳಗೆ ಬಂದವನು ಬಾದಷಹನಲ್ಲ ಕರಣರಾಯ! ಅವಳೂ ಆಶ್ಚರ್ಯ ವಿಸ್ಮಯಗಳಿಂದ ಬೆನ್ನಾಗಿ ಕುಳಿತುಬಿಟ್ಟಳು. ಎಷ್ಟೋ ಹೊತ್ತಿನವರೆಗೆ ಯಾರೂ ಮಾತಾಡಲಿಲ್ಲ. ಕೊನೆಗೆ ಮತಿಯಳು ಎದ್ದು ಕರಣರಾಯನ ಪಾದಕ್ಕೆ ಎರಗಿದಳು. ಕರಣರಾಯನು ತನ್ನ ಕರಾರಿಯನ್ನು ಹಿರಿದು, ದುಷ್ಟೇ, ನಿನ್ನ ಬೇಗಮ ಳೆಲ್ಲಿ ? ಮತಿಯಾ :- ಮಹಾರಾಜ, ತಾವು ಇಲ್ಲಿಗೇತಕ್ಕೆ ಬರೋಣವಾಯಿತು? ಇಂದೇ ಬಾದಷಹರು ಬರತಕ್ಕವರಿರುವರು. ಸರ್ವ ನಾಶವಾಗಿ ಹೋದೀತಲ್ಲಾ! ದಯಮಾಡಿ ತಾವು ಇಲ್ಲಿಂದ ಹೊರಗೆ ಹೋಗಬೇಕು ತಮಗೆ ನಾನು ಎಲ್ಲ ನನ್ನ ಹಿಂದಿನಿಂದ ತಿಳಿಸುವೆನು. ಕರಣರಾಯ-ನಾನು ಇಲ್ಲಿಂದ ತಿರುಗಿಹೋಗುವ ಅಪೇಕ್ಷೆಯಿಂದ ಬಂದಿಲ್ಲ. ವಿಶ್ವಾಸಘಾತಕರಾದವರಿಗೆ ಶಿಕ್ಷೆಯನ್ನು ವಿಧಿಸಲು ಬಂದಿರುವೆನು. ದುಷ್ಟೇ! ಇದೇ ಏನು ನಿನ್ನ ಸ್ವಾಮಿಭಕ್ತಿಯು ? ಆ ಪಾಪಿಯೆಲ್ಲಿ ? ೧೨೮