ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶನಿ ಬಾದಷಹನು ಕುಳಿತುಕೊಂಡು “ಒಂದು ಗಳಿಗೆಯಲ್ಲಿ ನೀನು ಹೇಳಬೇಕಾಗಿ ರುವದನ್ನೆಲ್ಲ ಹೇಳಿಬಿಡು. ಎರಡನೆಯ ಗಳಿಗೆಯಲ್ಲಿ ನೀನು ಈ ಲೋಕವನ್ನು ಬಿಟ್ಟು ಹೋಗಬೇಕಾಗುವದು. ಮೊದಲು ನಿನ್ನನ್ನು ಕೊಂದು, ಬಳಿಕ ಮೊಗಲರ ಸೇನಾಪತಿಯ ಸಮಾಚಾರವನ್ನು ತೆಗೆದುಕೊಳ್ಳಬೇಕಾಗಿದೆ. ಹೆಚ್ಚಾಗಿ ಮಾತಾಡ ಲಿಕ್ಕೆ ಅವಕಾಶವಿಲ್ಲ. ನೀನು ಯಾವರೀತಿಯಾಗಿ ನನ್ನ ರಾಣೀವಾಸವನ್ನು ಸೇರಿದೆ? ಅದರಲ್ಲಿ ನಿನ್ನ ಉದ್ದೇಶವೇನಿರುವುದು ? ” ಎಂದು ಕೇಳಿದನು. ಕರಣರಾಯನು ಅವನ ಉಳಿದ ಯಾದ ಪ್ರಶ್ನೆಗೂ ಉತ್ತರ ಕೊಡಲಿಲ್ಲ' ಇಷ್ಟೇ ಹೇಳಿದನು'-ಅಲ್ಲಾವುದ್ದೀನ ! ನೀನು ಮೂರ್ಖ ' ನೀನು ಗುರ್ಜರೇ ಶನನ್ನು ಜಯಿಸಲಿಲ್ಲ. ನೀನು ನನ್ನ ಕಮಲೆಯನ್ನು ಅಪಹರಿಕೊಂಡು ಬಂದು ಬೇಗಮಳನ್ನು ಮಾಡಿಕೊಂಡಿರುವೆಯೆಂದು ತಿಳಿದಿರುವಿಯಷ್ಟೇ ! ಅದು ಕೇವಲ ಮೂರ್ಖತನದ ಮಾತೇ ಸರಿ, ನೀನು ಆ ನನ್ನ ಕಮಲೆಯ ಒಂದು ಕೂದಲವನ್ನು ಕೂಡ ನೋಡಿಲ್ಲ ! ಅವಳು ಸತ್ತು ಸ್ವರ್ಗವಾಸಿಯಾಗಿರುವಳು. ಪಾರಾಣನ ಸ್ಪರ್ಶ ದ ನರಕಯಾತನೆಯನ್ನು ಅನುಭವಿಸಲಿಲ್ಲ ! ನೀನು ಮೂರ್ಖತನದಿಂದ ಅವಳ ದಾಸಿಯಾದ ಮತಿಯಳ ಚರಣ ತಲದಲ್ಲಿ ಬಿದ್ದು ಉರುಳಾಡಿದೆ ! ಇಂದು ದಿಲ್ಲಿಯ ಬಾದಷಹನೂ ಗುರ್ಜರೇಶ್ವರನ ದಾಸನೂ ಸಮಾನಯೋಗ್ಯತೆಯುವ ರೆಂಬುದನ್ನು ನಿನಗೆ ಹೇಳಬೇಕಾಗಿತ್ತು. ಅದಕ್ಕಾಗಿಯೇ ನಾನು ಇಷ್ಟೊಂದು ಸಾಹಸ ಮಾಡಿ ಇಲ್ಲಿಗೆ ಬಂದೆನು. ಇನ್ನು ನನ್ನ ಕೆಲಸ ತೀರಿತು ಹೀಗೆಂದು ಕರಣರಾಯನ ಸರನೆ ತನ್ನ ಕಳ್ಳ ಕರಾರಿಯನ್ನು ಹೊರಗೆ ತೆಗೆದನು, ಕರಣರಾಯನ ಮಾತುಗಳನ್ನು ಕೇಳುತ್ತ ಅಚಲನಾಗಿ ಕುಳಿತಿದ್ದ ಅಲ್ಲಾವುದ್ದೀನನು, ಕರಣ ರಾಯನು ತನ್ನನ್ನು ಆ ಕಠಾರಿಯಿಂದ ಚುಚ್ಚಲು ಬರ ಬಹುದೆಂದು ಗಾಬರಿಯಾಗಿ ದೂರ ಸರಿದನು. ಕಣಮಾತ್ರದಲ್ಲಿ ಕರಣರಾಯನು ಕರಾರಿಯಿಂದ ತನ್ನ ಉದರವನ್ನು ಭೇದಿಸಿಕೊಂಡು ನೆಲದ ಮೇಲೆ ಬಿದ್ದು ಬಿಟ್ಟನು, ಪರಕ್ಷಣದಲ್ಲಿಯೇ ಶಿಬಿರದಲ್ಲಿ ನಿದ್ದೆ ಬಾರದೆ ಮಲಗಿರುವ ಮೊಗಲ್ ಸೇನಾ ಪತಿಯಾದ ತುರ್ಕಿಖಾನನ ಬಳಿಗೆ ಒಬ್ಬ ಸರದಾರನು ಬಂದು ತೇಕುತ್ತ:- h೩೨