ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಘದಿ ನಿ ಪದ್ಮನಿ ಮೂರನೆಯ ಪರಿಚ್ಛೇದ ” shukr+ ಮೊಗಲರು ಅನಾಯಾಸವಾಗಿ ಓಡಿ ಹೋಗಿ ಬಿಟ್ಟರು ! ರಾಜ್ಯವು ನಿಷ್ಕಂಟಕವಾಯಿತು. ಅದರಿಂದ ಅಲ್ಲಾವುದ್ದೀನನ ಸೈನಿಕರೆಲ್ಲರೂ ಸುಖಸಮಾ ಧಾನಗಳಿಂದ ಇದ್ದರು. ಆದರೆ ಅಲ್ಲಾವುದ್ದೀನನಿಗೆ ಮಾತ್ರ ಮನಸ್ಸಿನಲ್ಲಿ ಎಳ್ಳ ಷ್ಟಾದರೂ ಸುಖವಿಲ್ಲ; ಶಾಂತಿಯಿಲ್ಲ, ಸಮಾಧಾನವಿಲ್ಲ. ಅವನಿಗೆ ಊಟಕ್ಕೆ ಕುಳಿತರೆ ಕೂಳು ಸವಿತೋರಲೊಲ್ಲದು, ಮಲಗಿದರೆ ನಿದ್ದೆ ಬರಲೊಲ್ಲದು, ಒಂದೆ ರಡು ತಿಂಗಳುಗಳಲ್ಲಿಯೇ ನಾಲ್ಕಾರು ಜನ ಅಡಿಗೆಯವರೂ ಅಂತಃಪುರದ ದಾಸ ದಾಸಿಯರೂ ನಿಷ್ಕಾರಣವಾಗಿ ಅಲ್ಲಾವುದ್ದೀನನ ಕೋಪಕ್ಕೆ ಗುರಿಯಾಗಿ ಜೀವಕ್ಕೆ ಎರವಾದರು! ಗುರ್ಜರೇಶ್ವರನು ಆತ್ಮಹತ್ಯೆ ಮಾಡಿಕೊಂಡ ದಿನವೇ ಮತಿಯಳೂ ಇಹಲೋಕವನ್ನು ಬಿಟ್ಟು ಹೋಗಿಬಿಟ್ಟಿದ್ದಳು. ಚಿತ್ತೂರಿನಲ್ಲಾದ ವರಾಜಯ, ವಡ್ಮಿನಿಯ ಮೇಲಿನ ಮೋಹ, ಇದರ ಮೇಲೆ ಗುಜರಾಧದಲ್ಲಿ ಮತಿಯಳು ತನಗೆ ಮಾಡಿದ ಮೋಸ ಇವುಗಳಿಂದ ಅಲ್ಲಾವುದ್ದೀನನ ಮನಸ್ಸು ಅಲ್ಲೋಲಕಲ್ಲೋಲವಾಗಿತ್ತು, ಇವುಗಳನ್ನು ಮರೆ ಯುವದು ಅವನಿಂದ ಕಡೆತನಕ ಆಗಲಿಲ್ಲ. ಅವನು ಮಹಾ ಲೋಭಕ್ಕೆ ಒಳ ಗಾಗಿ ದಿಲ್ಲಿಯ ಸಿಂಹಾಸನದಲ್ಲಿ ಕುಳಿತುಕೊಂಡೂ ಸುಖವನ್ನು ಅನುಭವಿಸಲಾರ ದಂತಾದನು ! ಎಲೈ ಲೋಭವೇ ನಿನ್ನ ಮಹಿಮೆಯು ಅಗಾಧವಾದ್ದು! ಅಲ್ಲಾವು ದ್ವೀನನಿಗೆ ಪನಿಯು ದೊರೆಯದಿದ್ದರೆ ಈ ಸಕಲ ಸಾಮ್ರಾಜ್ಯವೂ ಕೇವಲ ಶೂನ್ಯವೆಂದು ತೋರಿತು. ಹೇಗೆ ಮಾಡಿದರೆ ನನಗೆ ಪದಿನಿಯು ದೊರೆಯ ಬಹುದು, ಹೇಗೆ ಮಾಡಿದರೆ ಚಿತ್ತೂರಿನ ರಜಪೂತರು ಮಣ್ಣು ಪಾಲಾದಾರು ? ಎಂಬದೊಂದೇ ಭಾವನೆಯು ಅವನ ಮನಸ್ಸನ್ನು ಸಂಪೂರ್ಣವಾಗಿ ಆಕ್ರಮಿಸಿ ಬಿಟ್ಟಿತು. ರಜಪೂತರು ಅಷ್ಟಿಷ್ಟು ಮಾತಿಗೆ ಹಣಿಯಲಾರರೆಂದೂ ಅವನಿಗೆ ಗೊತ್ತಾಗಿತ್ತು. ಅದರಿಂದ ಅವನು ಈ ಬಾರಿ ಬಹುಕಾಲ ಕಷ್ಟಪಟ್ಟು ಒಂದು ಮಹಾ ಸೇನೆಯನ್ನು ಸಿದ್ದಪಡಿಸಿದನು ! ೧೩೪