ಆರನೆಯ ಖಂಡ ಪರಿಸಮಾಪ್ತಿಯು ಮೊದಲನೆಯ ಪರಿಚ್ಛೇದ ಸಂ ಧ್ಯಾಕಾಲದ ಸಿಂಧೂರರಾಗದಿಂದೊಪ್ಪುವ ಆಕಾಶವು ಕ್ರಮವಾಗಿ ಕಪ್ಪೇರಿ ಬರುತ್ತಿತ್ತು, ಪ್ರದೋಷಕಾಲದ ಅಂಧಕಾರವು ನಾಲೂ ಕಡೆಯಿಂದ ಭೂದೇವಿಯನ್ನು ಆಕ್ರಮಣ ಮಾಡಲೆಳಸುತ್ತಿತ್ತು, ಆರಾವಲೀ ಪರ್ವತದ ಪ್ರಸ್ತರಮಯವಾದ ವಾಷಾಣವಕ್ರದಲ್ಲಿ ಶ್ಯಾಮಲವರ್ಣವುಳ್ಳ ಪಲ್ಲವಪೂರ್ಣ ವಾದ ತರುಲತೆಗಳು ಇಷ್ಟು ಹೊತ್ತಿನವರೆಗೂ ನಗುತ್ತಲಿದ್ದುವು; ಈಗ ಅವುಗಳ ಮೋರೆಯು ಕಪ್ಪಿಟ್ಟಿತು. ಮೇಲೆ ಪಲ್ಲವರಾಶಿಯೊಳಗಿನ ಹಕ್ಕಿಗಳ ಲಲಿತವಾದ ಕಾಕಲಿಯ ಗೀತಧ್ವನಿಯು ನಿಂತುಹೋಯಿತು, ಕೆಳಗೆ ವಾಷಾಣ ರಾಶಿಯನ್ನು ಸೀಳಿ ಕೊಂಡು ಚಿಕ್ಕದೊಂದು ಜಲಪ್ರವಾಹವು ಅಣಕಿಸುವಂತೆ “ಕುಲು ಕುಲು” ನಗುವ ನಗೆಯ ಧ್ವನಿಯೋ ಎಂಬಂತೆ ಕುಳು ಕುಳು ನಾದದೊಡನೆ ವ್ಯವಹಿ ಸುತ್ತಿತ್ತು. ಅದರ ದಂಡೆಯ ಮೇಲಿದ್ದ ದೊಡ್ಡದೊಂದು ಬಂಡೆಗಲ್ಲಿನ ಮೇಲೆ ಅರುಣಸಿಂಹನು ಆ ಶಿಲೆಯಂತೆಯೇ ಚಲನರಹಿತನಾಗಿ ಕುಳಿತಿದ್ದನು. ರಾತ್ರಿಯು ಬಂದಿತು. ಈಗ ಅಲ್ಲಿ ಹಕ್ಕಿಗಳ ಕಲಕಲವಿಲ್ಲ. ನಾಲ್ಕೂ ಕಡೆಗೆ ನಿಃಶಬ್ದ ತೆಯುಂಟಾಯಿತು, ದಶದಿಕ್ಕುಗಳೂ ಭಯಂಕರವಾದ ಕತ್ತಲೆ ಯಲ್ಲಿ ಮುಳುಗಿಹೋದುವು. ಆಕಾಶದಲ್ಲಿ ಚಂದ್ರನಿಲ್ಲ; ಸುತ್ತಲೂ ಸಾಂದ್ರವಾದ ದುರ್ಭೇದ್ಯವಾದ ಕಲೆ. ಅರುಣಸಿಂಹನ ಅಂತರಂಗದ ಚಿಂತಾಂಧಕಾರವು ಬಹಿ ರಂಗದ ಕತ್ತಲೆಯೊಡನೆ ಕೂಡಿಕೊಂಡಿತು. ಅವನ ಮನದೊಳಗಿನ ಚಿಂತೆಯು ಭೀತಿಯ ಸ್ವರೂಪವನ್ನು ತಾಳಿತು, ಅವನು ಕಣ್ಣುಗಳನ್ನು ಮುಚ್ಚಿ ಕಾತರಸ್ವರ ದಿಂದ.. “ಹಾ! ಅರುಣಸಿಂಹ! ನೀನು ಈ ಲೋಕದಲ್ಲಿ ಹುಟ್ಟಿದ್ದು ವ್ಯರ್ಥ! ನಿಜವಾಗಿಯೂ ವ್ಯರ್ಥವೇ ಸರಿ” ಎಂದು ನುಡಿದನು. ೧೩೭
ಪುಟ:ಪದ್ಮಿನಿ .djvu/೧೫೨
ಗೋಚರ