ಆರನೆಯ ಖ೦ಡ ದೇ-ಮ'-ಮೈ ಭುಕಾ ಹುಂ ! ಸಾಮಾನ್ಯ ಸೈನಿಕರ ರಕ್ತದಿಂದ ನನಗೆ ತೃಪ್ತಿಯುಂಟಾಗಲಾರದು. ನನಗೆ ಉಚ್ಛತರದ ರಕ್ತವು ಬೇಕಾಗಿದೆ. ಹನ್ನೆರಡು ಜನ ರಾಜಕುಮಾರರ ರಕ್ತವು ಬೇಕು ! ಮೈ ಭುಕಾ ಹುಂ ! ಮೈ ಭುಕಾ ಹುಂ | ಎಂಧ ಭಯಂಕರವಾದ ಕ್ಷುಧೆಯದು ! ರಾಣಾ ಲಕ್ಷಣಸಿಂಗನಿಗೆ ತನ್ನ ಮೈಯೊಳಗಿನ ರಕ್ತವೆಲ್ಲ ಒಮ್ಮಿಂದೊಮ್ಮೆ ನೀರಾಗಿ ಹೋದಂತೆ ಭಾಸವಾ ಯಿತು ! ಹನ್ನೆರಡು ಜನ ರಾಜಕುಮಾರರು ಬೇಕು ! ಒಮ್ಮೆಯೇ ಚಿತ್ತೂರಿನ ರಾಜವಂಶವು ನಿರ್ಮಲವಾಗಿ ಹೋಗುವುದು. ನಿಜವಾಗಿಯೂ ಇವಳು ಚಿತ್ತೂರಿನ ರಾಜ್ಯಲಕ್ಷ್ಮಿಯೇ ? ಮೂರ್ತಿಯು ವುನಃ ಹೇಳಿತು:- ಅವಿಶ್ವಾಸ ವಡಬೇಡ, ರಕ್ತವನ್ನು ಕೊಡು, ಹನ್ನೆರಡು ಜನ ರಾಜಕುಮಾರರನ್ನು ಕೊಡು; ದಿನಕ್ಕೊಬ್ಬರಂತೆ ನಿನ್ನ ಹನ್ನೆರಡು ಜನ ಮಕ್ಕಳನ್ನು ರಣರಂಗದಲ್ಲಿ ಬಲಿಗೊಡು. ಚಿತ್ತೂರನ್ನು ರಕ್ಷಿಸ ಬೇಕೆನ್ನುವಿಯೋ ? ವಂಶವನ್ನು ಕಾಯ್ದುಕೊಳ್ಳಬೇಕೆನ್ನುವಿಯೋ ! ಮಹಾರಾಣನು ಚೀ ತಾರಸ್ವರದಿಂದ'-ತಾಯಿ, ಸಮಾಧಾನ ತಾಳು! ಸಮಾಧಾನ ತಾಳು ! ನಿನ್ನ ಆ ಭೀಷಣವಾದ ಕುದ್ಘಾಧೆಯನ್ನು ತುಸು ತಡೆದು ಕೋ! ನಿನ್ನ ಅಪ್ಪಣೆಯು ನನಗೆ ಶಿರೋಧಾರ್ಯವೇ ಸರಿ. ಚಿತ್ತೂರಿನ ಮೇಲೆ ನಿನ್ನ ಕೃಪಾಕಟಾಕ್ಷವಿರಲಿ ! ಚಿತ್ತೂರಿನ ಉದ್ಧಾರಕ್ಕಾಗಿ ಸರ್ವಸ್ವವನ್ನೂ ಅರ್ಪಿ ಸಬಲ್ಲೆ ನು! ” ಎಂದು ಹೇಳಿದನು. ರಾಣನ ಶರೀರವು ನಡುಗಿತು, ಕೈ ಕಾಲುಗಳು ನಿಶ್ಚತನವಾಗಿ ಹೋ ದುವು. ಅವನ ಕಣ್ಣುಗಳು ಮುಚ್ಚಿದುವು, ಅವನು ಎಚ್ಚರದಪ್ಪಿ ಬಿದ್ದು ಬಿಟ್ಟನು. ಆ ಮೂರ್ತಿಯೂ ಅಲ್ಲಿಂದ ಸಾವಕಾಶವಾಗಿ ಸರಿದುಹೋಯಿತು. ೧೪೩
ಪುಟ:ಪದ್ಮಿನಿ .djvu/೧೫೮
ಗೋಚರ