ಆರನಯ - ಬೀce ಮೂರನೆಯ ಪರಿಚ್ಛೇದ -- ಇಷ್ಟಾದ ಬಳಿಕ ರಜಪೂತ ಸರದಾರರು ಒಳ್ಳೇ ಉತ್ಸಾಹದಿಂದ ಯುದ್ದ ವನ್ನು ಆರಂಭಿಸಿದರು. ಅವರಿಗೆ ಈಗ ಮರಣದ ಭಯವಿಲ್ಲ. ಅವರೆಲ್ಲರೂ ರಣ ಭೂಮಿಯಲ್ಲಿ ವೀರರಂತೆ ಕಾದಿ ಮರಣ ಹೊಂದಿ ವೀರಸ್ವರ್ಗವನ್ನು ಪಡೆಯಲು ಉತ್ಸುಕರಾಗಿದ್ದರು. ರೋಗ ಪೀಡಿತರಾಗಿ ಹಾಸಿಗೆಯಲ್ಲಿ ನೆರಳು ಬಿದ್ದು ಕೊಂಡು ಪ್ರಾಣಬಿಡುವುದಕ್ಕಿಂತಲೂ ರಣರಂಗದಲ್ಲಿ ಶೌರ್ಯ ದಿಂದ ಕಾದಾಡಿ ಸ್ವದೇಶದ ಸಲುವಾಗಿಯೂ ಸ್ವಜ ನ ರ ಸಲುವಾಗಿಯೂ ಮರಣ ಹೊಂ ದುವುದರಿಂದ ನಶ್ವರವಾದೀ ದೇಹದ ಸದುಪಯೋಗವಾಗುವುದೆಂತ ತಮಗೆ ವೀರಸ್ವರ್ಗವು ದೊರೆಯುವುದೆಂತಲೂ ದೇವಿಯು ಪ್ರತ್ಯಕ್ಷಳಾಗಿ ತಮಗೆ ಈ ವಿಚಾರವನ್ನೇ ಅನ್ನೊ ಕ್ರಿಯಿಂದ ಬೋಧಿಸಿದಳೆಂತಲೂ ಅವರು ಭಾವಿಸಿದರು. ಅದೇ ದಿನ ರಾಣನ ಅಪ್ಪಣೆಯ ಮೇರೆಗೆ ದೂತನು ಹೋಗಿ ಅರುಣ ಸಿಂಹನನ್ನು ಕರೆದುಕೊಂಡು ಬಂದನು. ಅರುಣಸಿಂಹನು ನಾಳೆಯೇ ಸೇನಾವತಿ ಯಾಗಿ ಪರಾಣರೊಡನೆ ಯುದ್ದ ಕ್ಕೆ ಹೊರಡತಕ್ಕದ್ದೆಂದು ನಿರ್ಣಯವಾಯಿತು. ಅರುಣಸಿಂಹನು ತನ್ನ ದಾನವದಮನವೆಂಬ ಪಂಚವರ್ಣದ ಕುದುರೆಯ ನೇರಿ ಆನಂದೋನ್ಮತ್ತನಾಗಿ ರಣರಂಗಕ್ಕೆ ಹೊರಟನು, ಕಲವು ಜನ ರಣಪೂತ ಸೈನಿಕರು ಒರೆಗಳೆದ ಖಡ್ಗಗಳನ್ನು ಧರಿಸಿ ಅವನನ್ನು ಹಿಂಬಾಲಿಸಿದರು. ಇನ್ನು ಅರೆಗಳಿಗೆಯಲ್ಲಿ ಅರುಣ ಸಿಂಹನು ದುರ್ಗದ ಮಹಾದ್ವಾರವನ್ನು ದಾಟ ಪಠಾಣರ ಸೇನಾಸಮುದ್ರದಲ್ಲಿ ದುಮ್ಮಿಕ್ಕತಕ್ಕವನು; ಅಷ್ಟರಲ್ಲಿ ಅಶ್ವಾ ರೋಹಿಯಾದ ರಜಪೂತ ಸರದಾರನೊಬ್ಬನು ಧಾವಿಸಿ ಬಂದು ಅವನ ಪಾರ್ಶ್ವ ದಲ್ಲಿ ನಿಂತನು. ಅರುಣ ಸಿಂಹನು ಒಮ್ಮೆ ಚಕಿತ ದೃಷ್ಟಿಯಿಂದ ಆ ಸೈನಿಕನ ಮುಖವನ್ನು ನೋಡಿದನು. ಅರುಣಸಿಂಹನು ಆ ವ್ಯಕ್ತಿಯನ್ನು ಗುರುತಿಸಿದನು. ಅವಳು ಅರುಣಸಿಂ ಹನ ಹೃದಯೇಶ್ವರಿಯಾದ ಮುನ್ನಳಾಗಿದ್ದಳು ! ಅಂದು ಭಿಲ್ಲಸೈನಿಕರನ್ನು ಕೂಡಿ ಕೊಂಡು ಚಿತ್ತೂರಿಗೆ ಬರುವಾಗ ಧರಿಸಿಕೊಂಡಿದ್ದ ವೇಷಭೂಷಣಗಳೇ ಈಗಲೂ (೧೪೭
ಪುಟ:ಪದ್ಮಿನಿ .djvu/೧೬೨
ಗೋಚರ