ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮ್ಮಿನಿ ಅವಳ ಮೈ ಮೇಲೆ ಒಪ್ಪುತ್ತಿದ್ದುವು. ಅರುಣಸಿಂಹನು ಕಂಪಿತಸ್ವರದಿಂದ ಕೇಳಿ ದನು, “ಮುನ್ನಾ ! ಹಾಮಿರನ ಗತಿಯೇನು ? ” ಹಾಮಿರನು ಮುನ್ನಳ ಎರಡು ವರುಷದ ಮಗುವು. ಮುನ್ನಳು ತೋರ್ಬೆರಳನ್ನು ಆಕಾಶದ ಕಡೆಗೆ ತೋರಿ, “ಆತನು ಕಾವಾಡ ಬೇಕು, ಅವನು ತನ್ನ ಅಜ್ಜನ ಮನೆಯಲ್ಲಿ ಸದ್ಯಕ್ಕಂತೂ ಸುಖದಿಂದ ಇರುವನು. ನಾವಿನ್ನು ಅವನ ವಿಷಯವಾಗಿ ಯೋಚಿಸುವಂತಿಲ್ಲ, ” ಎಂದಳು. ಅರುಣಸಿಂಹ ನಿಗೆ ಮುನ್ನಳ ಯೋಗ್ಯತೆಯೂ ಅವಳ ಮನಸ್ಸಿನ ಸ್ಥಿತಿಯೂ ಚೆನ್ನಾಗಿ ಗೊತ್ತಿ ದ್ದುದರಿಂದ ಅವನು ಪುನಃ ಹೆಚ್ಚಾಗಿ ಮಾತು ಬೆಳಿಸಲಿಲ್ಲ. ವರಕ್ಷಣದಲ್ಲಿಯೇ ಕುದ್ಧವಾದ ರಜಪೂತ ಸೈನಿಕರ ಚಿಕ್ಕ ಪ್ರವಾಹವು ವರಾಣ ಸೇಸಾಸಮುದ್ರವನ್ನು ಸೇರಿ ಅದೃಶ್ಯವಾಗಿ ಹೋಯಿತು. ಒಬ್ಬನೂ ತಿರುಗಿ ಬರಲಿಲ್ಲ, ಮಾರನೆಯ ದಿನ ಇನ್ನೊಬ್ಬ, ಮೂರನೆಯ ದಿನ ಮತ್ತೊಬ್ಬ, ನಾಲ್ಕು ನೆಯ ದಿನ ನಾಲ್ಕನೆಯವ, ಇದೇ ರೀತಿಯಾಗಿ ಚಿತ್ತೂರಿನ ಹನ್ನೊಂದು ಜನರಾದ ಕುಮಾರರು ಹನ್ನೊಂದು ದಿನಗಳವರೆಗೆ ಸೇನಾಧಿಪತ್ಯವನ್ನು ವಹಿಸಿ ರಣಭೂ ಮಿಯನ್ನು ಪ್ರವೇಶಿಸಿ ಕಿಯೋಚಿತವಾದ ರೀತಿಯಿಂದ ಕಾದಿ ವೀರಸ್ವರ್ಗ ವನ್ನು ಹೊಂದಿದರು. ಹನ್ನೆರಡನೆಯ ದಿನ ಉಳಿದ ಇನ್ನೊಬ್ಬನ ಸರತಿಯು ಬಂದಿತು. ರಾಣಾ ಲಕ್ಷಣಸಿಂಹನ ದ್ವಿತೀಯಪುತ್ರನಾದ ಅಜಯಸಿಂಹನೊಬ್ಬನು ಮಾತ್ರ ಉಳಿ ದಿದ್ದನು. ಅಜಯಸಿಂಹನು ರಾಣನ ಅತ್ಯಂತ ಪ್ರೀತಿಯ ಮಗನು. ಅದರಿಂದಲೇ ಅವನು ಇನ್ನೂ ಯುದ್ಧರಂಗಕ್ಕೆ ಹೊರಟಿರಲಿಲ್ಲ. - ಹನ್ನೆರಡನೆಯ ದಿನ ಮುಂಜಾನೆ ರಾಣಾ ಲಕ್ಷಣಸಿಂಹನು ಅಜಯಸಿಂ ಹನನ್ನು ಕರೆದು,-“ಅಜಯ ! ಚಿತ್ತೂರಿನ ರಾಣನ ವಂಶದ ಆಧಾರಭೂತರಾದ ಹನ್ನೆರಡು ಜನ ರಾಜಕುಮಾರರಲ್ಲಿ ನೀನೊಬ್ಬನು ಮಾತ್ರ ಉಳಿದಿರುವೆ, ರಣದೇ ವತೆಗೆ ಬಲಿಯಾಗುವುದು ಇಂದು ನಿನ್ನ ಪಾಲಿಗೆ ಬಂದಿದೆ, ಆದರೆ ನಾನು ಈ ಮಾತನ್ನು ಹೇಗೆ ಸಮ್ಮತಿಸಲಿ? ನೀನು ನಿನ್ನ ಇಬ್ಬರು ಮಕ್ಕಳನ್ನೂ ಪತ್ನಿಯನ್ನೂ ೧೪೮