ಪದ್ಮನಿ ಮಂದಿರಕ್ಕೆ ಹೋಗೋಣ. ಮೇಲಾಗಿ ನೀನು ಚಿತ್ತೂರಿನ ಮಹಿಷಿಯು; ನಿನ್ನನ್ನು ನೋಡಿ ನಿನ್ನ ಸಾವಿರಾರು ಪ್ರಜೆಗಳು ಮನಸ್ಸಿನಲ್ಲಿ ದೈರ್ಯವನ್ನು ತಾಳ ಬೇಕು; ಆ ನಿನ್ನ ಸಕಲ ಪ್ರಜೆಗಳೂ ನಿನ್ನನ್ನು ಅನುಸರಿಸಿ ನಡೆಯಬೇಕು; ಹೀಗಿದ್ದು ನೀನೇ ಹೀಗೆ ಅತ್ತು ರಂಭಾಟಮಾಡುತ್ತ ಕುಳಿತರೆ ಅವರೇನು ಮಾಡ ಬೇಕು ? ಮಹಿಷಿಯಾದವಳು ಮಹಿಷಿಯಂತೆಯೇ ಇರಬೇಕು. ಅದರಿಂದ ಹೀಗೆ ದುಃಖವಡುವುದು ನಿನಗೆ ಶೋಭಿಸುವುದಿಲ್ಲ. ” ಎಂದಳು. ನಮ್ಮಿನಿಯ ಮುಖ ದಲ್ಲಿ ಮುಗುಳ್ಳಗೆಯು ವಿರಾಜಿಸುತ್ತಿತ್ತು. ಆಶ್ಚರ್ಯ ! ಇಂಧವರೇ ಧೀರರು ! ರಾಣಿಯು ನಮ್ಮಿನಿಯ ಮಾತುಗಳನ್ನು ಕೇಳಿ ಅಳುವುದನ್ನು ಬಿಟ್ಟು ಎದ್ದು ನಿಂತಳು. ಅವಳ ಮುಖದಲ್ಲಿ ಆನಂದದ ಕಳೆಯು ಉಕ್ಕಿಬರತೊಡಗಿತು. ನಮ್ಮಿ ನಿಯು ಅವಳ ಕೈಯನ್ನು ಹಿಡಿದು,-“ತಂಗೀ, ಈ ಆತ್ಮವು ಅವಿನಾಶಿಯಾಗಿದೆ; ಕಾಲಗತಿಯಿಂದ, ಅರ್ಧಾತ್ ಕರ್ಮವಶದಿಂದ ಒದಗುವ ಸುಖದುಃಖಗಳು ನಮ್ಮವಲ್ಲ. ಅವುಗಳನ್ನು ಗಣಿಸಲಾಗದು. ಅವುಗಳಿಗಾಗಿ ಹಿಗ್ಗಿ ತಗ್ಗುವವರು ಕೇವಲ ಮೂಢರು, ಯಾವ ಆದಿಮಾಯೆಯು ಈ ಸಕಲ ಸೃಷ್ಟಿಯನ್ನು ಸೃಷ್ಟಿಸಿ ಪೊರೆಯುತ್ತಿರುವಳೋ ಯಾವ ಆದಿಮಾಯೆಯು ಈ ವಿಶ್ವ ಪ್ರವಂಚದ ಸಕಲ ಸುಖದುಃಖಗಳ ನಿಯಾಮಕಳೋ ಆ ಆದಿಮಾಯೆಯನ್ನು ಮರೆಹೊಗುವು ದಿಷ್ಟೇ ನಮ್ಮ ಕರ್ತವ್ಯವು, ತಪ್ಪು ಒಪ್ಪುಗಳೆಲ್ಲವೂ ಅಳವೇ ನರಿ “ada HTara fvar aHa” ಎಂದು ಅನನ್ಯಭಾವದಿಂದ ಆ ಜಗದುದ್ಧಾರಕಳನ್ನು ಮರೆಹೊಕ್ಕರೆ ಅವಳು ಆರೆನಿಮಿಷದಲ್ಲಿ ನಮ್ಮ ಕಷ್ಟಗಳೆಲ್ಲವನ್ನೂ ಕಳೆದು ಸ್ಥಿರ ವಾದ ಸುಖಶಾಂತಿಗಳನ್ನು ದಯಪಾಲಿಸುವಳು, ಅಹಂಕಾರ ಮಮಕಾರಗಳೇ ಈ ಪ್ರಪಂಚದ ಸಕಲ ಸುಖದುಃಖಗಳ ಮೂಲವು. ಆ ಮೂಲವನ್ನೇ ಕಿತ್ತೂ ಗೆದರೆ ಇನ್ನೆಲ್ಲಿಯ ಸುಖ ? ಇನ್ನೆಲ್ಲಿಯ ಪುತ್ರರು ? ಇನ್ನೆಲ್ಲಿಯ ರಾಜ್ಯವೈಭವ ಗಳು ? ಅವುಗಳ ವಿಯೋಗದಿಂದ ದುಃಖವೆಲ್ಲುಂಟಾಗುವುದು ? ಆ ಆದಿಮಾ ಯೆಯ ಮಂದಿರಕ್ಕೆ ನಡೆ, ಆಕೆಯ ಅಪ್ಪಣೆಯನ್ನು ಪಡೆದುಕೊಂಡು ಜೋ ಹಾರ” ವ್ರತವನ್ನು ಸ್ವೀಕರಿಸುವ, ನಮಗೆ ಇನ್ನು ಅನ್ಯಮಾರ್ಗಗಳೇ ಉಳಿದಿಲ್ಲ” ಎಂದಳು. ೧೫೦
ಪುಟ:ಪದ್ಮಿನಿ .djvu/೧೬೫
ಗೋಚರ