ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಗನಹು ಖ೦ಡ ಅದಕ್ಕೆ ಆಧಾರವಾಗಿದ್ದ ದಾರವು ಹರಿದುಹೋದದ್ದರಿಂದಲೂ ನಮ್ಮಿನಿಯು ಅದನ್ನು ಸರಯಾಗಿ ಹಿಡಿದಿರಲಿಲ್ಲವಾದ್ದರಿಂದ ಕನ್ನಡಿಯು ದೊಪ್ಪನೆ ಕೆಳಗೆ ಬಿದ್ದು ಹೋಳು ಹೋಳಾಗಿ ನಾಲ್ಕು ಕಡೆಗೆ ಸಿಡಿಯಿತು. ನಮ್ಮಿನಿಯು ಆ ಭಾವ ಚಿತ್ರವನ್ನು ಹಿರಿದುಕೊಂದು ದೀವದ ಮೇಲೆ ಹಿಡಿದು ಸುಡಹತ್ತಿದಳು. ಚಿತ್ರವು ಸುಡುತ್ತಿದ್ದಾಗ ನಮ್ಮಿನಿಯು:- ಮುರ್ಖಾ ! ನೀನು ನಮ್ಮಿನಿಯ ಒಂದು ಕೂದಲನ್ನಾದರೂ ನೋಡಲಾರೆ, ಇಷ್ಟೇ ಅಲ್ಲ; ಅವಳ ಕುರುಹುಗಳೂ ಕೂಡ ನಿನ್ನ ಕಣ್ಣಿಗೆ ಬೀಳಲಾರವು ! ” ಎಂದಳು. ಇಷ್ಟರಲ್ಲಿ ಮಂದಿರದ ಹೊರಗಡೆಗೆ ಸುವರ್ಣದ ಪಂಜರಗಳಲ್ಲಿದ್ದ ಪಂಚ ವರ್ಣದ ಗಿಳಿಯ ನಯನಾ ಸಕ್ರಿಯ ರಾಣಿಯವರೇ ಬನ್ನಿರಿ, ಬನ್ನಿರಿ, ಕುಳಿತುಕೊಳ್ಳಿರಿ. ” ಎಂದವು. ಕೂಡಲೆ ಪಮ್ಮಿನಿಯು ಅವುಗಳ ಬಳಿಗೆ ಹೋಗಿ ಪಂಜರಗಳ ಬಾಗಿಲನ್ನು ತೆರೆದು ಅವುಗಳನ್ನು ಹೊರಗೆ ಬಿಟ್ಟು ಬಿಟ್ಟಳು, ಆದರೆ ಅವು ಹಾರಿಹೋಗಲಿಲ್ಲ; ತಿರುತಿರುಗಿ ಬಂದು ನಮ್ಮಿನಿಯ ಭುಜದ ಮೇಲೆಯೂ ಮುಂಗೈಯ ಮೇಲೆಯೂ ಕುಳಿತುಕೊಳ್ಳುತ್ತಿದ್ದವು. ಅದನ್ನು ನೋಡಿ ನಮ್ಮಿನಿಯ ಕಣ್ಣುಗಳಿಂದ ಮತ್ತೆರಡು ಹನಿಗಳು ಉದುರಿದುವು. ಬಹಳ ಹೊತ್ತಾದ ಮೇಲೆ ರಾಣಾ ಭೀಮಸಿಂಹನು ಜೋಹಾರದ ಎಲ್ಲ ಸಿದ್ದತೆಯನ್ನು ಮಾಡಿಸಿಟ್ಟು ಮನೆಗೆ ಬಂದನು. ನಮ್ಮಿನಿಯು ಹಾಸಿಗೆಯಿಲ್ಲದ ಮಂಚದ ಮೇಲೆ ಕುಳಿತುಕೊಂಡಿದ್ದಳು. ಪತಿಯು ಬಂದುದನ್ನು ನೋಡಿ ಎದ್ದು ಸಾಷ್ಟಾಂಗ ನಮಸ್ಕಾರ ಮಾಡಿದಳು. ಮನಸ್ಸಿನಲ್ಲಿ ಇದೇ ಕೊನೆಯ ದಿನವೆಂ ದಳು. ರಾಣನು ಅವಳನ್ನು ಎಬ್ಬಿಸಿ ತಬ್ಬಿಕೊಂಡನು. ಒಬ್ಬರ ಬಾಯಿಯಿಂದಲೂ ಮಾತು ಹೊರಡದು. ಅವರು ಹಿಂದೊಮ್ಮೆ ಇದೇ ರೀತಿಯಾಗಿ--ಆದರೆ ಇದೇ ತರದ ಭಾವನೆಯಿಂದಲ್ಲ-ಯಾರು ಏನೆಂದು ಮಾತಾಡಬೇಕೆಂಬುದನ್ನು ತಿಳಿ ಯದೆ ಬಹಳ ಹೊತ್ತಿನವರೆಗೆ ಆಲಿಂಗನ ಸುಖವವನ್ನು ನುಭವಿಸುತ್ತ ನಿಂತು ಕೊಂಡಿದ್ದರು. ಅಹಹಾ ! ಅಂದಿನ ಆ•ನವದಂಪತಿಯರ ಪ್ರಥಮ ಸಂಕಲನದ ಸಮಯದ ಸುಖಮಯವಾದ ಭಾವನೆಗೂ ಇಂದಿನ ಈ ಕೊನೆಯ ದಿನದ ಮನ ಸ್ಸಿನ ಸ್ಥಿತಿಗೂ ಎಷ್ಟೊಂದು ಅಂತರವು ! ೧೫೩ ೧೦