ಪದ್ಮನಿ ಕ್ರಮವಾಗಿ ರಾತ್ರಿಯು ಕಳೆಯಿತು. ಪ್ರಾತಃಕಾಲದ ಮಲಿನವಾದ ಛಾಯೆಯು ಒಡೆದು ಕಾಣಿಸುತ್ತಿತ್ತು. ಸೃಷ್ಟಿ ಚಕ್ರಕ್ಕೆ ಸುಖದುಃಖಗಳ ಕಲ್ಪನೆ ಯಲ್ಲಿರುವುದು? ಅದು ಸುಖದ ಕಾಲವೆಂದು ' ಬೇಗನೆ ತಿರುಗುವುದಿಲ್ಲ. ದುಃಖದ ಸಮಯವೆಂದು ಸಾವಕಾಶವಾಗಿ ಶ್ರಮಿಸುವುದಿಲ್ಲ. ಪೂರ್ವದಿಕ್ಕಿನಲ್ಲಿ ಸೂರ್ಯನು ಉದಯನಾಗಿ ಮೇಲಕ್ಕೆ ಬಂದನೋ ಇಲ್ಲವೋ, ಚಿತ್ತೂರಿನೊಳಗಿನ ಯಾವತ್ತೂ ಸ್ತ್ರೀಯರು ಆಲಂಬಿತಕುಂತಲೆಯ ರಾಗಿ ರಕ್ಯಾಂಬರಗಳನ್ನುಟ್ಟು, ಕೊರಳಲ್ಲಿ ಹೂವಿನ ಹಾರಗಳನ್ನೂ ಅರಿಸಿನ ಕುಂಕುಮಾದಿ ಸೌಭಾಗ್ಯಾಲಂಕಾರಗಳನ್ನೂ ಧರಿಸಿಕೊಂಡು ತಂಡತಂಡವಾಗಿ ಹೊರಟು ಚಿತೋರೇಶ್ವರಿಯ ಮಂದಿರದಿಂದ ಹೊರಟು ನಡೆದರು. ಎಲ್ಲರಿಗಿಂತ ಮುಂದೆ ನಮ್ಮಿನಿಯ ಚಿತ್ತೂರಿನ ರಾಣಿಯ ಜೋಡಾಗಿ ನಡೆಯುತ್ತಿದ್ದರು. ಅವರ ಹಿಂದೆ ಹೋಗುತ್ತಿದ್ದ ಭೈರವಿಯು ಉದ್ದಿಷ್ಟ ಸ್ಥಳಕ್ಕೆ ಮುಟ್ಟಿದ ಕೂಡಲೆ ಅವರಿಗೆ ಸಂಜ್ಞೆಮಾಡಿದಳು. ಎಲ್ಲರೂ ನಿಂತುಕೊಂಡರು. ತರತರದ ಮಂಗಲವಾದ್ಯಗಳು ಭೋರ್ಗರೆಯುತ್ತಿದ್ದು ವು. ಬ್ರಾಹ್ಮಣರು ವೇದ ಘೋಷ ಮಾಡುತ್ತ ಅಗ್ನಿ ಸಂಸ್ಕಾರ ಮಾಡುತ್ತಿದ್ದರು ಎದುರಿಗೆ ವಿಸ್ತಾರ ವಾದ ಕುಂಡದಲ್ಲಿ ಅಗ್ನಿಯು ಧಗಧಗಿಸಿ ಉರಿಯುತ್ತಿತ್ತು. ಪುರೋಹಿತನ ಅಪ್ಪಣೆಯಾದ ಕೂಡಲೆ ಪದ್ಮನಿಯ ರಾಣಿಯ ಉಳಿದ ಯಾವತ್ತು ಸ್ತ್ರೀಯರೂ ಅಗ್ನಿನಾರಾಯಣನನ್ನು ಸ್ಮರಿಸುತ್ತ ನಿಂತಲ್ಲಿಯೇ ಮೂರು ಪ್ರದಕ್ಷಿಣೆಗಳನ್ನು ಮಾಡಿ, ಮೊದಲು ತಾವು ಧರಿಸಿದ್ದ ಹೂವಿನ ಮಾಲೆಗಳನ್ನು ಹರಿದು ಅಕ್ರತೆಯನ್ನೂ ಆ ಮಾಲೆಗಳನ್ನೂ ಅಗ್ನಿನಾರಾಯಣನಿಗೆ ಅರ್ಪಿಸಿ ಬಳಿಕ ಕ್ರಮವಾಗಿ ತಮ್ಮ ದೇಹಗಳನ್ನು ಆ ಕುಂಡದಲ್ಲಿ ಈಡಾಡಿದರು. “ ಜಯ ! ಮಹಾಮಾಯೆ !! ” ಎಂಬ ಮಹಾಭೀಷಣವಾದ ಧ್ವನಿಯು ದಿಕ್ಕು ದಿಕ್ಕುಗಳಲ್ಲಿ ಮಾರ್ದನಿಗೊಂಡಿತು ! ಅದೇ ಕಾಲಕ್ಕೆ ಅಗ್ನಿಕುಂಡದ ಇನ್ನೊಂದು ಭಾಗದಲ್ಲಿ ಸಾವಿರಾರು ರಜ ಪೂತ ಯೋದ್ದರು ಕೇಸರೀ ವರ್ಣದ ಬಟ್ಟೆಗಳನ್ನು ಧರಿಸಿಕೊಂಡು ಸಶಸ್ತ್ರರಾಗಿ, ಇದೇ ರೀತಿಯಾಗಿ ಅಗ್ನಿನಾರಾಯಣನನ್ನು ಅಭಿನಂದಿಸಿ ದುರ್ಗದ ಮಹಾದ್ವಾ ರದ ಕಡೆಗೆ ಭರದಿಂದ ನಡೆದರು. ೧೫೪
ಪುಟ:ಪದ್ಮಿನಿ .djvu/೧೬೯
ಗೋಚರ