ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನಯ ಖ2 ಐದನೆಯ ಪರಿಚ್ಛೇದ ದು ರ್ಗದ ಮಹಾದ್ವಾರವು ತಟ್ಟನೆ ತೆರೆಯಲ್ಪಟ್ಟಿತು, ಕಟ್ಟಿ ನಿಂತಿದ್ದ ನದಿಯ ನೀರು ಕಟ್ಟು, ಒಡೆದಕೂಡಲೆ ಮಹಾವೇಗದಿಂದ ಧಾವಿಸುವಂತೆ ದುರ್ಗದ ಮಹಾದ್ವಾರವನ್ನು ಕರೆದಕೂದಲೆ ಉನ್ಮತ್ತರಾದ ರಜಪೂತ ಸೈನಿಕರು ಪ್ರವಾಹಗೊಂಡು ಶತ್ರುದಳವೆಂಬ ಸಾಗರವನ್ನು ಪ್ರವೇಶಿಸಿದರು. ಪರಾಣಸೇನಾ ಸಾಗರದ ನೀಲಜಲದಲ್ಲಿ ರಜಪೂತ ಸೈನಿಕಪ್ರವಾಹದ ಕೇಸರೀವರ್ಣವು ಎಷ್ಟೋ ದೂರದವರೆಗೆ ಒಡೆದು ಕಾಣಿಸುತ್ತಿತ್ತು. ಎಲ್ಲರ ಮುಂಗಡೆಗೆ ರಾಣಾ ಲಕ್ಷ ಸಿಂಗನೂ ಭೀಮಸಿಂಹನೂ ಸೇನಾಪತಿ ಬಾದಲನೂ ಇದ್ದರು. ಬರ ಬರುತ್ತ ಕೇಸರಿ ಬಣ್ಣದ ಪ್ರವಾಹವು ಗುಪ್ತಗಾಮಿಯಾಗತೊಡಗಿತು. ಒಬ್ಬ ರಜಪೂತ ರಣರಂಗದಿಂದ ತಿರುಗಿ ಬರಲಿಲ್ಲ; ಬದುಕಿ ಉಳಿಯಲಿಲ್ಲ' ಯುದ್ಧವು ಮುಗಿಯಿತು. ಬಹು ದಿವಸಗಳವರೆಗೆ ಕಷ್ಟ ಪಟ್ಟು ಅಲ್ಲಾ ವುದ್ದೀನನು ಜಯವನ್ನು ಪಡೆದನು. ಅವನ ಬಹು ದಿನಗಳ ಬಯಕೆಯು ಇಂದು ಪೂರ್ಣವಾಯಿತು. ಅವನು ಆನಂದದಿಂದ ಉನ್ಮತ್ತನಾದನು. ಅಲ್ಲಾವುದ್ದೀನನು ಒಳ್ಳೆ ವೈಭವದಿಂದ ದುರ್ಗವನ್ನು ಪ್ರವೇಶಿಸಿದನು. ದುರ್ಗವನ್ನು ಏರಿಬರುವಾಗ ಅವನು ತನ್ನ ಮನಸ್ಸಿನಲ್ಲಿ ಹಲವು ಸಂಗತಿಗಳನ್ನು ಭಾವಿಸಿಕೊಳ್ಳುತ್ತಲಿದ್ದನು ಪಮ್ಮಿನಿಯ ಕೂದಲನ್ನು ಕೂಡ ತಾನು ನೋಡ ಲಾರೆನೆಂಬ ವಿಚಾರವು ಅವನಿಗೇನು ಗೊತ್ತು ? ಅವನು ಇನ್ನು ಸಮ್ಮಿನಿಯು ಸುಲಭವಾಗಿ ತನ್ನ ವಳಾಗುವಳೆಂದು ನಂಬಿ ನೆಟ್ಟಗೆ ಅವಳ ಅರಮನೆಯ ಕಡೆಗೆ ನಡೆದನು. ದಾರಿಯಲ್ಲಿ ಎರಡೂ ಮಗ್ಗಲಿನ ಮನೆಗಳೆಲ್ಲ ಬರಿದಾಗಿ ದ್ದು ವು. ಬಾಗಿಲಲ್ಲಿ ಅರಿಸಿನ ಕುಂಕುಮಗಳೂ ಅಕ್ಷತೆಗಳೂ ಹರಿದ ಹೂವಿನ ಮಾಲೆಗಳೂ ಸೂರೆಯಾಗಿ ಬಿದ್ದಿದ್ದುವು. ಅಲ್ಲಾವುದ್ದೀನನ ಅಂತರಂಗವು ಹೊಯಿದಾಡು ತಿತ್ತು. ಆ ನಿರ್ಮಾನುಷವಾದ ದೊಡ್ಡ ದೊಡ್ಡ ಮಂದಿರಗಳನ್ನು ನೋಡಿ ಅವನ ಮನಸ್ಸಿನಲ್ಲಿ ಒಂದು ಪ್ರಕಾರದ ಭೀತಿಯುಂಟಾಯಿತು. ಅವನಿಗೆ ಆ ಮಂದಿರ ಗಳು ತನ್ನನ್ನು ನೋಡಿ ಹಾಸ್ಯ ಮಾಡುವಂತೆ ತೋರಿತು. ೧೫೫