ಪದ್ಮನಿ ಕಣ್ಣಿಗೆ ಬೀಳಲಿಲ್ಲ. ಸೈನಿಕರೆಲ್ಲರೂ ಹಾಗೆಯೇ ತಿರುಗಿ ಬಂದು ಒಡೆಯನ ಬಳಿ ಯಲ್ಲಿ ಸುಮ್ಮನೆ ನಿಂತುಕೊಂಡರು. ಬಳಿಕ ಅಲ್ಲಾವುದ್ದೀನನು ತಾನೇ ಪನಿಯನ್ನು ಹುಡುಕಲು ಹೊರಟನು. ಪ್ರತಿಯೊಂದು ಸ್ಥಳವನ್ನೂ ಉದ್ಯಾನವನ್ನೂ ಮಂದಿರವನ್ನೂ ಮಠವನ್ನೂ, ಹುಡುಕಿನೋಡಿದನು. ಎಲ್ಲಿಯ ಯಾರೂ ಸಿಕ್ಕಲಿಲ್ಲ. ಆಗ ಅವನು ಹತಾಶ ನಾಗಿ ಒಂದು ಸರೋವರದ ಬಳಿಗೆ ಬಂದು ಅದರ ಪಾವಟಿಗೆಯಲ್ಲಿ ತಲೆಯ ಮೇಲೆ ಕೈಯಿಟ್ಟುಕೊಂಡು ಕುಳಿತುಬಿಟ್ಟನು. ಆ ಸರೋವರದ ಒಂದು ಭಾಗ ದಲ್ಲಿ ಅಮೃತ ಶಿಲೆಯಿಂದ ಮಾಡಿದ ಗೋಮುಖ ಕೃತಿಯು ಬಾಯಿಯೊಳಗಿಂದ ನೀರು ಸುರಿಯುತ್ತಿತ್ತು, ದೂರದಲ್ಲಿ ಪರ್ವತದ ಒಂದು ಭಾಗದಲ್ಲಿ ಮಹಾಧವರಾಶಿಯು ಎದ್ದು ಆಕಾಶವನ್ನು ಮುಸುಕುತ್ತಿತ್ತು. ಅತ್ತಕಡೆಯ ಗಾಳಿಯು ಬಂದ ಕೂಡಲೆ ಒ೦ದು ಬಗೆಯ ಸುವಾಸನೆಯು ಬರುತ್ತಿತ, ಅಲ್ಲಾವುದ್ದೀನನು ಆ ಕಡೆಗೆ ಕಣ್ಣಿಟ್ಟು ನೋಡಿದನು. “ ಅದೇನು ? ” ಎಂದು ಅವನು ಉ ದ್ವೇಗದಿಂದ ಆ ಕಡೆಗೆ ಕೈತೋರಿಸಿ ಕೇಳಿದನು. ಪರಕ್ಷಣದಲ್ಲಿಯೇ ನೂರಾರು ಪರಾಣ ಸೈನಿಕರು ಆ ಕಡೆಗೆ ಮಹಾವೀಗ ದಿಂದ ನಡೆದರು, ಅಲಾವುದೀನನ ಅವರ ಹಿಂದೆ ನಡೆದನು ಹೋಗಿ ನೋ ಡುತ್ತಾರೆ, ಮಹಾ ಭಯಂಕರವಾದ ನೋಟವು ! ಆಳವಾದೊಂದು ಪರ್ವತದ ಕಂದರ; ಅದರಲ್ಲಿಯ ಬಹು ವಿಶಾಲವಾದ ಗಹ್ವರದ ಮುಖದಿಂದ ಚಂದನಾಗರುಗಳೇ ಮೊದಲಾದ ಸುಗಂಧ ದ್ರವ್ಯಗಳನ್ನು, ಸುಡುವ ವಾಸನೆಯು ಬರುತ್ತಿತ್ತು. ಧಗಧಗಿಸಿ ಉರಿಯುವ ಜ್ವಾಲೆಯು ಮೃತ್ಯು ವಿನ ನಾಲಿಗೆಯಂತೆ ಆಕಾಶದ ಕಡೆಗೆ ಏಳುತ್ತಲಿತ್ತು. ಅಲ್ಲಲ್ಲಿಗೆ ಧೂಮರಾಶಿ ಯು ಆ ಜ್ವಾಲೆಯನ್ನು ಮುಸುಕಿಕೊಂಡಿತ್ತು. ಗಹ್ವರದ ಬಾಗಿಲಲ್ಲಿ ಅರಿಸಿನ ಕುಂಕುಮಗಳೂ ಅಕ್ಷತೆಯೂ ಹರಿದು ಚಲ್ಲಿದ ಹೂವಿನ ಮಾಲೆಗಳೂ ಗುಂಪು ಗುಂಪಾಗಿ ಬಿದ್ದಿದ್ದುವು. ಇವನ್ನೆಲ್ಲ ನೋಡಿ ಅಲ್ಲಾವುದ್ದೀನನ ಅಂತರಂಗಕ್ಕೆ ಕೆಂಡದಂತೆ ಕಂಪ ಗಾದ ಕಬ್ಬಿಣದ ಸಲಾಖೆಯಿಂದ ಬರೆಯಿಟ್ಟಂತಾಯಿತು. ಅವನು ದೊಪ್ಪನೆ ೧೫೮
ಪುಟ:ಪದ್ಮಿನಿ .djvu/೧೭೩
ಗೋಚರ