ಆರನೆಯ ಖa ನೆಲದ ಮೇಲೆ ಬಿದ್ದುಬಿಟ್ಟನು, ಮತ್ತೊಂದು ಕ್ಷಣದ ತರುವಾಯ ಎದ್ದು ಆ ಅಗ್ನಿ ಕುಂಡದ ಕಡೆಗೆ ಉನ್ಮತನ ಹಾಗೆ ಧಾವಿಸಿ ಹೋದನು. ಅವನ ಸರದಾರ ನೊಬ್ಬನು ಅವನನ್ನು ತಡೆದು ನಿಲ್ಲಿಸಿದನು. ಆಗ ಬಾದಷಹನು ಹೇಳಿದನು:- “ಬೆಂಕಿಯನ್ನು ಆರಿಸಿರಿ. ನಮ್ಮಿನಿಯನ್ನು ಬದುಕಿಸಿದವರಿಗೆ ಲಕ್ಷ ಲಕ್ಷ ಮೊಹ ರುಗಳು ಇನಾಮಾಗಿ ದೊರೆಯುವುವು.”
- ಹಾಯಮ್ ! ನಮ್ಮಿನಿಯು ಈಗೆಲ್ಲಿರುವಳು ? ಅವಳ ಸ್ವರ್ಗದ ಮಾರ್ಗದಲ್ಲಿ ದ್ದು ಕೊಂಡು ನೀಚವರಾಣನ ಮರ್ಖ ತೆಯನ್ನು ನೋಡಿ ಹಾಸ್ಯ ಮಾಡುತ್ತ ಲಿರುವಳು. ಅಲ್ಲಾವುದ್ದಿ ನನ ಲಕ್ಷ ಲಕ್ಷ ಮೊಹರುಗಳೂ ಲಕ್ಷ ಲಕ್ಷ ಸೈನಿಕರೂ ಅವಳ ಒಂದು ಕೂದಲಿನಷ್ಟು ಕೂಡ ಬೆಲೆಬಾಳಲಿಲ್ಲ. ಆ ಸತೀಶಿರೋಮಣಿಯು ವರಾಣನ ಸಿಂಹಾಸನಾರ್ಧಕ್ಕೆ ಪ್ರತಿಯಾಗಿ ತನ್ನ ಒಂದು ಕೂದಲನ್ನಾದರೂ ಕೊಡಲು ಸಮ್ಮತಿಸಲಿಲ್ಲ. ಸತ್ವಶಾಲಿಗಳಾದವರ ರೀತಿಯೇ ಹೀಗೆ.
- ಈ ಮೂರು ದಿನಗಳಲ್ಲಿ ನಾಣರು ನಿರ್ಜನವಾದ ಆ ಹಾಳು ನಗರದಲ್ಲಿ ಸಂಚರಿಸಿ ಅಲ್ಲಿಯ ಯಾವತ್ತೂ ಸಂಪತ್ತನ್ನು ಕೂಡಿಸಿಕೊಂಡರು. ರಜ ಪೂತರು ಮೊದಲೇ ದೊಡ್ಡ ದೊಡ್ಡ ಕಟ್ಟಡಗಳನ್ನೂ ಉಪವನಗಳನ್ನೂ ಅರ್ಧಧ್ರ ಹಾಳುಮಾಡಿಬಿಟ್ಟಿದ್ದರು. ಉಳಿದದ್ದನ್ನು ಮರಾಣರು ನಾಶಮಾಡಿದರು ಅಂತೂ ಎರಡು ದಿನಗಳ ಕೆಳಗೆ ಮಹಾವೈಭವದಿಂದ ಒಪ್ಪುತ್ತಿದ್ದ ನಗರವು ಈಗ ಸ್ಮಶಾ ನವಾಗಿ ಹೋಯಿತು ! ವಿಧಿಯ ಮಹಿಮೆಯು ಅಗಾಧವಾದದ್ದು ! ಸೈ! ಇಲ್ಲಿಗೆ ಪತಿವ್ರಗ್ರೇಸರಳಾದ ಪದ್ಮನೀ ರಾಣಿಯ ಚರಿತ್ರವು ಮುಗಿ ಯಿತು. ನಮ್ಮಿನೀದೇವಿಯು ಸತೀಧರ್ಮದ ಮುಂದೆ ದಿಲ್ಲಿಯ ಪಠಾಣ ಬಾದಷ ಹನ ಸಾಮ್ರಾಜ್ಯವೂ ಅತುಲವಾದ ಸುಖಸಂಪತ್ತುಗಳೂ ಕೇವಲ ಕಸದ ಕಡ್ಡಿಗಳೆಂಬುದನ್ನು ತಮ್ಮ ಹಿಂದೂ ಭಗಿನಿಯರಿಗೆ ಇಂದಿಗೂ ಸಾರಿ ಉಪದೇಶಿ ಸುತ್ತಲಿರುವಳು 6. ಶುಭಂ ಭವತು ಇತರ