ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಆತ್ಮಸಮರ್ಪಣೆ.

ಭಾ . ಷ . ತಂದೆತಾಯ್ಗಳು ನೀನೆ; ಮಮತೆಯ |
ಬಂಧು ಬಳಗವು ನೀನೆ; ನೀನೇ -|
ಸಂದ ಧನಕನಕಗಳು ಸಕಲವು ಲೋಕನಾಯಕನೆ||
ಬೆಂದುದೆನ್ನಯ ಹೃದಯ, ಬಹುವಿಧ- |
ದಿಂದ ಬಳಲಿದೆನೀ ಪ್ರಪಂಚದಿ | ಬಂಧನವ ವರಿಹರಿಸಿ ರಕ್ಷಿನೊ ! ಜನನಮರಣಗಳ 3 ೧ || ಅರಿಯೆನೆ ಸತಿ ಸುತರ ಬಾಂಧವ | ರರಿಯೆನೈ ಗೃಹವಾಸ ಸೌಖ್ಯವ | ನರಿಯೆನ್ನೆ ವನವಾಸ ಜನತವಹೋಮಹವನಗಳ || ಹರಿಯೆ ನಾನಲ್ಲಯ್ಯೋ ! ಭೋಗಿಯು ! ಪರಿಯನರಿಯೆನು ಯೋಗಿವರ್ಯರ | ಅರಿಯದೆಯೆ ಮರೆಹೊಕ್ಕೆ ಮಾರ್ಗವತೋರು ! ಉದ್ಧರಿಸು || ೨tt ಉಪ್ಪರಿಗೆಯನು ನಾಳೆ ತಿಪ್ಪೆಯ | ತಿಪ್ಪೆಯುಷ್ಪರಿಗೆಯನು ಗೈಯುವೆ | ಬೊಪ್ಪ ! ನಿನ್ನಯ ಸೃಷ್ಟಿ ಚೇಷ್ಟೆಯನೆಂತು ಬಣ್ಣಿಪೆನು || ತಪ್ಪು ತಪ್ಪೆನಿಸದದು, ನಿಜವೇ | ತಪ್ಪೆನಿಸುವುದು ದೃಷ್ಟಿ ಭೇದದೆ ! ತಪ್ಪನೆಣಿಸದಲೊಪ್ಪಿಕೊ ಶ್ರೀಹರಿಯ ಸೇವಕನ 11 ೩ || ಹರಿಯೆ ನಿನ್ನೊಳು ಭಕ್ತಿಮುಕ್ತಿಗೆ 1 ಸರಳಮಾರ್ಗವಿದೆಂಬುದರಿಯದೆ | ತಿರುತಿರುಗಿ ಮಾಯಾಪ್ರಪಂಚದಿ ಸುತ್ತಿ ಬೇಸತ್ತೆ ! ಪರಮ ಭಕ್ತಿಯೊಳೀಗ ನಿನ್ನಯ ! ಚರಣ ತಲದಲಿ ಬಿದ್ದು ಬೇಡುವೆ || ಪರಿಹರಿಸೊ ನರಜನ್ಮವನು ಕೊಂಡೀ ಸುಮಾಂಜಲಿಯ || ೪ || ಸರಸ್ವತೀ ಮಂದಿರಮ್ ನಾರಾಯಣ.