ನಾಲ್ಕನೆಯ ಮುದ್ರಣ ಇದು ಬಹುಶಃ ಮೂರನೆಯ ಮುದ್ರಣದ ಪ್ರತಿಮುದ್ರಣವಾಗಿರುವ ದರಿಂದ ಹೆಚ್ಚಿಗಿನ್ನೇನು ಹೇಳುವುದಿದೆ? ಸದಯಹೃದಯರಾದ ವಿದ್ಯಾಧಿಕಾರಿಗಳ ಹಾಗು ಅಭಿಮಾನಿಗಳಾದ ಕನ್ನಡಿಗರ ಉದಾರ ಆಶ್ರಯದಿಂದ ನಮ್ಮ ಗ್ರಂಥ ಮಾಲೆಯೊಳಗಿನ ಗ್ರಂಥಗಳು ದಿನದಿನಕ್ಕೆ ಹೆಚ್ಚು ಹೆಚ್ಚು ಜನಪ್ರಿಯವಾಗ ಹತ್ತಿ ರುವುವ ತಂಬಾ ಆನಂದದ ವಿಷಯವು. ಮುಂಬಯಿ ಮದ್ರಾನ ಮೈಸೂರು ಮೊಗಲಾಯಿಗಳಲ್ಲಿ ಸೇರಿ ಬಹುಭಾಗ ವಾಗಿ ಬಹುರೂಪವನ್ನು ತಳೆದ ಕನ್ನಡ ತಾಯ್ತು ಡಿಯ ಏಕರೂಪತೆಯನ್ನು ಗುರಿ ಯಾಗಿಟ್ಟುಕೊಂಡು ಪ್ರಯತ್ನ ಪಡುತ್ತಿರುವ ಮುಂದಾಳುಗಳ ಮುಂದಿರುವ ಕೋರಿ ಕಗೆ ಅಳಿಲೆಯ ಭಕ್ತಿಯಿಂದ ಸಹಾಯಮಾಡುವುದು ನಮ್ಮ ಬಹುದಿನದ ಧೈಯ ವಾಗಿದೆ. ಹಿಂದೆ ಹೇಳಿದಂತೆ ನಮ್ಮ ಗ್ರಂಥಮಾಲೆಯೊಳಗಿನ ಪುಸ್ತಕಗಳನ್ನು ಈ ಎಲ್ಲ ಭಾಗಗಳ ಸರಕಾರದವರು ತಮ್ಮ ಹಾಯಸ್ಕೂಲುಗಳ ಮತ್ತು ವಿಶ್ವ ವಿದ್ಯಾಲಯಗಳ ಅಭ್ಯಾಸಕ್ರಮದಲ್ಲಿ ಆಗಾಗ ಪಠ್ಯವುಸ್ತಕವಾಗಿ ಆರಿಸಿಕೊಳ್ಳುತ್ತ ಬಂದಿರುವುದರಿಂದ ಈ ನಮ್ಮ ಧೈಯದ ಸಾಧನೆಗೆ ತುಂಬಾ ಸಹಾಯವಾಗಿ ರುವದು, ಮುಂಬಯಿ ಮದ್ರಾಸ ಮೈಸೂರ ಸರಕಾರಗಳಿಗೆ ಒಳಪಟ್ಟ ಹಾಯ್ ಸ್ಕೂಲುಗಳಲ್ಲಿ ಪಠ್ಯವಾಗಿ ಆರಿಸಿಕೊಂಡಂತೆ ಮುಂಬಯಿಯ ವಿಶ್ವವಿದ್ಯಾಲಯ ದವರು ೧೯೨೬ನೆಯ ಇಸ್ವಿಯ ಬಿ. ಎ. ಪರೀಕ್ಷೆಗೂ ಮದ್ರಾಸದ ವಿಶ್ವ ವಿದ್ಯಾ ಲಯದವರು ಇದೇ ವರ್ಷ ಇಂಟರ ಮಿಜಿಯೇಟಿ ವರೀಕ್ಷೆಗೂ ಇದನ್ನು ಓದಬೇ ಕೆಂದು ಗೊತ್ತುಪಡಿಸಿರುವರೆಂದು ಬಯಲು ಆನಂದವೆನಿಸುವುದು.* ಈ ರೀತಿಯಾಗಿ ಮಂದವಾಗಿಯೇ ಆದರೂ ಮುಂದಡಿಯಿಡುತ್ತಿರುವ ನಮ್ಮ ಗ್ರಂಥಮಾಲೆಯ ಕಾರ್ಯಕ್ಕೆ ಹಿಂದಿನಂತೆ ಸಹಾಯಮಾಡಲೆಳಸಿ ಅಲ್ಪಾವ ಧಿಯಲ್ಲಿ ಅಂದರೆ ಎರಡು ವಾರಗಳಲ್ಲಿ ಈ ನೂರಾಅರುವತ್ತು ವುಟಗಳ ಪುಸ್ತಕದ ಮುದ್ರಣ ಕಾರ್ಯವನ್ನು ನೆರವೇರಿಸಿ ಕೊಟ್ಟಿದ್ದಕ್ಕಾಗಿ ಕರ್ನಾಟಕ ಮುದ್ರಣಾ ಲಯದ ಸರ್ವಾಧಿಕಾರಿಗಳಾದ ಶ್ರೀ. ಯಶವಂತರಾಯರಿಗೂ ವ್ಯವಸ್ಥಾಪಕ ರಾದ ಶ್ರೀ ಮಾಧವರಾಯರಿಗೂ ವಂದನೆಗಳನ್ನು ಅರ್ಪಿಸಿ ಅಖಿಲ ಕರ್ನಾ ಟಕ ವ್ಯಾಪಿಯಾದ ಭಗವಂತನ ಕರುಣೆಯನ್ನು, ಕೋರಿ ಇಲ್ಲಿಗೆ ವಿರಮಿಸುವೆವು. ಶ್ರೀ, ಸರಸ್ವತೀ ಮಂದಿರಮ್ | ಸಾಧು ವಿಧೇಯ, ಧಾರವಾಡ, ಜನವರಿ ೧೯೨೭. ನಾರಾಯಣ,
ಪುಟ:ಪದ್ಮಿನಿ .djvu/೨೧
ಗೋಚರ