ಪದ್ಮನಿ. ಹಿಂದೂ ರಾಜರು ತಲೆಬಿಸಿ ನಡೆಯುತ್ತಿದ್ದರು. ಈಗ ಆ ದುರ್ಗಕ್ಕೆ ಎಂತಹ ಸಮಯವೊದಗಿದೆ ! ಅವರೆಲ್ಲ ಏನಾಗಿ ಹೋದರು ! ಇಲ್ಲ, ಯಾವುದೂ ಉಳಿ ದಿಲ್ಲ; ಕಾಲಪುರುಷನ ತುಳಿದಾಟದಿಂದ ಸಕಲವೂ ವಿಧ್ವಂಸವಾಗಿ ಹೋಗಿವೆ ! ಆದರೆ, ಆ ದುರ್ಗವಿರುವ ಸ್ಥಳದಲ್ಲಿ ಕಾಲಿಟ್ಟ ಮಾತ್ರಕ್ಕೆ, ಆ ಪುರಾತನ ದುರ್ಗದ ಹಳೆಯ ಕುರುಹುಗಳನ್ನು ನೋಡಿದ ಮಾತ್ರಕ್ಕೆ, ಹಿಂದೂಗಳ ಅಂತಃ ಕರಣದಲ್ಲಿ ಏನೋ ಒಂದು ಪವಿತ್ರವಾದ ಭಾವನೆಯು ಉದಯವಾಗುವುದು, ಮೈಯೊಳಗಿನ ರಕ್ತಪ್ರವಾಹವು ಬಿಸಿಯೇರುವುದು; ಮನಸ್ಸು ಮಂಕಾಗುವುದು, ದುಃಖಮಯವೋ ಸುಖಮಯವೋ, ಸಹಾನುಭೂತಿಪೂರ್ಣವೋ ರೋಷ ಪೂರ್ಣವೋ, ಆದ ಮನೋಭಾವನೆಯಿಂದ ಮನುಷ್ಯನು ತಟಸ್ಥನಾಗುವನು, ಆ ಸ್ಥಳದಲ್ಲಿ ನಡೆದುಹೋದ ಸಕಲ ಸಂಗತಿಗಳೂ ಒಂದೊಂದಾಗಿ, ಎರಡೆರ ಡಾಗಿ, ಹತ್ತಾಗಿ, ಹಲವಾಗಿ ಮನಸ್ಸಿನ ಮುಂದೆ ಬಂದು ನಿಲ್ಲುವುವು. ಕೊನೆಗೆ ಆ ವ್ಯಕ್ತಿಯು ಕೋಮಲಾಂತಃಕರಣಿಯಾಗಿದ್ದರೆ ' ಗೋಳೋ ' ಎಂದು ಅತ್ತು ಬಿಡುವನು, ತುಸು ಕರಿನ ಮನಸ್ಸಿನವನೂ ಧೀರನೂ ಆಗಿದ್ದರೆ ಅಂತರಂಗದಲ್ಲಿ ವೀರರಸವು ಪ್ರವಹಿಸತೊಡಗಿ ಸ್ವಾಭಿಮಾನ, ಸ್ವಜನಾಭಿಮಾನ, ಸ್ವದೇಶಾಭಿಮಾ ನಗಳೆಂಬ ಉಚ್ಚ, ಉಚ್ಛತರ, ಉಚ್ಚತಮವಾದ ಮನೋಭಾವನೆಗಳು ಜಾಗ್ರತ ಹೊಂದಿ, ತನ್ನ ಕರ್ತವ್ಯವನ್ನು ಸ್ಮರಿಸಿಕೊಂಡು, ದೃಢವಾದ ಪ್ರತಿಜ್ಞೆಗೈದು, ಆ ಮಹನೀಯರಾದ ರಾಜಪುತ್ರವೀರರನ್ನು ಅನುಕರಿಸಿ ನಡೆದು, ಆ ತನ್ನ ಪ್ರತಿಜ್ಞೆ ಯನ್ನು ಕೊನೆಗಾಣಿಸಿಕೊಂಡು, ಇಹಲೋಕದಲ್ಲಿ ಸ್ಥಿರವಾದ ಕೀರ್ತಿಯನ್ನೂ ಪರಲೋಕದಲ್ಲಿ ನಿಶ್ಚಿತವಾದ ಸುಖವನ್ನೂ ನಡೆಯುವನು. ಆರುನೂರಕ್ಕಿಂತ ತುಸು ಹೆಚ್ಚು ವರುಷಗಳ ಹಿಂದೆ ಒಂದುದಿನ ಅಕಸ್ಮಾ ತ್ಯಾಗಿ ಅಶ್ವಾರೋಹಿಯಾದ ಅತಿಥಿಯೊಬ್ಬನು ಚಿತ್ತೂರು ದುರ್ಗವನ್ನು ಪ್ರವೇಶಿ ಸಿದನು. ಆ ಕಾಲದಲ್ಲಿ ಚಿತ್ತೂರು ಸಕಲ ಸಮೃದ್ಧಿಗಳಿಂದ ವಿರಾಜಮಾನವಾ ಗಿತ್ತು. ನೆರೆಯಲ್ಲಿದ್ದ ಗುಜರಾಥದ ಅರಸನ ಸಂಗಡ ಕಲಹವುಂಟಾಗಿ ಅದೇ ತಾನೇ ಚಿತ್ತೂರಿನ ರಾಣನು ಆ ರಾಜ್ಯವನ್ನು ಜಯಿಸಿದ್ದನು. ನಾಲ್ಲೂಕಡೆಗೆ ವಿಜ ಯೋತ್ಸವಗಳು ಒಳ್ಳೆ ವೈಭವದಿಂದ ಜರುಗುತ್ತಿದ್ದುವು. ಚಿತ್ತೂರಿನೊಳಗಿನ ಪ್ರತಿಯೊಂದು ಮನೆಯಲ್ಲಿಯೂ ಆನಂದೋತ್ಸವಗಳು ನಡೆಯುತ್ತಿದ್ದುವು. ೧೦
ಪುಟ:ಪದ್ಮಿನಿ .djvu/೨೫
ಗೋಚರ