ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕದ್ಮನಿ. ಕಾಗದವನ್ನು ತೆಗೆದು ಓದಲಾರಂಭಿಸಿದನು. ನಿಜವಾಗಿಯೂ ಪತ್ರದ ಕೊನೆಯಲ್ಲಿ ದೊಡ್ಡ ದೊಡ್ಡ ಅಕ್ಷರಗಳಿಂದ “ಕರಣರಾಯ” ಎಂದು ಬರೆದಿತ್ತು. ರಾಣನು ಪತ್ರವನ್ನು ಓದತೊಡಗಿದನು. “ ಮಹಾರಾಣಾ, ಕೇಳಿದೆನು. ನಮ್ಮನ್ನು ಜಯಿಸಿದ ನೀನು ಉಲ್ಲಾಸದಿಂದ ಉಬ್ಬಿ ಮೆರೆಯ ತೊಡಗಿರುವೆಯಂತೆ; ಗುರ್ಜರವಿಜಯದ ಕುರುಹಿಗಾಗಿ ವಿಜಯಸ್ತಂಭವನ್ನು ಸ್ಥಾಪಿಸುವ ಸಂಭ್ರಮದಲ್ಲಿ ನಿದ್ರಾಹಾರಗಳನ್ನು ತೊರೆದಿರುವೆಯಂತೆ. ಆದರೆ ನೀನು ಚಿರಂಜೀವಿಯಲ್ಲವೆಂಬದನ್ನು ಮರೆಯಬೇಡ, ಈ ನಿನ್ನ ಐಶ್ವರ್ಯ ಪ್ರತಾ ಪಗಳೂ ಸ್ಥಿರವಾದುವೆಲ್ಲ. ನಿನಗೆ ಒದಗಬಹುದಾದ ಕಷ್ಟವನ್ನು ಯೋಚಿಸಿರು ವೆಯಾ? ತುಸು ದಿವಸಗಳಲ್ಲಿಯೇ ಅದನ್ನು ಕಣ್ಣಾರೆ ಕಾಣುವೆ, ಅನುಭವಿಸುವೆ. ನೀನು ಗುರ್ಜರ ಜಯದ ಜಯಸ್ತಂಭವನ್ನು ಸ್ಥಾಪಿಸುವದಕ್ಕೆ ಮುಂಚಿತವಾಗಿಯೆ ಇನ್ನೊಬ್ಬನು ಚಿತ್ತೂರುವಿಜಯದ ವಿಜಯ ಚಿಹ್ನವನ್ನು ಸ್ಥಾಪಿಸಿಬಿಡುವನು! ರಾಣಾ, ಆಗ ಈ ನಿನ್ನ ಆನಂದೋತ್ಸವಗಳೂ ಮನಸ್ಸಿನ ಸ್ಥಿತಿಯೂ ಎಂತಾಗ ಬಹುದು ? ಅಲ್ಲಾವುದ್ದೀನನು ಗುಜರಾಧವನ್ನು ಜಯಿಸಿರುವನು; ಅಲ್ಪಕಾಲದಲ್ಲಿಯೇ ಉಳಿದ ಹಿಂದೂ ರಾಜ್ಯಗಳನ್ನೂ ಜಯಿಸುವನು. ಚಿತ್ತೂರು ಅವನ ಕೈಯೊಳ ಗಿಂದ ಪಾರಾಗಲಾರದು. ನೀನು ವಿರೋಧಿಯಾದ ಗುರ್ಜರ ರಾಜನ ಸಮಾಧಿಯ ಮೇಲೆ ನಿಶ್ಚಿಂತನಾಗಿ ಕುಣಿದಾಡತೊಡಗಿರುವೆ; ಕುಣಿ, ಗುರ್ಜರೇಶ್ವರನನ್ನು ಪುನಃ ತಲೆಯೆತ್ತದಂತೆ ಮಾಡಿಬಿಟ್ಟಿರುವೆನೆಂಬ ಆನಂದದಿಂದ ಉತ್ಸವಗಳನ್ನು ಮಾಡತೊಡಗಿರುವೆ; ಮಾಡು. ಆದರೆ ಈ ಆನಂದವು ಸ್ಥಿರವಾಗಿ ಉಳಿಯಲಾರ ದೆಂಬುದನ್ನು ಮಾತ್ರ ಮರೆಯದಿರು, ಗುಜರಾಥವು ಇಷ್ಟು ಸುಲಭವಾಗಿ ಅಲ್ಲಾವುದ್ದೀನನ ಸ್ವಾಧೀನವಾಗ ಬಹುದೆಂದು ಯಾರು ತಿಳಿದಿದ್ದರು ? ಇದಕ್ಕೆ ಕೇವಲ ನಿನ್ನ ಕೃಪೆಯೇ ಕಾರ ಣವು ! ನೀನು ಆ ರೀತಿಯಾಗಿ ಗುರ್ಜರರಾಜನ ದೇಹದ ಎಲಬುಗಳನ್ನು ಮುರಿದು ನುಗ್ಗು ಮಾಡಿರದಿದ್ದರೆ ಅವನು ಈ ಯಃಕಶ್ಚಿತ್ ವಠಾಣನಿಗೆ ಮಣಿಯು ಆದ್ದನೇ ? ಇದೇ ನಮ್ಮ ವಿರೋಧದಿಂದಲೇ ಚಿತ್ತೂರು ಸ್ವಲ್ಪ ದಿವಸಗಳಲ್ಲಿ ܦܘ