ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಖ೦ಡ. ಧ್ವಂಸವಾಗಿ ಹೋಗುವುದು; ಇದಕ್ಕೆ ಸಂದೇಹಬೇಡ, “ ಚಿತ್ತೂರು ಹಾಳಾಗಿ ಹೋಗಲಿ!” ಎಂದು ಮನಃಪೂರ್ವಕವಾಗಿ ಶಪಿಸುತ್ತೇನೆ. ಶಾವವು ಫಲಿಸುವುದು, ರಾಣಾ ! ನಾನು ರಾಜ್ಯವನ್ನು ಕಳೆದುಕೊಂಡು ಭ್ರಾಂತನಾಗಿ ಬಾಯಿಗೆ ಬಂದಂತೆ ಪ್ರಲಪಿಸುತ್ತೇನೆಂದು ತಿಳಿಯಬೇಡ. ಈ ರಾಜ್ಯವೈಭವಗಳು ಕ್ಷಣ ಭಂಗುರವಾದುವು; ಎಷ್ಟೋ ಬರುತ್ತವೆ; ಎಷ್ಟೋ ಹೋಗುತ್ತವೆ. ಆದರೆ ಈ ಸಾರೆ ಗುರ್ಜರೇಶ್ವರನ ಒಂದು ಅಮೌಲ್ಯವಾದ ರತ್ನವನ್ನು ವರಾಣರು ಅಪಹರಿ ಸಿರುವರು. ಆ ರತ್ನವು ತಿರುಗಿ ನನ್ನ ನಿನ್ನ ಭಾಂಡಾರಕ್ಕೆ ಬರಲಾರದು, ಇಂದು 'ಹಿಂದೂ ರಮಣಿಯರ ಕೀರ್ತಿಮುಕುಟದೊಳಗಿನ ಒಂದು ರತ್ನವು ಉದುರಿ ಹೋಯಿತು. ಗುಜರಾಧದ ರಾಜನ ಗೃಹಲಕ್ಷ್ಮಿಯನ್ನು ಪರಾಣನು ಅಪಹರಿಸಿ ಕೊಂಡು ಹೋಗಿ ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡನು 1 ರಾಜ್ಯಲಕ್ಷ್ಮಿ ಯೊಂದೇ ಹೋಗಿದ್ದರೆ ನನಗೆ ವ್ಯಸನವಾಗುತ್ತಿರಲಿಲ್ಲ, ಅದರೆ ವರಾಣನು ಹಿಂದೂ ರಮಣಿಯರ ಮೂಗನ್ನು ಕೊಯ್ದು ಅವರ ಕೈಗೆ ಕನ್ನಡಿಯನ್ನು ಕೊಟ್ಟನಲ್ಲಾ' ಎಂದು ಕಳವಳವಡುವೆನು, ರಾಣಾ! ನಿನ್ನನ್ನು ನಿಂದಿಸುವುದಾಗಲಿ ನಿನ್ನ ಮೇಲೆ ದೋಷವನ್ನು ಆರೋ ಪಿಸುವುದಾಗಲಿ ಸದ್ಯದಲ್ಲಿ ನನಗೆ ಉದ್ದೇಶವಾಗಿಲ್ಲ, ಗಿಡದ ನೆರಳಿನಲ್ಲಿ ಬಿದ್ದು ಕಾಲಕಳೆಯಬೇಕಾಗಿರುವ ನಾನು ನಿನ್ನಂಧ ಮಹಾರಾಣನ ಮೇಲೆ ದೋಷವನ್ನು ಆರೋಪಿಸಲು ಎಷ್ಟರವನು ? ನನ್ನ ಉದ್ದೇಶವು ಬೇರೆಯೇ ಇರುವುದು, ಒಡೆದು ಹೇಳುತ್ತೇನೆ; ಕೇಳು. ನನಗೆ ನೀನು ಹೇಗೆ ಶತ್ರುವೋ ಹಾಗೆ ಅಲ್ಲಾವುದ್ದೀನನೂ ವೈರಿಯು. ನಾನು ಈ ಉಭಯ ವಿರೋಧಿಗಳನ್ನು ಒಂದೇ ಆಘಾತದಿಂದ ನಾಶಗೊಳಿಸಲು ಯೋಚಿಸಿ ಈಗ ಆ ಕಾರ್ಯವನ್ನು ಆರಂಭಿಸಿರುವೆನು. ನಾನು ನಿಮಗೂ ಪಠಾಣ ರಿಗೂ ದ್ವೇಷವನ್ನುಂಟು ಮಾಡುವೆನು, ವರಾಣರ ಹೊಡೆತದಿಂದ ರಜಪೂ ತರು ನಾಶವಾಗುವರು; ಅದರಂತೆ ರಜಪೂತರಿಂದ ವರಾಣರು ಒಂದುವೇಳೆ ಸಂಪೂರ್ಣವಾಗಿ ನಾಶವಾಗದೆ ಇದ್ದರೂ ಹತವೀರ್ಯರಾಗುವರು; ಸರಿ. ಆ ಬಳಿಕ ನಿಸ್ತೇಜರಾದ ಶತ್ರುಗಳನ್ನು ನಾನು ಅನ್ನೋ ವಾಯದಿಂದ ಮುರಿಬಡಿ ಯುವೆನು. ಅಲ್ಲಾವುದ್ದೀನನು ಚಿತ್ತೂರಿನಿಂದ ಸುರಕ್ಷಿತವಾಗಿ ತಿರುಗಿ ಬರಬಾರ ದೆಂಬ ಉದ್ದೇಶದಿಂದಲೇ ಇಂದು ಮುಂದಾಗಿ ಈ ವಿಚಾರವನ್ನು ನಿನಗೆ ತಿಳಿಸಿ ೧೩