ಮೊದಲನೆಯ ಖ೦ಡ ರಾಣನು ಅಕಾಲದಲ್ಲಿ • ತನ್ನ ಮನೆಗೆ ಬಂದುದನ್ನು ನೋಡಿ ಭೀಮ ಸಿಂಹನು ಅವನನ್ನು ಕುರಿತುಃ-ರಾಣಾಜೇ, ಏನಾದರೂ ವಿಶೇಷ ವರ್ತಮಾನ ವಿದೆಯೇ? ” ಎಂದು ಕೇಳಿದನು. ರಾಣ:- ಕಾಕಾಜೆಯವರೇ, ವರ್ತಮಾನವೇನೋ ಸಾಮಾನ್ಯವಾದು ದಲ್ಲ; ವಿಶೇಷ ಗದ್ದಲವುಂಟಾಗುವಂತೆ ತೋರುತ್ತದೆ. ಪುನಃ ಯುದ್ಧವು ಸಂಘಟ ಸುವುದು ! ಭೀಮಸಿಂಹ:- ಯುದ್ಧವು ಸಂಘಟಿಸುವುದೋ ? ಇದಕ್ಕೇಕೆ ಇಷ್ಟೊಂದು ಯೋಚನೆ ? ಅಂಧ ಪ್ರಸಂಗವೇ ಇದ್ದರೆ ಯುದ್ಧವನ್ನು ಮಾಡೇ ಮಾಡೋಣವಂತೆ ! ಕ್ಷತ್ರಿಯರಾಗಿ ಯುದ್ಧಕ್ಕೆ ಅಂಜಿದರೆ ಹೇಗೆ? ಆದರೆ ನಡೆದು ದಾದರೂ ಏನು ? ಹೇಳಿರಿ; ನೋಡೋಣ. ಆಗ ರಾಣನು ಗುರ್ಜರೇಶ್ವರನ ಪತ್ರವನ್ನು ಕೈಗೆ ಕೊಟ್ಟನು. ಅದನ್ನು ಓದಿದೊಡನೆಯೇ ಭೀಮಸಿಂಹನ ಮುಖವು ಕಪ್ಪಾಯಿತು, ರಣಭೂಮಿಯಲ್ಲಿ ಎದೆಯೊಳಗೆ ವೈರಿಗಳ ಖಡ್ಗವು ನೆಟ್ಟರೂ ಪಿಂತೆಗೆಯದ ಭೀಮಸಿಂಹನ ಹೃದ ಯವು ಗುರ್ಜರೇಶ್ವರನ ಪತ್ರದೊಳಗಿನ ಒಂದೇ ಒಂದು ದೈನ್ಯವಾಣಿಯಿಂದ ಸೀಳಿ ಹೋಯಿತು ! ಅವನು:-ಈ ಪತ್ರವನ್ನು ಯಾರು ತೆಗೆದುಕೊಂಡು ಬಂದರು?” ಎಂದು ಕೇಳಿದನು. ರಾಣ:- ಒಬ್ಬ ರಾಜದೂತನು ತೆಗೆದುಕೊಂಡು ಬಂದಿರುವನು; ಅಪ್ಪಣೆ ಯಾದರೆ ಅವನನ್ನು ಇಲ್ಲಿಗೆ ಕರೆಯಿಸುವೆನು. ನಾನೂ ಅವನನ್ನು ಇನ್ನೂ ನೋಡಿಲ್ಲ. ಭೀಮಸಿಂಹ:- ಒಳ್ಳೆಯದೇ ಆಯಿತು, ನಾವು ಏನು ಮಾಡಬೇಕೆಂಬು ದನ್ನು ಮೊದಲು ವಿಚಾರಮಾಡಿ ಆ ಮೇಲೆ ದೂತನನ್ನು ಕರೆಯಿಸೋಣ. ಕನ ಲಾದೇವಿಯು ಈ ರೀತಿಯಾಗಿ ತನ್ನ ಸರ್ವಸ್ವವನ್ನೂ ನಾಶಮಾಡಿಕೊಂಡಳೇ ! ರಾಣ: ಅವಳೇನು ಮಾಡುವಳು? ವರಾಣರು ಅವಳನ್ನು ಬಲಾತ್ಕಾರ ದಿಂದ ಅವಹರಿಸಿಕೊಂಡು ಹೋದರು. ಈ ಸಾರೆ ಯುದ್ಧವಾದರೆ ವಠಾಣರು ಚಿತ್ತೂರಿಗೆ ಬರುವರು; ಬರಲಿ, ನಾವೂ ಒಂದುಬಾರಿ ಅಲ್ಲಾವುದ್ದೀನನು ಎಂತಹ ನೀಚನೆಂಬುದನ್ನು ನೋಡೋಣ. ೧೭
ಪುಟ:ಪದ್ಮಿನಿ .djvu/೩೨
ಗೋಚರ