ಮೊದಲನಯ ಬ೦ದ ಮೂರನೆಯ ಪರಿಚ್ಛೇದ. S$$ # ಅ ದೇ ದಿನ ರಾತ್ರಿಯಲ್ಲಿ ಚಿತ್ತೂರು ದುರ್ಗದೊಳಗಿನ ಅಮೃತಶಿಲೆ @@@@@@ ಯಿಂದ ಕಟ್ಟಿದ ಸುಂದರವಾದೊಂದು ಮಂದಿರದ ಮಾಳಿಗೆಯ ಮೇಲೆ ಅತ್ಯಂತ ಲಾವಣ್ಯವತಿಯಾದ ರಮಣಿಯೊಬ್ಬಳು ನಿಂತುಕೊಂಡು ಆಕಾ ಶದ ಕಡೆಗೆ ನೋಡುತ್ತಲಿದ್ದಳು. ಅಂದಿನ ಮನೋಹರವಾದ ಬೆಳದಿಂಗಳಿನಲ್ಲಿ ಸೃಷ್ಟಿಯೇ ನಗುತ್ತಿದ್ದಂತೆ ಭಾಸವಾಗುತ್ತಿತ್ತು. ರಾತ್ರಿಯು ಬಹಳ ಹೊತ್ತಾಗಿತ್ತು; ಬಹಳ ಗಾಂಭೀರ್ಯ ವನ್ನು ವಹಿಸಿತ್ತು. ಊರೊಳಗಿನ ಮನೆಗಳಲ್ಲಿ ಒಂದೂ ದೀಪವಿರಲಿಲ್ಲ. ಜನರೆಲ್ಲರೂ ನಿದ್ದೆಗೈದಿದ್ದರು. ದೂರದಲ್ಲಿ ದುರ್ಗದ ಶಿಖರದ ಬಳಿಯಲ್ಲಿದ್ದ ದೀವವೊಂದು ಆಕಾಶದೊಳಗಿನ ಅನೇಕ ತಾರೆಗಳೊಂದಿಗೆ ಕೂಡಿಕೊಂಡು “ಮಿಣಿಮಿಣಿ? ಮಿಣಿ ಗುಟ್ಟುತ್ತಿತ್ತು, ರಾಜಮಾರ್ಗಗಳಲ್ಲಿ ಅಲ್ಲೊಂದು ಇಲ್ಲೊಂದು ದೀವಗಳು ಬೆಳ ದಿಂಗಳಿನಿಂದ ಮಲಿನವಾಗಿ ಹೋಗಿ ಕಂಡೂ ಕಾಣಿಸದಂತಿದ್ದುವು. ಇಂಥ ಸಮಯದಲ್ಲಿ ಭವ್ಯಾ ಕಾರದ ವುರುಷನೊಬ್ಬನು ಮೆಲ್ಲಮೆಲ್ಲನೆ ಬಂದು ಆ ರಮಣಿಯ ಹಿಂಭಾಗದಲ್ಲಿ ನಿಂತುಕೊಂಡನು. ಅವನು ಬೆಳದಿಂಗಳಿನೊಡನೆ ಸಮ್ಮಿಶ್ರವಾಗಿ ಹೋಗಿದ್ದ ಆ ರಮಣಿಯ ಮೈಕಾಂತಿಯನ್ನೂ ರೂಪರಾಶಿಯನ್ನೂ ಎಷ್ಟೋ ಹೊತ್ತಿನವರೆಗೆ ನಿರೀಕ್ಷಿಸುತ್ತಲಿದ್ದನು. ಅವಳು ಆ ಕಾಲದ ಮನೋಹರ ವಾದ ಸೃಷ್ಟಿಯ ಸೌಂದರ್ಯವನ್ನು ನಿರೀಕ್ಷಿಸುವುದರಲ್ಲಿ ಮಗ್ನಳಾಗಿ ಹೋಗಿದ್ದು ದರಿಂದ ಆಕೆಗೆ ಅವನು ಕಾಣಿಸಲಿಲ್ಲ ದೂರದಲ್ಲಿದ್ದ ಆರಾವಲೀ ವರ್ವತದ ಭವ್ಯ ವಾದ ಕಮ್ಮೆಯ ಮೇಲ್ಗಡೆಯಲ್ಲಿ ಅದಕ್ಕಿಂತಲೂ ಅಂಧಕಾರಮಯವಾದ ಮಹಾ ಮೇಘವೊಂದು ತೇಲಿ ಬರುತ್ತಲಿತ್ತು. ರಮಣಿಯು ಅದನ್ನು ನಿರೀಕ್ಷಿಸು ತಲಿದ್ದಳು. ಪೂರ್ವೋಕ್ರಪುರುಷನು ಬಹಳ ಹೊತ್ತಿನವರೆಗೆ ಹಾಗೆಯೇ ನಿಂತಿದ್ದನು; ಆದರೂ ಆ ರಮಣಿಯು ಅವನ ಕಡೆಗೆ ತಿರುಗಿ ನೋಡುವ ಲಕ್ಷಣ ತೋರಲಿಲ್ಲ. ಅದರಿಂದ ಅವನು ಬೇಸತ್ತು, ಒಮ್ಮಿಂದೊಮ್ಮೆ ಮುಂಬರಿದು ಹೋಗಿ ಅವಳ ೧೯
ಪುಟ:ಪದ್ಮಿನಿ .djvu/೩೪
ಗೋಚರ