ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ದೀನಿ. ಕೈಗಳನ್ನು ಹಿಡಿದುಕೊಂಡು,-“ ಪದ್ಮನೀ, ಏನು ನೋಡುತ್ತೀಯೆ ? ” ಎಂದು ಕೇಳಿದನು. ಆಗ ರಮಣಿಯು ತಿರುಗಿ ನೋಡಿದಳು. ತನ್ನ ಸುಂದರವಾದ, ಆಕ ರ್ಣಾ೦ತವಿತವಾದ ಕಣ್ಣುಗಳ ದೃಷ್ಟಿಯನ್ನು ಸ್ವಲ್ಪ ಮೇಲಕ್ಕೇರಿಸಿ ಅನಿಮಿಷ ನೇತ್ರೆಯಗಿ ಕ್ಷಣಕಾಲದವರೆಗೆ ಅವನ ಮುಖವನ್ನು ನೋಡುತ್ತ ನಿಂತುಕೊಂ ಡಳು. ತರುವಾಯ ಮುಖವನ್ನು ತಿರುಗಿಸಿ ಆರಾವಲೀ ಪರ್ವತದ ಮೇಲ್ಬಾಗ ದಲ್ಲಿ ಏರಿಬರುತ್ತಲಿರುವ ಮೇಘರಾಶಿಯನ್ನು ನೋಡುತ್ತ- ಅಹಹ ! ಎಂಥ ಕಾರ್ಮುಗಿಲು!” ಎಂದಳು. ಇದನ್ನು ಕೇಳಿ ಆ ವುರುಷನು ದೀರ್ಘವಾದೊಂದು ನಿಟ್ಟುಸುರು ಬಿಟ್ಟು “ಪದ್ಮನೀ ಭರತಖಂಡದ ಆನಂದಾಕಾಶದಲ್ಲಿಯೂ ಇಂಥದೇ ಒಂದು ಕಾರ್ವೆ ಡವು ಎದ್ದಿರುವುದು; ಅದೂ ಹೀಗೆಯೇ ದಿನದಿನಕ್ಕೆ ಬೆಳೆಯುತ್ತ ನಡೆದಿರು ವುದು! ” ಎಂದನು. ರಮಣಿಯು ವಿಸ್ಮಯಗೊಂಡು ಪುರುಷನ ಮುಖವನ್ನು ನೋಡತೊಡಗಿ ದಳು. ಕ್ಷಣಕಾಲದ ಮೇಲೆ ಅವಳುಃ ಹೀಗೇಕೆ ಅವಲಕ್ಷಣದ ಮಾತಾಡು ವಿರಿ? ” ಎಂದಳು. ಪುರುಷನು ಪುನಃ ನಿಟ್ಟುಸುರುಬಿಟ್ಟು:-ಅವಲಕ್ಷಣವಾಗಿದ್ದರೂ ಸತ್ಯ ವಾದ ಮಾತನ್ನೇ ಹೇಳಿದೆನು, ನಮ್ಮಿನೀ ! ಅಲ್ಲಾವುದ್ದೀನನು ದಿನದಿನಕ್ಕೆ ಪ್ರಬಲ ನಾಗುತ್ತ ನಡೆದಿರುವನು ಅವನು ಗುಜರಾಧವನ್ನು ಜಯಿಸಿದನು' ” ಎಂದನು. “ಹಾ ! ಗುರ್ಜರೇಶ್ವರನು ನಿಜವಾಗಿಯೂ ದೈವಗೇಡಿಯು ' ಚಿತ್ತೂರಿನ ವರ ಕೈಯಲ್ಲಿ ಸಿಲುಕಿ ಅಂದು ಆ ರೀತಿಯಾಗಿ ನುಗ್ಯಾಗಿದ್ದನು. ಇಂದು ಪುನಃ ಪರಾಣರ ಕೈಗೆ ಸಿಲುಕಿದನೇ !” ಎಂದು ಹೇಳುತ್ತ ನಮ್ಮಿನಿಯ ನಿಟ್ಟು ಸುರುಗ ರೆದಳು ಭೀಮಸಿಂಹ: ನಿಜವಾಗಿ ನೋಡಿದರೆ ಇದರಲ್ಲಿ ನಾವೇ ಅವರಾಧಿ ಗಳು. ಗುರ್ಜರೇಶ್ವರನನ್ನು ಯಾರು ಇಷ್ಟೊಂದು ಶಕ್ತಿಹೀನನನ್ನಾಗಿ ಮಾಡಿದರು? ಚಿತ್ತೂರು ಈ ಭಾವಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಹೊಂದಲೇಬೇಕಾಗುವುದು. ಕರಣರಾಯನೂ ಇಂದು ಅದನ್ನೇ ತಿಳಿಸಿರುವನು, “ಕರಣರಾಯ! ಗುಜರಾಧಿಪತಿಯಾದ ಕರಣರಾಯನ ವಿಚಾರವೇನು ? ಅವನು ಈಗೆಲ್ಲಿರುವನು ? ” ಎಂದು ನಮ್ಮಿನಿಯು ಹುಬ್ಬುಗಳನ್ನೇರಿಸಿ ಕೇಳಿದಳು. 50