ಮೊದಲನಯ ಖ೦ಡ k kkkkk & #ಅ # ನಾಲ್ಕನೆಯ ಪರಿಚ್ಛೇವ.
- # ಕಥೆ ಳಗಡೆಗೆ ಮನೋಹರವಾದೊಂದು ಚಿಕ್ಕಮನೆಯಿತ್ತು; ಅದರೊ *** ** ಳಗೆ ಹಸ್ತಿದಂತದಿಂದಲೂ ಬೆಳ್ಳಿ ಬಂಗಾರಗಳಿಂದಲೂ ಮಾಡಿದ ಅನೇಕ ಪೀರಗಳನ್ನು ಅಲ್ಲಲ್ಲಿಗೆ ವ್ಯವಸ್ಥಿತವಾಗಿ ಇಟ್ಟಿದ್ದರು. ಮೇಜಿನ ಮೇಲೆ ಪುಷ್ಪ ಪಾತ್ರೆಯಲ್ಲಿ ನಾನಾತರದ ಹೂಗಳು ಗಮಗಮಿಸುತ್ತಿದ್ದುವು. ಹತ್ತರದಲ್ಲಿ ಯೇ ಸುಂದರವಾದೊಂದು ಬಂಗಾರದ ದೀಪಸ್ತಂಭದಲ್ಲಿ ದೀಪವು ಸುಗಂಧದ ತೈಲದಿಂದ ಜ್ವಲಿಸುತ್ತಲಿತ್ತು. ಭೀಮ ಸಿಂಹನ ಒಳಗೆ ಬಂದಕೂಡಲೆ ಆ ದೀಪದ ಬತ್ತಿಯನ್ನು ಮುಂದಕ್ಕೆ ಚಾಚಿ, ಮತ್ತಿಷ್ಟು ಬೆಳಕು ಮಾಡಿದನು. ಆದರೆ ಆ ದೀವದ ಕಾಂತಿಯಿಂದಲೂ ನಮ್ಮಿನಿಯ ಮುಖಕಾಂತಿಯು ಬೆಳಗಲಿಲ್ಲ.
ಭೀಮಸಿಂಹನು ಒಂದು ಕಿಟಕಿಯ ಬಳಿಗೆ ಹೋಗಿ ಅಲ್ಲಿದ್ದ ಆಸನವನ್ನು ಎಳೆದುಕೊಂಡು ಅದರ ಮೇಲೆ ಕುಳಿತುಕೊಂಡನು, ನಮ್ಮಿನಿಯ ಅವನ ಬಳಿ ಯಲ್ಲಿಯೇ ಕುಳಿತಳು. ಬಳಿಕ ಭೀಮಸಿಂಹನು ಗುರ್ಜರೇಶ್ವರನ ದೂತನು ಹೇಳಿದ ಎಲ್ಲ ವಿಚಾರಗಳನ್ನೂ ಆತನು ತಂದಿದ್ದ ಪತ್ರದೊಳಗಿನ ಸಂಗತಿಗಳನ್ನೂ ಒಂದೂ ಉಳಿಯದಂತೆ ನಮ್ಮಿನಿಗೆ ಹೇಳತೊಡಗಿದನು. ಅದನ್ನು ಹೇಳಹೇಳುತ್ತ ಅವನು:- “ವಡ್ಮಿನೀ, ನೀನೂ ಒಂದು ದಿನ ಅಲ್ಲಾವುದ್ದೀನನ ಬೇಗಮಳಾಗ ಬೇಕಾಗುವುದು ! ಅವನು ನಿನ್ನ ಸಲುವಾಗಿಯೇ ಇಷ್ಟೆಲ್ಲ ಸಿದ್ಧತೆಯನ್ನು ನಡೆ ಯಿಸಿರುವನಂತೆ, ಕಮಲಾದೇವಿಯಂತೆ ನೀನೂ ವರಾಣರಾಜನ ಬಲಭಾಗದಲ್ಲಿ ಕುಳಿತು ರಾಜರಾಜೇಶ್ವರಿಯಾಗಿ ವಿರಾಜಿಸಬಹುದು !... ” ಎಂಧ ಕ್ರೂರವಾದ ರೂವವದು ! ನಮ್ಮಿನಿಯ ಮುಖವು ಕೆಂಪಡರಿತು. ಅವಳು:-“ಚಿತ್ತೂರಿಗೆ ಬಂದರೆ ಅಲ್ಲಾವುದ್ದೀನನು ಈ ಸಾರೆ ಅಸಾಧಾರಣ ವಾದೊಂದು ನೀತಿಯನ್ನು ಕಲಿತುಕೊಂಡು ಹೋಗುವನು. ಭರತಖಂಡದಲ್ಲಿ ಎಲ್ಲರೂ ಕರಣರಾಯ ಕಮಲಾದೇವಿಯರೇ ಅಲ್ಲವೆಂಬುದನ್ನು ನಾವು ಅವನಿಗೆ ಮನಗಾಣಿಸಿಕೊಡುವವು. ಈಸಲ ನಾವು ಕಮಲೆಯ ಅವಮಾನದ ಮುಖ್ಯ ತೀರಿಸಿಕೊಳ್ಳದೆ ಎಂದೂ ಬಿಡಲಿಕ್ಕಿಲ್ಲ ! ” ಎಂದಳು, ೨೩