ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮನಿ. ಭೀಮಸಿಂಹನು ಈ ಮಾತಿಗೆ ಏನೂ ಉತ್ತರ ಹೇಳಲಿಲ್ಲ. ಅವನು ಬೇ” ರೊಂದು ವಿಚಾರವನ್ನು ಮಾಡುತ್ತಿದ್ದನು. ಅವನ ಮನಸ್ಸಿನಲ್ಲಿ ಒಂದೊಂದೇ ಹೊಸ ಯೋಚನೆಗಳು ಜಾಗೃತಹೊಂದುತ್ತಲಿದ್ದುವು. ಅವನ ಅಂತರಂಗದಲ್ಲಿ ಯ ಒಮ್ಮೆ ಈ ವಿಚಾರವು ಬಂದಿತ್ತು. ಅವನು:-“ಪದ್ಮನೀ, ನಿನಗೆ ಕಮಲಾದೇ ವಿಯ ದಾಸಿಯಾದ ಆ ಮತಿಯಾಳ ನೆನಪಿದೆಯೇ ? ಇಂದಿಗೆ ಆರು ವರುಷಗಳ ಮೊದಲು ನಾವು ಕಮಲಾದೇವಿಯನ್ನು ನೋಡಿಕೊಂಡುಬರಲು ಹೋದಾಗ ಅವಳ ಸಂಗಡ ಇದ್ದಳಲ್ಲವೇ ? ಆಗ ನೀನು ಕಮಲೆಯ ಬಳಿಯಲ್ಲಿ ಮುಸಲ್ಮಾನ ದಾಸಿಯು ಇರುವುದನ್ನು ನೋಡಿ ಆಶ್ಚರ್ಯಚಕಿತಳಾಗಿದ್ದೆ. ಅದೇ ಮತಿ ಯಾಳೇ ಇಷ್ಟೆಲ್ಲ ಅನರ್ಥಕ್ಕೆ ಕಾರಣಳಾದಳಂತೆ ತೋರುವುದು ! ” ಎಂದನು. ಪನಿಯು ಆಶ್ಚರ್ಯವಿಸ್ಮಯಗಳಿಂದ:-ಆ ದಾಸಿಯನ್ನು ನೋಡಿಯೇ ನಾನು ಕಮಲೆಗೆ “ಕಮಲೇ, ಈ ಮೈಂಛಳ ಸಹವಾಸದಿಂದ ನೀನು ಹಾಳಾಗಿ ಹೋಗುವೆ.” ಎಂದು ಹೇಳಿದ್ದೇನು, ಆ ನನ್ನ ಭವಿಷ್ಯದ್ವಾಣಿಯೇ ಫಲಿಸಿತೆಂದು ತೋರುತ್ತದೆ ” ಎಂದಳು. ಭೀಮಸಿಂಹ:-ಆಶ್ಚರ್ಯವೇನು? ಆ ದಾಸಿಯ ರೂಪಲಾವಣ್ಯಗಳನ್ನೂ, ಒನಪುವೈಯಾರಗಳನ್ನೂ ಅರಮನೆಯೊಳಗಿನ ಅವಳ ಅಧಿಕಾರ ವೈಭವಗಳನ್ನೂ, ನೋಡಿ, ಇವಳಿಂದಲೇ ಗುರ್ಜರೇಶ್ವರನು ಒಂದಿಲ್ಲೊಂದು ದಿನ ಅಧಃಪತಿತನಾಗ ಬಹುದೆಂದು ನಾನೂ ಯೋಚಿಸಿದ್ದೆನು. ಆದರೆ ವ್ಯಾಪಾರವು ಈ ರೀತಿಯಾಗಿ ಘಟಿಸಬಹುದೆಂದು ಮಾತ್ರ ಯಾರೂ ಯೋಚಿಸಿರಲಿಲ್ಲ. ಹದಿನಿ:-ನಾನೂ ತಿಳಿದಿರಲಿಲ್ಲ. ತಾವು ಮನಸ್ಸಿನಲ್ಲಿ ಗುರ್ಜರೇಶ್ವರನು ಅವಳ ಆ ಸೌಂದರ್ಯದಿಂದ ವತಿತನಾಗಿ ಹೋಗಬಹುದೆಂದು ಯೋಚಿಸಿದಂತೆ ನಾನೂ ತಿಳಿದಿದ್ದೆನು. ಆದರೆ ಈಗ ಎನೇನು ನಡೆದುವಂತೆ ? ಭೀಮಸಿಂಹ:-ಇನ್ನೇನು ಆಗುವುದು?-ಕಮಲೆಯು ಪತಿಯನ್ನು ಪತಿ ತನಾಗಗೊಡಲಿಲ್ಲ; ತಾನೇ ಆ ಪಾವನಂಕದಲ್ಲಿ ಧುಮ್ಮಿಕ್ಕಿದಳು, ಆ ಮತಿಯಾಳೇ ಕಮಲೆಯ ಕೈಯನ್ನು ಹಿಡಿದುಕೊಂಡು ನರಕದ ಮಾರ್ಗದಲ್ಲಿ ಮುಂಬರಿದಳು ! ನಮ್ಮಿನಿಯ ಮುಖದಿಂದ ಮಾತುಗಳು ಸರಿಯಾಗಿ ಹೊರಡಲಿಲ್ಲ. ಅವಳು ಅಸ್ಪುಟವಾದ ಸ್ವರದಿಂದ ಹೇಗೆಹೇಗೋ ಮಾತಾಡತೊಡಗಿದಳು:- ಸರಳ