ನದಲನೆಯ ಖ೦ಡ ಹೃದಯದವಳೂ ಸುಶೀಲಳೂ ಕುಸುಮಕೋಮಲೆಯೂ ಆದ ಆ ನನ್ನ ಕಮಲೆ ಯಿಂದ ಇಂಧ ಅವರಾಧವು ಘಟಿಸಿತೇ ? ಯಾಕೋ ನನ್ನ ಮನಸ್ಸಿಗೆ ಈ ಮಾತು ಸರಿಯೆನಿಸುವದಿಲ್ಲ, ” ಭೀಮಸಿಂಹನು ನಮ್ಮಿನಿಯ ಕೈಯನ್ನು ಹಿಡಿದೆಳೆದು, ಕೋಮಲವಾದ ಸ್ವರದಿಂದ_“ಪದ್ಮನೀ ! ನಿನಗೆ ಇನ್ನೂ ಗೊತ್ತಿಲ್ಲ. ಸರಳಸ್ವಭಾವದ ಅಬಲೆ ಯರು ಕುಹಕರ ಕುಹಕ ತಂತ್ರಗಳಿಗೆ ಒಮ್ಮೆ ವಶವಾದರೆ ಅವರಿಗೆ ಈ ಜನ್ಮದಲ್ಲಿ ಬಿಡುಗಡೆಯೇ ಇರಲಾರದು. ಇರಲಿ, ಈಗ ಆ ವಿಚಾರವನ್ನು ಏಕೆ ಮಾಡ ಬೇಕು? ಮಲಗೋಣ, ರಾತ್ರಿಯು ಬಹಳ ಹೊತ್ತಾಯಿತು, ಆ ! ಕೇಳಿದೆಯಾ, ಚಿತ್ತೂರಿನ ದೇವಿಯ ಮಂದಿರದಲ್ಲಿ ಮೂರನೆಯ ಜಾವದ ನೌಬತ್ತಿನ ಶಬ್ದವಾಗ ತೊಡಗಿದೆ. ಇಂತಹ ಅಪರಾತ್ರಿಯಲ್ಲಿ ನೀನು ಇಲ್ಲಿ ಬಂದು ನಿಂತು ಏನು ನೋಡು ತಲಿದ್ದೆ ? ” ಎಂದನು. ಸದ್ವಿನಿ:-ಇಂದು ಬೆಳಗಿನಿಂದಲೂ ತಮ್ಮ ದರ್ಶನವೇ ಇಲ್ಲ. ಆದುದ ರಿಂದ ಬೇಸರವಾಗಿದ್ದಿತು. ಬಳಿಕ ಆ ದಂಪತಿಗಳು ಶಯ್ಯಾಗೃಹವನ್ನು ಸೇರಿ ಮಲಗಿದರು. ಗುರ್ಜ ರೇಶ್ವರನ ದೂತನ ಆಗಮನ, ಕರಣರಾಯನ ವತ್ರ, ರಾಣನು ತನ್ನ ಬಳಿಗೆ ಬಂದುದು, ರಾಣನೂ ತಾನೂ ಗುವ ಆಲೋಚನೆ ಮಾಡಿದುದು, ಭವಿ ಪ್ಯದ ಯುದ್ದದ ಯೋಚನೆ ಇವನ್ನೆಲ್ಲಾ ಭೀಮಸಿಂಹನು ನಮ್ಮಿನಿಗೆ ಅರುಹಿದನು. ಆ ಹೊತ್ತು ಭೀಮಸಿಂಹನ ಅರಮನೆಯಲ್ಲಿ ಮಾಡಿದ ಅಡಿಗೆಯು ಹಾಗೆಯೇ ಉಳಿದಿತ್ತು. ಎಷ್ಟೋ ಹೊತ್ತಿನ ಮೇಲೆ ಗಾಳಿಯಿಂದ ದೀವವು ತಾನಾ ಗಿಯೇ ಆರಿ ಹೋಯಿತು, ಅದು ಭೀಮ ಸಿಂಹನಿಗೂ ಪದ್ಮನಿಗೂ ಗೊತ್ತೇ ಆಗಲಿಲ್ಲ. ೨೫
ಪುಟ:ಪದ್ಮಿನಿ .djvu/೪೦
ಗೋಚರ