ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲ ನೆಯ ಖ೦2 ಭೀಮಸಿಂಹನು ನಕ್ಕನು ; ಮತ್ತು “ಅದೇನೋ ಸತ್ಯವಾದ ಮಾತೇ ಸರಿ. ಅದರಿಂದ ನನಗಾಗುವ ಹಾನಿಯಾದರೂ ಏನು? ಲಕ್ಷ್ಮೀ-ಸರಸ್ವತಿಯರು ಕೂಡಿ ವಾಸಿಸುವುದು ಜಗತ್ತಿನಲ್ಲಿ ತೀರ ವಿರಳ. ಹೀಗಿದ್ದು ನಮ್ಮ ಮನೆಯಲ್ಲಿ ಅವರಿ ಬ್ಬರೂ ಐಕ್ಯದಿಂದಿದ್ದರೆ ನನಗೆ ಇನ್ನಷ್ಟು ಹಿತವೇ ಸರಿ, ಇರಲಿ, ಆ ಹಾಳು ಹರಟೆ. ಈಗ ಬರೆಯುತ್ತಿದ್ದ ಕಾಗದವನ್ನೇನು ಮಾಡಿದೆ? ” ಎಂದು ಕೇಳಿದನು. ನಾಚಿಕೆಯಿಂದ ನಮ್ಮಿನಿಯ ಮುಖವು ಸ್ವಲ್ಪ ಬಿಳುವಾಯಿತು. ಅವಳು ನೆಲವನ್ನು ನೋಡತೊಡಗಿದಳು. ವುನಃ ತಲೆಯೆತ್ತಿ ಕರಿಯವೂ ಪಿಯವೂ ಆದ ಕಣ್ಣುಗಳನ್ನು ಕುಣಿಸುತ್ತ ನತಿಯ ಮುಖವನ್ನು ನೋಡಿದಳು. ಅವಳ ಮುಖ ದಲ್ಲಿ ಆನಂದರಸವು ಉಕ್ಕಿ ಬರುತ್ತಿತ್ತು. ಅವಳು ಮುಗುಳ್ಳಗೆ ನಗುತ್ತ “ ಆಗದು, ನಾನು ಅದನ್ನು ಮಾತ್ರ ತೋರಿಸುವುದಿಲ್ಲ. ಹಾಗಾದರೆ ನನ್ನ ಹಂಚಿಕೆಗಳೆಲ್ಲಾ ಭಂಗವಾಗಿ ಹೋಗುವುವು ” ಎಂದು ಹೇಳುತ್ತ ಉಡಿಯೊಳ ಗಿಟ್ಟುಕೊಂಡಿದ್ದ ಕಾಗದವನ್ನು ಹೊರಗೆ ತೆಗೆದು ಕೈಮುಷ್ಟಿಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡಳು. - ವಡ್ಮಿನಿಯ ಈ ಸ್ಥಿತಿಯನ್ನು ನೋಡಿ ಭೀಮ ಸಿಂಹನಿಗೆ ವಿಚಿತ್ರವೆನಿಸಿತು. ಪನಿಯು ಹಿಂದೆ ಎಂದೂ ಈ ರೀತಿಯಾಗಿ ಮಾಡಿರಲಿಲ್ಲ. ಅವಳು ಯಾವ ಸಂಗತಿಯನ್ನೂ ನತಿಯ ಮುಂದೆ ಹೇಳಲು ಹಿಂದೆ ಮುಂದೆ ನೋಡಿರಲಿಲ್ಲ, ಇಂದು ಅವಳು ಏನೋ ಗುಪ್ತ ಕಾರ್ಯವನ್ನು ನಡೆಯಿಸಲು ತೊಡಗಿರುವಳೇಕೆ? ಅವನು, 'ನಮ್ಮಿನೀ, ಇದೇನು ರಹಸ್ಯವಾದ ವ್ಯಾಪಾರವನ್ನು ಆರಂಭಿಸಿರುವೆ ? ನನಗದನ್ನು ತೋರಿಸಲಾಗದೇ ? ಹಾಗಿದ್ದರೆ ನಾನಾದರೂ ಬಿಡುವೆನೇ? ಯಾರು ಕೃತಕಾರ್ಯರಾಗುವರೋ ನೋಡೋಣ. ' ಎಂದು ಹೇಳುತ್ತ ನಮ್ಮಿನಿಯನ್ನು ತೆಕ್ಕೆಹಾಕಿ ಹಿಡಿದು ಎಡಗೈಯಿಂದ ಅವಳ ಎಡಗೈಯನ್ನು ಹಿಡಿದುಕೊಂಡು ಬಲ ಗೈಯಿಂದ ಅವಳು ನತ್ರವನ್ನು ಹಿಡಿದುಕೊಂಡಿದ್ದ ಕೈಮುಷ್ಟಿಯನ್ನು ಹಿಡಿದು ಒತ್ತಿದನು, ಪದ್ಧಿ ನಿ:-ಬಿಡಿರಿ ! ಬಿಡಿರಿ ! ಇದೆಂಥ ಬಲಾತ್ಕಾರ ? ಹೀಗಾದರೆ ತಾವು ಬಾದಷಹರ ಕೋಪಕ್ಕೆ ಒಳಗಾಗುವಿರಿ. ನಾನು ಗುಪ್ತರೀತಿಯಿಂದ ಅಲ್ಲಾವುದ್ದೀನ ಬಾದಷಹರಿಗೆ ಪತ್ರವನ್ನು ಬರೆಯಲು ಕುಳಿತಿದ್ದೆನು. ಆ ಸಮಯದಲ್ಲಿ ತಾವು ೨೭