ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮನಿ ಹೀಗೆ ಬಲಾತ್ಕಾರ ನಡಿಸಿದ ಸಂಗತಿಯು ಅವರಿಗೆ ಗೊತ್ತಾದರೆ ತಮ್ಮ ಅವಸ್ಥೆಯು ಏನಾಗಬಹುದು, ಗೊತ್ತಿರುವುದೋ ? ನಾನಾದರೂ ಆ ಪತ್ರವನ್ನು ತಮಗೆ ಹೇಗೆ ತೋರಿಸಲಿ ? ಇಂಥ ಪತ್ರವನ್ನು ನೋಡಲು ತಾವು ಕುತೂಹಲ ಹಡು ವುದು ಕೂಡ ಯಾಕೆ ? ಭೀಮಸಿಂಹನು ತಟ್ಟನೆ ಪದ್ಮನಿಯ ಕೈಗಳನ್ನು ಬಿಟ್ಟು ದೂರ ಸಿಡಿದು ನಿಂತು, ಅವಳ ಮುಖವನ್ನು ದುರದುರನೆ ನೋಡತೊಡಗಿದನು ಆ ದೃಷ್ಟಿ ಯಲ್ಲಿ ಆಶ್ಚರ್ಯವೂ ವಿಸ್ಮಯವೂ ಕೋಪವೂ ಸಮ್ಮಿಶ್ರವಾಗಿದ್ದುವು. ಒಮ್ಮೆ ಆಶ್ಚರ್ಯವು ಹೆಚ್ಚಾಗಿಯೂ ಇನ್ನೊಮ್ಮೆ ವಿಸ್ಮಯವು ಅಧಿಕವಾಗಿಯೂ ಮತ್ತೊ ಮೈ ಸರ್ವವೂ ಕೊಪರೂಪವಾಗಿಯೂ ತೋರುತ್ತಿದ್ದುವು. ಭೀಮಸಿಂಹನ ಅಂತರಂಗದ ಸ್ಥಿತಿಯು ಬಿರುಗಾಳಿಯಿಂದ ದೀವವು ಆರಿಹೋದೊಡನೆಯೇ ಕೋಣೆಯಲ್ಲೆಲ್ಲ ಗಾಢಾಂಧಕಾರವು ಮುಸುಕಿಕೊಳ್ಳುವಂತೆ ಆಗಿತ್ತು. ಈಸ್ವಿತಿಯು ಹೆಚ್ಚು ಹೊತ್ತಿನವರೆಗೆ ಇರಲಿಲ್ಲ. ಅವನ ಮುಖವು ಪುನಃ ಪ್ರಕಾಶಿತವಾಯಿತು. ಅವನಿಗೆ ತನ್ನ ಅನುಚಿತವೂ ಅಸಂಭಾವ್ಯವೂ ಆದ ಕಲ್ಪನೆಗಾಗಿ ತಡೆಯಲಾರ ದಷ್ಟು ನಗೆ ಬಂದಿತು.

  • ಭೀಮಸಿಂಹನು '- ನಕ್ಕು “ನಮ್ಮಿನೀ, ಒಂದೇ ದಿವಸದಲ್ಲಿ ಇಷ್ಟೊಂದು ವಿದ್ಯೆಯನ್ನು ಓದಿದರೆ ಹೇಗಾದೀತು? ಅಲ್ಲಾವುದ್ದೀನನು ಯಾವುದೋ ಒಂದು ಮಾಟದ ಮಂತ್ರವನ್ನು ಬಲ್ಲನೆಂದು ತೋರುತ್ತದೆ ! ಆದರೆ ನೆನಪಿರಲಿ ! ಅವನು ಚಿತ್ತೂರಿನ ಮೇಲೆ ದಂಡೆತ್ತಿ ಬಂದಾಗ ಒಪ್ಪಂದವನ್ನು ಮಾಡಿಕೊಳ್ಳುವ ಸಮಯ, ಬಂದರೆ, ಆ ಒಪ್ಪಂದದ ಮೊದಲನೆಯ ಷರತ್ತಿನಲ್ಲಿಯೇ ನಮ್ಮಿನಿಯ ಹೆಸರು ಬರ ಬೇಕಾಗುವುದು ! ರಜಪೂತರು ಅಲ್ಲಾವುದ್ದೀನನಿಗೆ ಕೊಡುವ ಕಾಣಿಕೆಗಳಲ್ಲಿ ಈ ಸ್ತ್ರೀರತ್ನವು ಮೊದಲನೆಯದಾಗುವುದು? |

ವಡ್ಮಿನಿಯು ನಕ್ಕಳು. ಅವಳು ತಲೆಯನ್ನು ಬಾಗಿಸಿ ಕೈ ಜೋಡಿಸಿಕೊಂಡು, “ ತಥಾಸ್ತು ! ನಾನು ಚಿತ್ತೂರಿನ ರಾಣನ ರಾಜನಿಷ್ಠರಾದ ಪ್ರಜೆಗಳಲ್ಲಿ ಒಬ್ಬಳು. ರಾಣನ ಅಪ್ಪಣೆಯನ್ನು ಎಂದೂ ಅಲ್ಲಗಳೆಯಲಾರೆನು ಚಿತ್ತೂರಿನ ರಜಪೂತರೆಲ್ಲರೂ ಹೇಡಿಗಳಾಗಿ ವರಾಣನ ಮುಂದೆ ಮೊಣಕಾಲೂರಿ ಸಲಾಮು ಮಾಡಲು ಸಿದ್ದರಾದರೆ ಅದಕ್ಕೆ ನಾನು ಯಾಕೆ ವಿಘ್ನವನ್ನುಂಟುಮಾಡಲಿ ? ೨೮