ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಖಂಡ ಜ್ಯೋತಿಷಿ:-ನೀನು ಈ ಊರಿಗೆ ಬಂದುದು ಇದೇ ಮೊದಲನೆಯ ಸಾರೆ. ಹೀಗಿದ್ದು ಇಂಧ ಅವರಿಚಿತವಾದ ಸ್ಥಳದಲ್ಲಿ ನಿನ್ನ ಕೆಲಸವೇನಿತ್ತು ? ಎಲ್ಲಿ ಯಾರ ಕೆಲಸವನ್ನು ಹಚ್ಚಿ ಕೊಂಡು ಕುಳಿತಿದ್ದೆ ? ರಜಪೂತ: -ವಡ್ಮಿನೀರಾಣಿಯು ನಮ್ಮ ರಾಣಿ ಸಾಹೇಬರ ಕಡೆಗೆ ಒಂದು ಪತ್ರವನ್ನು ಕಳುಹಿಸಿದ್ದಳು ಬರುವ ಸಮಯದಲ್ಲಿ ಪ್ರತಿಜ್ಞೆಯನ್ನು ಮಾಡಿ ಬಂದಿದ್ದೆನಾದ್ದರಿಂದ ಅದನ್ನು ಯೋಗ್ಯರೀತಿಯಿಂದ ರಾಣೀಸಾಹೇಬರಿಗೆ ಮುಟ್ಟಿಸುವ ವ್ಯವಸ್ಥೆಯನ್ನು ಮಾಡಿದ ಹೊರತು ಉವಾಯವಿರಲಿಲ್ಲ. ಅದರಿಂದ ತುಸು ತಡವಾಯಿತು, ಜ್ಯೋತಿಷಿಯ ಕಣ್ಣುಗಳು ಅರಳಿ ಕೆಂಪಗಾದುವು. ಅವನು ಕೆಲಕಾಲದ ವರೆಗೆ ರಜಪೂತನನ್ನು ದುರದುರನೆ ನೋಡುತ್ತ ಕುಳಿತನು. ಬಳಿಕ_ರಾಣಿ ಸಾಹೇಬರೆಂದು ಯಾರನ್ನು ಕರೆಯುವೆ ? ಕಮಲೆಯನ್ನೇನು ? ಹಾಗಿದ್ದರೆ ಬೇಗ ಮಸಾಹೇಬರನ್ನು ! ಕಮಲೆಯು ಈಗ ದಿಲ್ಲಿಯ ಬಾದಷಹನ ಬೇಗಮಳು ! ಗುರ್ಜರೇಶ್ವರನ ಕಮಲೆಯು ಈಗ ನಿರಾಂತಕವಾಗಿ ವರಾಣನ ಜನಾನಖಾನೆ ಯನ್ನು ಅಲಂಕರಿಸಿರುವಳು. ದೇವಲೋಕದ ಅಪ್ಸರೆ ಯು ದೈತ್ಯರಾಜನ ಅಂತಃ ಪುರದಲ್ಲಿ ದೈತ್ಯೇಂದ್ರನೊಡನೆ ಕ್ರೀಡಿಸುತ್ತಿರುವಳು ! ಗುರ್ಜರೇಶ್ವರನಿಗೂ ಅವ ಳಿಗೂ ಇನ್ನೆಲ್ಲಿಯ ಸಂಬಂಧ ? ಬಿಡು, ಆ ಮಾತು ಕಟ್ಟಿಕೊಂಡು ಮಾಡುವು ದೇನು ? ನದೀನೀ ರಾಣಿಯ ವತ್ರದ ವಿಚಾರವನ್ನು ಹೇಳು. ಅವಳು ಏನು ಬರೆ ದಿರುವಳು? ” ಎಂದು ಕೇಳಿದನು, ಅವನ ಪ್ರತಿಯೊಂದು ಮಾತಿನಲ್ಲಿಯೂ ಮನ ಸ್ಸಿನೊಳಗಿನ ರೋಷವು ಹೊರಸೂಸುವಂತಿತ್ತು. ರಜಪೂತನು ತಲೆಯನ್ನು ಬಾಗಿಸಿ ಸುಮ್ಮನೆ ನಿಂತುಕೊಂಡನು, ಜ್ಯೋತಿ ಪಿಯು ಮತ್ತೊಮ್ಮೆ ಕೇಳಿದ ಮೇಲೆ-“ ನಾನು ನತ್ರವನ್ನು ಓದಿಲ್ಲ. ಅದನ್ನು ಒಬ್ಬ ದಾಸಿಯ ಸಂಗಡ ಒಳಸಂಚು ನಡೆಯಿಸಿ ರಾಣಿ-ಅಲ್ಲ, ಬೇಗಮರಿಗೆ ಮುಟ್ಟಿಸುವಂತೆ ವ್ಯವಸ್ಥೆಯನ್ನು ಮಾಡಿ ಬಂದಿರುವೆನು, ” “ ಮೂರ್ಖ! ಏನು ಮಾಡಿಬಿಟ್ಟೆ? ” ಎನ್ನುತ್ತ ಜ್ಯೋತಿಷಿಯು ಮನಸ್ಸಿನ ಉದ್ವೇಗದಿಂದ ಪೀಡಿತನಾಗಿ ಕೆಲಹೊತ್ತು ಸುಮ್ಮನೆ ಕುಳಿತನು. ಆ ಬಳಿಕ ತಿರ ೩೯