ಶನಿ ಸ್ಕಾರಧ್ವನಿಯಿಂದ-“ ಭಗವಂತನು ಮಾರ್ಗವನ್ನು ಯೋಜಿಸಿಕೊಟ್ಟಿದ್ದನು ! ಆದರೆ ನಿನ್ನಂಧ ಮೂರ್ಖನು ಗಂಟುಬಿದ್ದು ಎಲ್ಲವನ್ನೂ ಹಾಳುಮಾಡಿಬಿಟ್ಟೆ ! ಹೋಗಲಿ, ನನ್ನ ನತ್ರವನ್ನಾದರೂ ರಾಣನಿಗೆ ಮುಟ್ಟಿಸಿದೆಯೋ ಇಲ್ಲವೋ? ” ರಜಪೂತನು ಸಂಕುಚಿತ ಸ್ವರದಿಂದ ಮುಟ್ಟಿಸಿದೆನು ಮಹಾರಾಜ! ಚಿತ್ತೂರಿನ ರಜಪೂತರು ಸಮರಸನ್ನಾಹವನ್ನು ನಡೆಯಿಸಿರುವರು! ” ಎಂದನು. ಜ್ಯೋತಿಷಿಯ ಮುಖವು ಗಾಂಭೀರ್ಯವನ್ನು ವಹಿಸಿತು. ಅವನು ಔಡು ಗಟ್ಟಿ ಮಾಡಲಿ ಮಾಡಲಿ ! ಚೆನ್ನಾಗಿ ಮಾಡಲಿ ! ಇದೇ ಕೊನೆಯ ಪ್ರಸಂಗ ! ಅವರಿಗೆ ಇಂಧ ಸಮಯವು ಮುಂದೆ ದೊರೆಯಲಾರದು ! ಈಗಲೇ ಎಲ್ಲವನ್ನೂ ತೀರಿಸಿಕೊಳ್ಳಲಿ” ಎಂದನು. ಪೈಶಾಚಿಕವಾದೊಂದು ಆನಂದಭಾವನೆಯ ನಗೆಯು ಜ್ಯೋತಿಷಿಯ ಮುಖದಲ್ಲಿ ಪ್ರಕಾಶಿತವಾಯಿತು. ಅವನು ಎದ್ದು ನಿಂತು ರಜಪೂತನನ್ನು ಕುರಿತು, “ನಡೆ, ಮನೆಗೆ ಹೋಗೋಣ, ಇಂಧ ಸ್ಥಳದಲ್ಲಿ ಹೆಚ್ಚು ಮಾತಾಡುವುದು ಸರಿ ಯಲ್ಲ. ಮನೆಗೆ ಹೋಗಿ ಎಲ್ಲವನ್ನೂ ವಿಚಾರಮಾಡೋಣ, ಕಾರ್ಯವೇನೋ ತಕ್ಕಷ್ಟು ನಡೆದ ಹಾಗಾಯಿತು. ಅಗ್ನಿಸ್ಥಾವನೆಯಾದಂತಾಯಿತುಇನ್ನು ಹೋಮ ಸಾಮಗ್ರಿಗಳನ್ನು ಯೋಜಿಸುವ' ” ಎಂದನು. ಬಳಿಕ ಇಬ್ಬರೂ ಮೆಲ್ಲನೆ ನಗರಾಭಿಮುಖವಾಗಿ ಹೊರಟರುವಾಗ ಜೋತಿಷಿಯು-'ಧರ್ಮಸಿಂಹ, ಚಿತ್ತೂ ರಿನಲ್ಲಿ ಇನ್ನೇನು ವಿಶೇಷ ನಡೆದಿದೆ ? ” ಎಂದನು. ಧರ್ಮಸಿಂಹ :- ರಾಣಾ ಲಕ್ಷಣಸಿಂಹನೂ ಭೀಮಸಿಂಹನೂ ಗುರ್ಜರ ವಿಜಯದಿಂದ ಆನಂದವರವಶರಾಗಿರುವಾಗ ತಮ್ಮ ಕತ್ರವು ಕಡಲೆ ಯೊಳಗಿನ ಕಲ್ಲಿನಂತೆ ಅನಪೇಕ್ಷಿತವಾಗಿ ನಡುವೆ ಬಂದು ಅವರ ಆನಂದಕ್ಕೆ ಬಲವಾದ ವಿಘ್ನವನ್ನುಂಟು ಮಾಡಿತು. ಇಂದಿನಿಂದ ಯಾವ ತರದ ಆನಂದೋ ತೃವಗಳನ್ನೂ ನಡೆಯಿಸಕೂಡದೆಂದು ನಗರದಲ್ಲೆಲ್ಲ ಡಂಗುರ ಸಾರಿರುವರು. ಜ್ಯೋತಿಷಿ :- ಪದ್ಮನೀ ರಾಣಿಯು ಯಾವ ಸ್ಥಿತಿಯಲ್ಲಿರುವಳು. ಧರ್ಮಸಿಂಹ:- ಅವಳು ತುಂಬಾ ದುಃಖದಲ್ಲಿರುವಳಂತೆ. ಜ್ಯೋತಿ ಮಿಯೂ ಧರ್ಮಸಿಂಹನೂ ರಾಜಮಾರ್ಗವನ್ನು ಬಿಟ್ಟು, ಕಾಲುದಾರಿಯಿಂದ ಹತ್ತು ಹದಿನೈದು ಮಾರುದೂರ ಹೋಗಿ ಒಂದು ಗುಡಿಸಲವನ್ನು ಹೊಕ್ಕರು. ೪೦
ಪುಟ:ಪದ್ಮಿನಿ .djvu/೫೫
ಗೋಚರ