ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ, ಖಂಡ ಮೂರನೆಯ ಪರಿಚ್ಛೇದ ಮಾರನೆಯ ದಿನ ಮುಂಜಾನೆ ಆ ಜೋಯಿಸನು ಒಳ್ಳೆ ಆಡಂಬರ ದಿಂದ ತನ್ನ ವೇಷಭೂಷಣಗಳನ್ನು ಧರಿಸಿಕೊಂಡು ಕೈಯಲ್ಲಿ ಪಂಚಾಂಗವನ್ನೂ ಚಿಂತಾಮಣಿಯ ಪುಸ್ತಕವನ್ನೂ ಹಿಡಿದುಕೊಂಡು ವರಾಣ ಬಾದಷಹನ ಅರಮ ನೆಯ ಕಡೆಗೆ ನಡೆದನು, ದ್ವಾರಪಾಲಕರು ಇವನನ್ನು ಒಳಗೆ ಬಿಡುವರೆಲ್ಲಿ ? ಅದ ರಿಂದ ಇವನು ಕೋಟೆಯ ಮಹಾದ್ವಾರಕ್ಕೆ ಸ್ವಲ್ಪ ದೂರದಲ್ಲಿ ಅತ್ತಿತ್ತ ಸುಳಿದಾ ಡತೊಡಗಿದನು. ಅಷ್ಟರಲ್ಲಿ ಒಬ್ಬ ವರಿಚಾರಿಕೆಯು ಬಂದು ಅವನ ಕಿವಿಯಲ್ಲಿ ಏನೇನೋ ಹೇಳಿ ಹೋದಳು, ಆಗ ಜೋಯಿಸನು ವಿಷಣ್ಣವದನದಿಂದ ಸಾವ ಕಾಶವಾಗಿ ದುರ್ಗದ ಮಹಾದ್ವಾರದ ಬಳಿಗೆ ಬಂದನು. ಖಡ್ಪಾಣಿಗಳಾದ ಇಬ್ಬರು ದ್ವಾರಪಾಲಕರು ಬಂದು 'ಖಬರ್‌ದಾರ್‌ ! ' ಎಂದು ಗದ್ದರಿಸಿ ಅವನನ್ನು ತಡೆದರು, ಜ್ಯೋತಿಷಿಯು ನಡುಗಿದನು ಬಾಹ್ಯಾಂಗನು ಅಸ್ವಾಭಾವಿಕವಾಗಿ ಕಂಪಿಸುತ್ತಿರುವುದನ್ನು ನೋಡಿದರೆ ಅವನ ಅಂತರಂಗದ ಸ್ಥಿತಿಯು ಮಾತ್ರ ಅದೇ ರೀತಿಯಾಗಿದ್ದಿಲ್ಲವೆಂಬುದನ್ನು ಆಗಲೇ ಕಂಡುಹಿಡಿಯಬಹುದಾಗಿದ್ದಿತು. ಆದರೆ ದ್ವಾರಪಾಲಕರಿಗೆ ಅವಕಾಶವೆಲ್ಲಿ ? ಅವರಿಗೆ ಅಷ್ಟೊಂದು ಕುಶಲತೆಯು ಎಲ್ಲಿಂದ ಬರಬೇಕು ? ತನ್ನ ಆ ಅಂಗುಲ ದಪ್ಪವಾದ ಅಂಗಿ, ಅರ್ಧಗೇಣು ಎತ್ತರವಾದ 'ಜರ್ ಜರ್' ಸಪ್ಪಳವಾಡುವ ಚಡಾವು (ಜೋಡು), 'ಧಳಧಳನೆ ಹೊಳೆಯುವ ಹಿತ್ತಾಳಿಯ ಬಿಲ್ಲೆ, ಇವುಗಳ ಕಡೆಗೇ ಅವರ ದೃಷ್ಟಿ, ಜನರು ತಮ್ಮನ್ನು ನೋಡಿ ಅಂಜಿದರಂತೂ ತೀರೇ ಹೋಯಿತು. ಅವರಿಗೆ ಬಾದಷಹನ ದರ್ವಕ್ಕಿಂತಲೂ ಹೆಚ್ಚಾದ ಅಹಂಕಾರವು ಬಂದುಬಿಡುವುದು. ಪ್ರಹರಿಗಳಲ್ಲಿ ಒಬ್ಬನು ಜ್ಯೋತಿ ಮಿಯನ್ನು ನೋಡಿ:-“ಎಲೈ ಮೂಢನೇ, ಇದು ಅರಮನೆಯ ಮಹಾದ್ವಾರವೆಂ ಬುದು ಗೊತ್ತಿಲ್ಲವೇ ? ಅತ್ತಿತ್ತ ನೋಡುತ್ತ ಒಳಗೇ ಹೊರಟಿರುವೆ ? ಒಳಗೆ ಹೋಗಲು ಅಪ್ಪಣೆಯಿಲ್ಲ” ಎಂದು ಅವನನ್ನು ಹೊರತಳ್ಳದನು. ಈಗಂತೂ ಜ್ಯೋತಿಷಿಯು ನೆಲವನ್ನೇ ಹಿಡಿದುಬಿಟ್ಟನು. ಅವನ ಬಾಯಿಂದ ಮಾತುಗಳೇ ಹೊರಡಲಿಲ್ಲ, ತೇಲಗಣ್ಣು ಮೇಲಗಣ್ಣು ಹಾಕತೊಡಗಿದನು ! ಅಷ್ಟರಲ್ಲಿ ದೂರ ೪೧