ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮನಿ ಹೀಗೆನ್ನುತ್ತ ಬಾದಷಹನು ಪತ್ರವನ್ನು ಜ್ಯೋತಿಷಿಗೆ ಕೊಡಹೋದನು, ಜ್ಯೋತಿಷಿಯು ಅದನ್ನು ತೆಗೆದುಕೊಂಡು ಪುನಃ ಸಲಾಮು ಮಾಡಿದನು, ಜ್ಯೋತಿ ಸಿಗೆ ಮನಸ್ಸಿನಲ್ಲಿ ಹಿಡಿಸಲಾರದಷ್ಟು ಆನಂದವಾಯಿತು. ಔಷಧಕ್ಕಾಗಿ ಬೇಕಾ ಗಿದ್ದ ವನಸ್ಪತಿಯನ್ನು ದೊರಕಿಸಲು ಅಡವಡವಿ ಅಲೆದು ದೊರಕಿಸಲಾರದೆ ಮರಳಿ ಬರುವಾಗ ಅದು ತಲೆಬಾಗಿಲಿನಲ್ಲಿಯೇ ದೊರೆತರೆ ಆಗುವ ಆನಂದಕ್ಕಿಂತಲೂ ಹೆಚ್ಚಿನ ಆನಂದವು ಆ ಪತ್ರದ ದರ್ಶನಮಾತ್ರದಿಂದ ಅವನಿಗಾಯಿತು. ಅವನು ಅದನ್ನು ತನ್ನ ಬಗಲೊಳಗಿನ ಸಂಗ್ರಹದ ಚೀಲದಲ್ಲಿ ಇಟ್ಟುಕೊಂಡನು ಆಗ ಬಾದಷಹ ನು - “ನಿನ್ನ ಸಂಗಡ ಇಬ್ಬರು ದೂತರು ಬರುವರು. ಅವರಿಗೆ ನಿನ್ನ ಗುಡಿಸಲನ್ನು ತೋರಿಸು. ನತ್ರವನ್ನು ನಿನ್ನ ಸಂಗಡಲೇ ತೆಗೆದು ಕೊಂಡು ಹೋಗು, ನಾಳೆ ಇಷ್ಟೇ ಹೊತ್ತಿಗೆ ಸರಿಯಾಗಿ, ಅದನ್ನೂ ಅದರ ಭಾಷಾಂತರವನ್ನೂ ತಿರುಗಿ ತೆಗೆದುಕೊಂಡು ಬಾ. ಇದಕ್ಕೆ ಒಂದು ವೇಳೆ ತಪ್ಪಿ ದರೆ ನಿನ್ನ ಜೀವನವು ಕೊನೆಗಡಿತೆಂದು ತಿಳಿ ” ಎಂದನು. ಜೋತಿಷಿ:- ಜಹಾವನಾ ! ನಾಳೆ ಮುಂಜಾನೆಯೇ ಅವಶ್ಯವಾಗಿ ತಂದುಕೊಡುವೆನು. ಇದು ಎಷ್ಟು ಹೊತ್ತಿನ ಕೆಲಸ ! ಎರಡುಗಳಿಗೆ ಪಟ್ಟಾಗಿ ಕುಳಿತರೆ ಕೆಲಸವು ಮುಗಿದು ಹೋಗುವುದು. ಬಾದಷಹನು ಜ್ಯೋತಿಷಿಯ ಮಾತುಗಳನ್ನು ಕೇಳಿ ಸಂತೋಷವಟ್ಟುನೀನು ನಿಜವಾಗಿಯೂ ಕುಶಲನಾಗಿಯೇ ತೆರುವೆ, ಆದರೆ ನಿನ್ನನ್ನು ಇನ್ನೊಂದು ಮಾತು ಕೇಳಬೇಕಾಗಿದೆ, ಹೇಗಿದ್ದರೂ ನೀನು ಜೋಯಿಸನು, ಗುಣಿಸಿ ಹೇಳು ನೋಡೋಣ. ಈ ವತ್ರವು ಎಲ್ಲಿಂದ ಬಂದಿರುವುದು ? ಜ್ಯೋತಿಷಿಗಳು ಕ್ಷಣಕಾಲ ಏಕಾಗ್ರಚಿತ್ರ ಮಾಡಿಕೊಳ್ಳುವವನಂತೆ ನಟಿಸಿ, ನೆಲವನ್ನು ನೋಡುತ್ತ ನಿಂತುಕೊಂಡು, ತನ್ನ ಬಗಲೊಳಗಿನ ಗೊಂಬೆಯನ್ನು, ಹೊರಗೆ ತೆಗೆದು ಕಿವಿಯ ಹತ್ತರವಿಟ್ಟುಕೊಂಡು, ಒಂದೆರಡು ನಿಮಿಷಗಳವರೆಗೆ ನಿಂತುಕೊಂಡನು. ಆ ಮೇಲೆ ಬಾದಷಹನನ್ನು ನೋಡಿ- “ಜಹಾವನಾ ! ಇದು ಒಬ್ಬ ರಮಣಿಯ ಪತ್ರಳು, ಚಿತ್ತೂರಿನ ರಾಣಿಯಾದ ನಮ್ಮಿನೀ ದೇವಿಯು ಗುರ್ಜರೇಶ್ವರಿ ಕಮಲಾದೇವಿಗೆ ಬರೆದಿರುವಳು, ” ೪ ೪