ಎರಡನೆಯ ಖ೦ಡ ಬಾದಷಹನು ಆಶ್ವರ್ಯಾತಿಶಯವನ್ನು ವ್ಯಕ್ತಪಡಿಸುತ್ತ- “ಚಿತ್ತೂರಿನ ರಾಣಿಯಾದ ಪನಿಯು ಬರೆದಿರುವರ್ಳೆ ? ಭೀಮ ಸಿ೦ಹನ ನತ್ನಿ ? ಭುವನಸುಂದ ರಿಯೆಂದು ಹೆಸರು ಪಡೆದ ಪದ್ಮನಿ ? ” ಎಂದು ಕೇಳಿದನು. ಜ್ಯೋತಿಷಿ:- “ಕೇವಲ ರೂಪದಲ್ಲಿಯೇ ಅಲ್ಲ. ಜಹಾಪನಾ! ಗುಣ ದಲ್ಲಿಯೂ ಅವಳಿಗೆ ಸರಿಯಾದ ಸ್ತ್ರೀರತ್ನವನ್ನು ಸೃಷ್ಟಿಕರ್ತನು ಇನ್ನೆಲ್ಲಿಯೂ ಸೃಷ್ಟಿಸಿಲ್ಲ. ” ಎಂದನು. ಬಾದಷಹನು ಗಾಂಭೀರ್ಯದಿಂದ ಪುನಃ ಮಾತಾಡಿದನು:- ಈ ಮಾತು ನಿಜವೆಂದು ನಂಬಲಾರೆನು, ನನ್ನ ಗುರ್ಜರೇಶ್ವರೀ ಬೇಗಮ್ಮಳಿಗೆ ಸರಿಯಾದ ಸುಂದರಿಯು ಜಗತ್ತಿನಲ್ಲಿ ಬೇರೆಯೊಬ್ಬಳಿರುವಳೆಂಬುದನ್ನು ನಾನು ಸರ್ವಥಾ ನಂಬಲಾರೆನು, ಜ್ಯೋತಿಷಿಯ ಮುಖವು ಕಾಯಿತು. ಎದೆಯು - ಧಕ್, ಧಕ್ - ಹಾರಲಾರಂಭಿಸಿತುಆದರೆ ಏನು ಮಾಡುತ್ತಾನೆ? ಅವನು ವುನಃ ಕೃತಕ ವಿನಯದಿಂದ ಹೇಳಿದನು'-ಜಹಾಪನಾ ಅವರಾಧವನ್ನು ಕ್ರಮಿಸಬೇಕು. ಸತ್ಯವಾದ ಸಂಗತಿಯನ್ನು ಮರೆಮಾಜಲಾರದೆ ಮಾತಾಡುವೆನು ತಮ್ಮ ಗುಜರಾಧೀ ಬೇಗಮ್ಮಳು ಚಿತ್ತೂರಿನ ಪದ್ಮನಿಯ ಮುಂದೆ ಹೆಂಗಸಲ್ಲ ! ಸೂರ್ಯನ ಮುಂದಿನ ದೀಪದಂತೆ, ಅತುಲವಾದ ರೂಪಲಾವಣ್ಯಗಳಿಂದೊನ್ನುವ ಪದ್ಮಸಿಯ ಮುಂದೆ, ತಮ್ಮ ಕಮಲೆಯು ಕೇವಲ ಕುರೂಪಿಯೇ ಸರಿ; ನಾನು ಇಬ್ಬರನ್ನೂ ಕಣ್ಣಾರೆ ಕಂಡಿರುವೆನು, ಎಂಥ ಉದ್ದಾಮತನವಿದು! ಅಲ್ಲಾವುದ್ದೀನನು ರೇಗಿಹೋದನು. ಅವನು- “ ಮೂರ್ಖನೇ, ಬುದ್ಧಿಯನ್ನು ಎಲ್ಲಿಟ್ಟಿರುವೆ ? ಪ್ರತ್ಯಕ್ಷ ನನ್ನ ಮುಂದೆಯೇ ನನ್ನ ಬೇಗಮಳನ್ನು ಈ ವರಿಯಾಗಿ ನಿಂದಿಸುವ ನಿನ್ನ ಧೈರ್ಯ ವೆಂಧದದು ! ನೀನೆಂದು ಕ್ಷಮಿಸುವೆನು. ಬೇರೊಬ್ಬನಾಗಿದ್ದರೆ ಇಷ್ಟು ಹೊತ್ತಿಗೆ ಅವನ ನಾಲಿಗೆಯು ಹೋಳಾಗಿ ಬೀಳುತ್ತಿತ್ತು ! ಇಂಥ ಉದ್ದಾಮತನವನ್ನು ಇನ್ನೊಮ್ಮೆ ತೋರಿಸಿದೆಯಾದರೆ ನನಗೆ ಎಂದೂ ಸಹನವಾಗದು. ಎಚ್ಚರ ದಿಂದಿರು. ನೀನು ಜೋಯಿಸನು, ನಿನ್ನಿಂದ ನನ್ನ ಕೆಲಸವಾಗತಕ್ಕದ್ದಿರುವುದು, ಆದುದರಿಂದ ಸುಮ್ಮನೆ ಬಿಟ್ಟೆನು. ಇನ್ನೊಂದು ಮಾತು ಕೇಳುತ್ತೇನೆ. ವಿಚಾರ ೪೫
ಪುಟ:ಪದ್ಮಿನಿ .djvu/೬೦
ಗೋಚರ