ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಬ್ಬಿನಿ ಮಾಡಿ ಹೇಳು, ಈ ಪತ್ರವು ಬೇಗಮ್ಮಳ ಬಳಿಗೆ ಹೇಗೆ ಬಂದಿತು?” ಎಂದನು. ಜ್ಯೋತಿಷಿಯು ಪುನಃ ತನ್ನ ದೃಷ್ಟಿಯನ್ನು ಕೆಳಗೆ ತಗ್ಗಿಸಿ ತನ್ನ ಮಹಾ ಮಾಯೆಯನ್ನು ಹೊರಗೆ ತೆಗೆದು ಕಿವಿಯಹತ್ತರವಿಟ್ಟುಕೊಂಡು ಬಾದಷಹನ ಮುಖವನ್ನು ನೋಡಿ ತಲೆದೂಗುತ್ವ-“ಸರಿ, ಸರಿ.” ಎಂದನು. ಬಾದಷಹನು ಏನೆಂದು ಕೇಳಿದನು. ಜೋತಿಷಿ -ಜಹಾವನಾ ! ಕೆಲವು ದಿನಗಳಿಂದಲೂ ತಮ್ಮ ಅಂತಃಪುರ ದಲ್ಲಿ ಅತಿ ರಹಸ್ಯವಾದ ಸಂಗತಿಗಳು ನಡೆಯಹತ್ತಿರುವವು. ಯಾವನೋ ಒಬ್ಬ ರಜಪೂತನು ಚಿತ್ತೂರಿನಿಂದ ಈ ಪತ್ರವನ್ನು ತೆಗೆದುಕೊಂಡು ಬಂದನು. ಆ ಮೇಲೆ ತಮ್ಮ ಅಂತಃವುರದ ದಾಸಿಯೊಬ್ಬಳನ್ನು ಕೈಯಲ್ಲಿ ಹಾಕಿಕೊಂಡನು. ಅವಳು ಬೇಗಮ್ಮಳ ಜನಾನಖಾನೆಯ ಕಾವಲುಗಾರಳಿಗೆ ಸಾರಾಯಿಯಲ್ಲಿ ವಿಷ ಕೂಡಿಸಿ ಕುಡಿಸಿ ಅವಳು ಎಚ್ಚರದಪ್ಪಿ ಮಲಗಿಕೊಂಡಿರಲು ಒಳಗೆ ಹೋಗಿ ಅವಳ ಹಾಸಿಗೆಯ ಮೇಲೆ ನತ್ರವನ್ನು ಮುಚ್ಚಿಟ್ಟು ಬಂದಿರುವಳು, ಬಾದಷಹನಿಗೆ ಇನ್ನಿಲ್ಲದಷ್ಟು ಆಶ್ಚರ್ಯವೂ ವಿಸ್ಮಯವೂ ಉ೦ಟಾದುವು. ಸಂಗಡಲೇ ತುಸು ಕೋಪವೂ ಬಂದಿತು. ಅವನು:-“ಆ' ಅಂತವುರದ ದಾಸಿ ಯರಲ್ಲಿ ಇಂಧ ಸಂಚುಗಾರಳೇ? ಆರವಳು? ಅವಳ ಹೆಸರನ್ನಷ್ಟು ಹೇಳಿದರೆ ನಿನ್ನ ಮುಂದೆಯೇ ತಲೆಗಡಿಸಿ ಅವಳ ಆಯುಷ್ಯವನ್ನು ಪೂರೈಸುವೆನು. ಅವಳ ಹೆಸರೆನು?” ಎಂದು ಕೇಳಿದನು. ಜ್ಯೋತಿಷಿ-ಜಹಾವನಾ' ಕ್ಷಮಿಸಬೇಕು. ಆ ಮಾತನ್ನಷ್ಟು ತಾವು ದಯವಿಟ್ಟು ಕೇಳಬಾರದು- ಹೀಗಾದರೆ ಜಗತ್ತು ನಡೆಯುವುದು ಕಠಿನವಾದೀತು. ಆ ದಾಸಿಯನ್ನು ಗೊತ್ತು ಹಚ್ಚುವುದು ತಮ್ಮ ದರಬಾರದೋಳಗಿನ ಕೊತ್ವಾಲ ಸಾಹೇಬರ ಕೆಲಸವು, ನನ್ನನ್ನು ತಾವು ಈ ಮಾತಿಗಾಗಿ ನಿರ್ಬ೦ಧಿಸಕೂಡದು. ಅಲ್ಲಾವುದ್ದೀನನಿಗೆ ಆ ಮಾತೂ ಸರಿಯಾಗಿ ತೋರಿತು. ಮತ್ತು ಮೊದಲು ಬೇಗಮ್ಮಳಿಂದ ತನಗೆ ಗೊತ್ತಾಗಿದ್ದ ಎಲ್ಲ ಸಂಗತಿಗಳನ್ನು ಜ್ಯೋತಿ ಷಿಯು ಅಕ್ಷರಶಃ ಹೇಳಿದುದರಿಂದ ಅವನ ವಿಷಯವಾಗಿ ಒಂದು ತರದ ಪೂಜ್ಯ ಭಾವನೆಯು ತಾನಾಗಿಯೇ ಉದಯವಾಗಿತ್ತು, ಅದರಿಂದ ಅವನು ಜೋತಿಷಿ ಯನ್ನು ಹೆಚ್ಚಾಗಿ ಬಲಾತ್ಕರಿಸಲಿಲ್ಲ. ಅವನು:- ಒಳ್ಳೆಯದು, ಈಗ ಹೋಗು. ೪೬