ಎರಡನೆಯ ಖಂಡ ನಾಳೆ ಮುಂಜಾನೆ ಮಾತ್ರ ತಪ್ಪದೆ ಆ ಪತ್ರದ ಭಾಷಾಂತರವನ್ನು ತೆಗೆದುಕೊಂಡು ಬಾ' ಎಂದನು. ಆಷ್ಟರಲ್ಲಿ ಅವನಿಗೆ ಮತ್ತೊಂದು ಮಾತು ನೆನಪಾಯಿತು, ಅವನು ಜ್ಯೋತಿಷಿಯನ್ನು ಕುರಿತು ಈ ತರದ ಸಾಹಸವನ್ನು ಮಾಡಿ ಬೇಗ ಮ್ಮಳಿಗೆ ಪತ್ರವನ್ನು ಬರೆದು ಇಷ್ಟೊಂದು ಗುವ ಕಾರ್ಯಭಾರಗಳನ್ನು ನಡೆಯಿ ಸುವುದರಲ್ಲಿ ನಮ್ಮಿಸಿ ರಾಣಿಯ ಉದ್ದೇಶವೇನಿರುವುದು? ಅವಳು ನಮ್ಮ ಜನಾನ ಖಾನೆಗೆ ಬರಲು ನಮ್ಮತಿಸಬಹುದೇ ? ಹೇಳು ನೋಡೋಣ” ಎಂದನು. ಪರಾ ಣನ ಅಂತರಂಗದಲ್ಲಿ ಒಂದು ಆಶಾಂಕುರವು ಹುಟ್ಟಿತು. ಅವನು ಕುತೂಹಲ ಪೂರ್ಣ ದೃಷ್ಟಿ ಯಿಂದ ಜ್ಯೋತಿಷಿಯ ಮುಖವನ್ನು ನೋಡುತ್ತ ಕೆಳಿ ತನು. ಜ್ಯೋತಿಷಿಯು ಎಡಗೈಯಿಂದ ನೊಸಲನ್ನು ಹಿಡಿದು ಹಿಸುಕಿ ಕೊಳ್ಳುತ್ತC ಜಹಾಪನಾ ? ಈ ಪ್ರಶ್ನೆಯ ಉತ್ತರವನ್ನು ನಾಳೆ ಹೇಳುವೆನು. ಅವಳ ಪತ್ರವನ್ನು ನೋಡಿದರೆ ಎಲ್ಲವೂ ತಾನಾಗಿಯೇ ತಿಳಿದುಬರುವುದು, ಈಗೇಕೆ ನಾನು ತಮ್ಮ ಮನಸ್ಸನ್ನು ನೋಯಿನಲಿ? ನಮ್ಮಿನಿಯು ಸಾಮಾನ್ಯಳಲ್ಲ. ಕ್ಷತ್ರಿಯ ಪತಿಯು, ವೀರವತ್ನಿಯೂ ವೀರನರಿವೃತಳೂ ಆಗಿರುವಳು. ಅವಳ ವಿಚಾರ ವನ್ನು ನಾನು ಏನೆಂದು ಹೇಳಲಿ? ಅವಳನ್ನು ಸಂಪಾದಿಸುವುದು ತಮಗೆ ಸಾ... ಧ್ಯ...ನಿ... ಕೊನೆಗೆ ತಲೆಯನ್ನು ತೂಗಿಬಿಟ್ಟನು, ಅಕ್ಷರವನ್ನು ಉಚ್ಚರಿಸಲಿಲ್ಲ. ಜ್ಯೋತಿಷಿಯ ಉದ್ದೇಶವು ಸಾಧಿಸಿತು. ಅಲ್ಲಾವುದ್ದೀನನ ಸ್ವಾಭಿಮಾ ನಕ್ಕೆ ಆಘಾತವುಂಟಾಯಿತು. ಅವನು ತುಳಿದೆಬ್ಬಿಸಿದ ಭುಜಂಗನಂತೆ ಬುಸು ಗುಟ್ಟು ಹೇಳಿದನು - ಹಿಂದುಸ್ತಾನದ ಬಾದಷಹನಿಗೆ ಅಸಾಧ್ಯವಾದ ಕಾರ್ಯವು ಜಗತ್ತಿನಲ್ಲಿ ಇರುವುದೇ? ನೋಡೋಣ ! ಆ ಕ್ಷತ್ರಿಯರ ಕತ್ರಿಯತ್ವ ನನ್ನಾದರೂ ವರೀಕ್ಷಿಸೋಣ ಒಳ್ಳೆಯದು, ನೀನು ಮನೆಗೆ ಹೋಗು. ಇವ ರಿಬ್ಬರು ನಿನ್ನ ಸಂಗಡ ಬರುವರು. ಇವರಿಗೆ ನಿನ್ನ ಮನೆಯನ್ನು ತೋರಿಸು.” ಎಂದು ಹೇಳುತ್ತ ಬಳಿಯಲ್ಲಿದ್ದ ಸೇವಕರಿಗೆ ಸನ್ನೆಯಿಂದ ಆಜ್ಞಾಪಿಸಿದನು. ಜೋತಿಷಿಯು ಬಾದಷಹನಿಗೆ ತಲೆವಾಗಿ ಸಲಾಮುವಾಡಿ ಸಭಾಗೃಹ ದಿಂದ ಹೊರಟು ಹೋದನು. ಆಗ ಅವನ ಮನಸ್ಸಿನಲ್ಲಿ ಆನಂದ, ರೋಷ, ಕುನಸು ಮುಂತಾದ ಹಲವು ಭಾವನೆಗಳು ಏಕಕಾಲಕ್ಕೆ ಉದಯ ಹೊಂದಿದುವು. ಅವನು ಇಂದ್ರಿಯವರವಶತೆಯಿಂದ ತತ್ತರಗೊಳ್ಳುತ್ತಿದ್ದನು. ೪೭
ಪುಟ:ಪದ್ಮಿನಿ .djvu/೬೨
ಗೋಚರ