ಪದ್ಮನಿ ಹೇಗೆ ಘಟಿಸಿತವಾ? ಆಶ್ಚರ್ಯ ! ಆಶ್ಚರ್ಯ !! ಅದೂ ಹಾಗಿರಲಿ, ಧರ್ಮ ಕರ್ಮಗಳ ವಿಚಾರವು ಜ್ಞಾನಿಗಳಿಗೆ, ಆದರೆ ನಿನ್ನ ಮನಸ್ಸಾದರೂ ಯವನನ ಸಹವಾಸವನ್ನು ಹೇಗೆ ಒಪ್ಪಿಕೊಂಡಿತು? ಹಿಂದಿನ ಸಂಸಾರವನ್ನೆಲ್ಲಾ ಒಮ್ಮೆಲೇ ಹೇಗೆ ಮರೆತು ಬಿಟ್ಟೆ ? ಲೋಭವು ವಿವೇಕವನ್ನು ಗೆಲ್ಲವುದುಂಟು. ಆದರೆ ನಿನ್ನ ಅಂತರಂಗದಲ್ಲಿ ಇಂತಹ ಅಕಲ್ಪಿತವಾದ ಲೋಭವು ಹೇಗೆ ಉಂಟಾಯಿತೋ ತಿಳಿಯಲಾರೆನು ! ಇಗೇ ಆಶ್ಚರ್ಯದ ಸಂಗತಿಯು ! ಯಾವ ನಿರ್ಭಾಗ್ಯನು ನಿನ್ನನ್ನು ಹೃದಯೇಶ್ವರಿಯೆಂದು ಭಾವಿಸಿಕೊಂಡಿದ್ದನೋ, ಯಾವನು ನಿನಗೆ ತನ್ನ ಶರೀರದಲ್ಲಿ ಆತ್ಮನಿಗೆ ಸರಿಯಾದ ಸ್ಥಾನವನ್ನು ಕೊಟ್ಟು ನಿನ್ನನ್ನು ಮನ್ನಿ ಸುತ್ತಿದ್ದನೋ, ಯಾವನು ನೀನೇ ತನ್ನ ಸರ್ವಸ್ವವೆಂದು ತಿಳಿದುಕೊಂಡಿದ್ದನೋ, ಎಲ್ಲಕೆ ಹೆಚ್ಚಿನದೆಂದರೆ, ಯಾವನಿಂದ ನೀನು ಸಂತಾನವನ್ನು ಕೂಡ ನಡೆ ದಿದ್ದೆಯೋ ಅಂತಹ ನಿನ್ನ ಸ್ವಾಮಿಯನ್ನು ನೀನು ಮರೆತುಬಿಟ್ಟೆಯಲ್ಲವೇ ? ಯಾವನ ಸೇವಾಶುಶೂಷೆಗಳನ್ನು ಮಾಡಿಕೊಂಡಿರುವುದು ನಿನ್ನ ಕರ್ತವ್ಯವಾ ಗಿ, ಯಾವನು ನಿನಗೆ ಇಹಪರಗಳಲ್ಲಿ ಮಾರ್ಗದರ್ಶಕನಾಗಿದ್ದನೋ ಅವನು ನಿನ್ನ ಪ್ರೇಮಕ್ಕೆ ಪಾತ್ರನಾಗಿರದೆ, ಯಾವನೋ ಒಬ್ಬ ವರಧರ್ಮದ ನೀಚನು ನಿನ್ನ ಅನುರಾಗಕ್ಕೆ ಒಳಗಾದನೆಂಬುದನ್ನು ಕೇಳಿ ಯಾರು ಆಶ್ಚರ್ಯ ಚಕಿತರಾಗಲಿಕ್ಕಿಲ್ಲ ? ಯಾರು ನಿನ್ನ ಮೋರೆಯ ಮೇಲೆ ಉಗುಳಲಿಕ್ಕಿಲ್ಲ? ನೀನು ಮೈ೦ಛರ ಸಹವಾಸದಿಂದ ಆಧಃಪತಿತಳಾಗಿ ಹೋಗುವೆಯೆಂದು ನಾನು ಮೊದಲೇ ತರ್ಕಿಸಿದ್ದೆನು. ಎಂದು ನಿನ್ನ ಸಂಗಡ ದುಷ್ಟಳಾದ ಮತಿಯಾ ದಾಸಿಯನ್ನು ನೋಡಿದೆನೋ ಅಂದೇ ನನ್ನ ಮನಸ್ಸಿನಲ್ಲಿ ಒಮ್ಮೆ ಈ ತರದ ಭಾವನೆಯೂ ಉಂಟಾಗಿದ್ದಿತು. ಅದೇ ಇಂದು ನಿಜವಾಗಿ ಹೋಯಿತು. ಅವಳೇ ನಿನ್ನನ್ನು ನರಕದ ಮಾರ್ಗದಲ್ಲಿ ಕೈ ಹಿಡಿದು ಕರೆದುಕೊಂಡು ಹೋದಳು ಭಗಿನಿ, ನಿನಗೊಬ್ಬಳು ಮಗಳಿರುವಳಂತೆ. ಅವಳ ಮುಖವನ್ನು ನೋಡಿ ಅದರಲ್ಲಿ ಯಾರ ಮುಖಲಕ್ಷಣವು ಬಿಂಬಿತವಾಗಿರುವುದೆಂಬುದನ್ನು ಆಲೋಚಿಸಿ ರುವೆಯಾ ? ಅವನಿಗೂ ನಿನಗೂ ಎಂತಹ ಸಂಬಂಧವಿದ್ದಿತು ? ಅವನಿಗೆ ನೀನು ಎಷ್ಟೊಂದು ಋಣಿಯಾಗಿರುವೆಯೆಂಬುದನ್ನು ಭಾವಿಸಿದೆಯಾ? ಸುಖೋಪ ೫೦
ಪುಟ:ಪದ್ಮಿನಿ .djvu/೬೫
ಗೋಚರ