ಎರಡನೆಯ ಖಂಡ ಭೋಗದ ಆಶೆಯಿಂದ ವರಾಣನನ್ನು ಕೂಡಿದೆಯೆಂದು ಹೇಳಬೇಕೇ? ಅದನ್ನೂ ಹೇಳಲಾರೆನು, ಇರಲಿ, ಒಮ್ಮೆ ಹಾಗೆಯೇ ತಿಳಿದುಕೊಳ್ಳೋಣ, ಆದರೆ ಆ ನಿನ್ನ ಅಲ್ಪಕಾಲದ ಅಸ್ಥಿರವಾದ ಸುಖೋಪಭೋಗಗಳಿಗೆ ನೀನು ಎಷ್ಟು ಬೆಲೆ ಕೊಡ ಬೇಕಾಯಿತೆಂಬುದನ್ನು ಇನ್ನೊಮ್ಮೆ ಯೋಚಿಸಿ ನೋಡು, ಪ್ರಾಣಕ್ಕಿಂತಲೂ ಹೆಚ್ಚಿನದಾದ ಮಾನವನ್ನು ತೊರೆದೆ ! ಜಾತಿಧರ್ಮವನ್ನೂ ಸತೀಧರ್ಮವನ್ನೂ ಕಾಲಿನಿಂದ ತುಳಿದು ಬಿಟ್ಟೆ ! ಇಷ್ಟೆಲ್ಲ ಮಾಡಿ ಸಂಪಾದಿಸಿದೆಯಾದರೂ ಏನು ? ಕೇವಲ ಅಪಕೀರ್ತಿ, ನೀಚವರಾಣನ ಸಹವಾಸ' ನಾಲ್ಕು ದಿನ ನಿನ್ನನ್ನು ಯವ ನರು ರಾಜರಾಜೇಶ್ವರಿಯೆಂದು ಕರೆಯಬಹುದು ! ನೀನು ಯವನನ ತೊಡೆಯ ಮೇಲೆ ಮೆರೆಯಬಹುದು ! ಆದರೆ ಮುಂದೆ ನಿನ್ನ ಗತಿಯು ಏನಾಗಬಹುದೆಂದು ಒಮ್ಮೆಯಾದರೂ ಆಲೋಚಿಸಿರುವೆಯಾ ? ಭಗಿನಿ, ಇದಕ್ಕೂ ಹೆಚ್ಚಿಗೆ ಏನು ಬರೆಯಲಿ ? ನೀನು ಭಾರತಮಾತೆಯ ಶ್ರೇಷ್ಠವಾದ ಕಿರೀಟದಲ್ಲಿ ಕೂಡಿಸಿದ ಕಳಂಕವು ಎಷ್ಟು ಕಾಲ ತಪಸ್ಸು ಮಾಡಿ ದರೆ ಆ ಪುಣ್ಯದಿಂದ ತೊಳೆದು ಹೋಗಬಹುದು ? ನೀನು ಮಾಡಿದ ಪಾವವು ನಿನ್ನೊಬ್ಬಳನ್ನೇ ಪೀಡಿಸದು. ನೀನು ಗರ್ಜರೇಶ್ವರನ ಅರ್ಧಾಂಗಿ , ಸಹಸ್ರ ಸಹಸ್ರ ನಾರಿಯರಿಗೆ ಮಾರ್ಗದರ್ಶಕಳು, ಆ ನಿನ್ನ ಪ್ರಜೆಗಳೆಲ್ಲರೂ ನಿನ್ನ ಸುನೀತಿ ಸುವಿಚಾರಗಳನ್ನು ಅನುಕರಿಸಿ ನಡೆಯಬೇಕು : ಕಮಲೆ ! ನಿನ್ನಿಂದ ಎಂತಹ ಅವರಾಧವು ಘಟಿಸಿತ' ಆದ್ದದ್ದು ಆಗಿ ಹೋಯಿತು. ಇನ್ನಾದರೂ ಅದಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ನಡೆ ! ಲಕ್ಷಾವಧಿಯಾಗಿ ಹಿಂದೂ ರಮಣಿಯರು ನಿನ್ನ ಪ್ರಾಯಶ್ಚಿತ್ತದ ವಾರ್ತೆ ಯನ್ನು ಕೇಳಲು ಕಿವಿಯೆತ್ತಿ ಕುಳಿತಿರುವರು. ಅವರ ಆಶೆಯನ್ನು ಭಂಗವಾಡ ಬೇಡ. ಕರ್ತವ್ಯ ನಾಲನೆಗೆ ಹಿಂದೆ ಮುಂದೆ ನೋಡಬೇಡ. ನಿಶ್ಚಯವಾಗಿ ತಿಳಿ ದಿರುಃ- “ಒಂದುವೇಳೆ ನೀನು ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳದಿದ್ದರೆ ಅವರೇ ನಿನಗೆ ಪ್ರಾಯಶ್ಚಿತ್ತವನ್ನು ಮಾಡುವರು ! ಆಗ ನೀನೇನು ಮಾಡುವೆ? ” ಭೀಮಸಿಂಹ ವನಿತಾ- “ ಪದ್ಧಿ ನಿ” ನಿ ೫೧
ಪುಟ:ಪದ್ಮಿನಿ .djvu/೬೬
ಗೋಚರ