ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೊದಲನೆಯು ಖಂಡ ಮಾಡುವಂತಿಲ್ಲ. ಅಲ್ಲಾವುದ್ದೀನನು ಚಿತ್ತೂರಿಗೆ ಮಹಾಸೈನ್ಯದೊಂದಿಗೆ ಹೊರ ಟನು, ನಾವೂ ಕಾಬೂಲಿನ ಹಾದಿಯನ್ನು ಹಿಡಿಯೋಣ !” ಎಂದು ಒದರಿದನು. ಧರ್ಮಸಿಂಹ:- ಅದೇನು? ಕಾಬೂಲಿಗೆ ಯಾತಕ್ಕೆ? ಅಷ್ಟೊಂದು ದೂರ ಹೋಗುವ ಬಗೆ ಹೇಗೆ? ಅಂತಹ ಮಹಾ ಉದ್ದೇಶವು ತಾನೇ ಏನಿದೆ ? ಕರಣರಾಯ:-ಕಾಬೂಲಿಗೆ ಅಲ್ಲ. ಮೊಗಲ ಸೇನಾವತಿಯಾದ ತುರ್ಕಿಖಾನನು ಕಾಬೂಲದ ದಾರಿಯಲ್ಲಿ ಇರುವನು. ನನಗೆ ತುರ್ಕಿ ಖಾನನ ಬಳಿಯಲ್ಲಿ ಕೆಲಸವಿದೆ. ಅವನೊಬ್ಬನಕಡ ಮಾತಾಡುವುದು ಮಾತ್ರ ಉಳಿ ಯಿತು. ಮಿಕ್ಕು ಎಲ್ಲ ವಿಚಾರಗಳೂ ಇಲ್ಲಿಯ ವರೆಗೆ ನಮ್ಮ ಮನಸ್ಸಿನಂತೆಯೇ ಆದಂತಾದವು ! ಮಾರನೆಯ ದಿನವೇ ಕರಣರಾಯನೂ ಧರ್ಮಸಿಂಹನೂ ಕಾಬೂಲಿನ ಹಾದಿಯನ್ನು ಹಿಡಿದರು. ೫೫