ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಖ೦ಡ ಸ್ನೇರಿ ತಂಡತಂಡವಾಗಿ ದುರ್ಗದ ಬಾಗಿಲಿಗೆ ಬಂದು ನಿಂತರು. ಅವರಲ್ಲಿ ಕೆಲ ವರ ಕೈಯೊಳಗೆ ಒರೆಗಳೆದ ಖಡ್ಗವೂ ಕೆಲವರ ಕೈಯೊಳಗೆ ಛಾಲೆಯ ಕೆಲವರ ಕೈಯೊಳಗೆ ಕರಾರಿಯೂ ಒಪ್ಪುತ್ತಿದ್ದುವು. ಆ ಶಸ್ತ್ರಸಮೂಹವು ಉಷಃಕಾಲದ ಸಿಗ್ನವೂ ಮಾನವೂ ಆದ ಪ್ರಕಾಶದಲ್ಲಿ ಮೃದುಮಧುರವಾಗಿ ನಗುವಂತೆ ತೂರುತ್ತಲಿತ್ತು ಅಷ್ಟರಲ್ಲಿ ಮಹಾರಾಣಾ ಲಕ್ಷಣಸಿಂಗನೂ ಆತನ ಹಿಂದೆಯೇ ಭೀಮ ಸಿಂಹವೇ ಮೊದಲಾದ ನಾಯಕರೂ ಬಂದರು. ಹತ್ತರಕ್ಕೆ ಬಂದೊಡನೆಯೇ ಲಕ್ಷಣಸಿಂಗನು-ಬಂಧುಗಳೇ, ಇಂದು ಆಹೇರಿಯಾ, ಚಿತ್ತೂರಿನ ರಜ ಪೂತರ ಅದೃಷ್ಟದ ಪರೀಕ್ಷೆಯ ದಿವಸವಿದು! ದಿಲ್ಲಿಯ ವರಾಣರೊಡನೆ ವಿರೋ ಧವುಂಟಾಗಿರುವ ಸಂಗತಿಯಂತೂ ನಿನಗೆ ಗೊತ್ತೇ ಇದೆ. ಆದುದರಿಂದ ಈ ಸಲ ವಿಶ್ವಪ್ರಯತ್ನ ಮಾಡಿ ಆಹೇರಿಯಾದ ಬೇಟೆಯನ್ನು ನಿರ್ವಿಘ್ನದಿಂದ ಸಾಂಗ ಮಾಡಲೇಬೇಕು. ಆಹೇರಿಯಾ ಎಂದರೆ ಮೆವಾಡದ ಅದೃಷ್ಟ ಲಿಪಿಯು, ಆ ಲಿಪಿಯನ್ನು ಸಾಧ್ಯವಾದಮಟ್ಟಿಗೂ ಉಜ್ವಲವಾದ ವರ್ಣದಿಂದ ಚಿತ್ರಿಸ ಬೇಕು. ಒಂದು ಪ್ರಾಣಿಯು ಕೂಡ ಕೈ ತಪ್ಪಿಸಿಕೊಂಡು ಹೋಗದಂತೆ ನೋಡಿ ಕೊಳ್ಳಬೇಕು?” ಎಂದು ಉದ್ವೇಗಜನಕವಾದ ಸ್ವರದಿಂದ ಮಾತಾಡಿದನು. ಸೈನಿಕರೆಲ್ಲರೂ ಉಲ್ಲಾಸದಿಂದ ಜಯಧ್ವನಿಗೈದರು :- “ಮಹಾರಾಣಾ ಕೀ ಜಯ್ !?” ಎಂಬ ಗಂಭೀರವಾದ ಸ್ವರವು ದಿಕ್ಕು ದಿಕ್ಕುಗಳಲ್ಲಿ ಹರಡಿ ಕೊಂಡಿತು. ಆ ಮೇಲೆ ಎಲ್ಲರೂ ಸಾಲುಗೊಂಡು ನಡೆದರು. ಅವರು ಏರಿದ ಅಶ್ವಗಳ ಪಾದಾಘಾತದಿಂದ ಆರಾವಳಿ ಪರ್ವತವು ಕಂಪಿಸತೊಡಗಿತು. ಎಲ್ಲರಿಗಿಂತಲೂ ಮುಂದೆ ರಾಣಾಭೀಮಸಿಂಹನೂ ಅವನ ಹಿಂದೆ ರಾಜ ಕುಮಾರರೂ ಅವರ ಹಿಂದೆ ಮೇವಾಡದ ಸರದಾರರೂ ಹೊರಟಿದ್ದರು. ಕಟ್ಟ ಕಡೆಗೆ ರಾಣಾ ಲಕ್ಷಣಸಿಂಗನು ಕುದುರೆಯ ಮೇಲೆ ಕುಳಿತುಕೊಂಡು ಮೆಲ್ಲನೆ ನಡೆದು ಹೋಗುತ್ತಿದ್ದನು. ಅಕಸ್ಮಾತ್ ಒಬ್ಬ ಬಾಲಕನು ರಾಣಾಕ್ಷಣ ಸಿಂಗನ ಎದುರಿಗೆ ಬಂದು ತಲವಾಗಿ ನಿಂತನು. ಅವನ ವುಟ್ಟ ಕುದುರೆಯು ಮೇಲೆ ಕುಳಿತಿದ್ದ ಒಡೆಯನ ಅಭಿಪ್ರಾಯವನ್ನು ಸಮ್ಮತಿಸುವುದಿಲ್ಲವೋ ಏನೋ ೫೭