ಪದ್ಮನಿ ಎಂಬಂತೆ ಮುಂದೆ ಹೋಗಲು ಯತ್ನಿಸಿ ಕಾಲುಗಳನ್ನು ಎತ್ತಿ ಎತ್ತಿ ಇಡುತ್ತಿತ್ತು, ಬಾಲಕನು ಅದರ ಕಡಿವಾಣವನ್ನು ಎಳೆದು ಹಿಡಿದಿದ್ದು, ಅದು ತಲೆಯನ್ನು ಒಮ್ಮೆ ಮೇಲೆ ಒಮ್ಮೆ ಕೆಳಗೆ ಮಾಡುತ್ತಲಿತ್ತು. ಬಾಲಕನ ವಿಸ್ತಾರವಾದ ಹಣೆಯನ್ನೂ ಉನ್ನತವಾದ ನಿಲುವಿಕೆಯನ್ನೂ ಆನಂದದಿಂದ ಅರಳಿದ ಮುಖಮಂಡಲವನ್ನೂ ನೋಡಿ ರಾಣನ ಅಂತರಂಗದ ವಾತ್ಸಲ್ಯಭಾವನೆಯು ಉಕ್ಕಿಬರತೊಡಗಿತು ಅವನ ತೇಜೋದೀವವಾದ ಮುಖ ದಲ್ಲಿಯೂ ಇನ್ನೊಂದು ಉಜ್ವಲವಾದ ಪ್ರಭು ಪ್ರತಿಬಿಂಬಿತವಾದಂತೆ ಕಂಡು ಬಂದಿತು. ಅವರಿಬ್ಬರೂ ಒಂದರಮುಂದೊಂದು ಇಟ್ಟ ವಿದ್ಯುತ್ತಿನ ದೀಪಗ ಳಂತೆ ಕಂಗೊಳಿಸುತ್ತಿದ್ದರು. ರಾಣನು ಪ್ರೇಮಪೂರ್ಣವಾದ ಮುಖಲಕ್ಷಣ ವನ್ನು ತಳೆದು ಮುಗುಳ್ಳಗೆ ನಗುತ್ತ- ಬಾದಲ ! ಇದೇನು, ಇಲ್ಲಿಗೆ ಬಂದೆ ? ನಿನ್ನ ಹೇಳಿಕೆಯೇನು ? ” ಎಂದನು. ಬಾದಲನು ನದೀನೀ ರಾಣಿಯ ಅಣ್ಣನ ಮಗನು ಅವನು “ರಾಣಾಜೆ, ಈ ಸಾರೆ ನನಗೆ ಹನ್ನೆರಡು ವರುಷಗಳು ತುಂಬಿದುವು. ನಾನೂ ಆಹೇರಿಯಾದ ಬೇಟೆಗೆ ಬರಬೇಕನ್ನುತ್ತೇನೆ” ಎಂದು ವಿಜ್ಞಾಪಿಸಿಕೊಂಡನು. ರಾಣನು ನಕ್ಕು- ಅಭಿಮನ್ಯು ! ಇಷ್ಟೇಕೆ ಹಾತೊರೆಯುವೆ ? ಕುರು ಕ್ಷೇತ್ರದ ಸಮರದ ಸನ್ನಾಹವು ನಡೆದಿರುವುದು ! ಸ್ವಲ್ಪ ಸಮಾಧಾನ ತಾಳು, ನಿನ್ನ ಬಯಕೆಯು ಪೂರ್ಣವಾಗುವ ಸಮಯವು ಒದಗಿ ಬಂದಿರುವುದು! ಆಹೇರಿ ಯಾವು ಸಿಂಹಳೀಯರ ಉತ್ಸವವಲ್ಲ; ಮೇವಾಡದವರದು. ನೀನು ಆಹೇರಿ ಯಾಕೆ ನನ್ನೊಡನೆ ಬರಲು ಅಡ್ಡಿಯಿಲ್ಲ; ಆದರೆ ಇಂದಿನ ಮಟ್ಟಿಗೆ ನೀನು ಚಿತ್ತೂ ರಿನ ಸರ್ವಾಧಿಕಾರಿಯು ! ಇಂದು ನೀನೇ ರಾಣನು ! ನಾವು ತಿರುಗಿ ಬರುವ ವರೆಗೂ ಚಿತ್ತೂರನ್ನು ರಕ್ಷಿಸುವ ಕಾರ್ಯವು ನಿನ್ನದು ! ಇದಕ್ಕೇನೆನ್ನುವೆ ? ” ಎಂದು ಕೇಳಿದನು, ಬಾಲಕನ ಉಜ್ವಲವಾದ ಮುಖಮಂಡಲವು ಇನ್ನಷ್ಟು ಉದ್ದೀಪವಾ ಯಿತು. ರಾಣನು ಕ್ಷಣಕಾಲದ ವರೆಗೆ ಆ ವದನಮಂಡಲವನ್ನು ನಿರೀಕ್ಷಿಸುತ್ತ ೫೮
ಪುಟ:ಪದ್ಮಿನಿ .djvu/೭೩
ಗೋಚರ