ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಖ೦ಡ ಸುಮ್ಮನೆ ಇದ್ದನು ನೋಡ ನೋಡುತ್ತ ಅವನ ಅಂತರಂಗವು ಪ್ರೇಮ ವಾತ್ಸ ಲ್ಯಗಳಿಂದ ತುಂಬಿ ಕೊಂಡಿತು. ರಾಣನ ಕಣ್ಣುಗಳಲ್ಲಿ ಆನಂದಾಶ್ರುಗಳು ಉಕ್ಕಿ ಸುರಿದುವು. ಬಾಲಕನನ್ನು ಬಿಗಿಯಾಗಿ ಅಪ್ಪಿಕೊಳ್ಳಬೇಕೆಂದು ಅವನ ಬಾಹು ಗಳು ಹಾರೈಸತೊಡಗಿದುವು. ಆದರೆ ಇಬ್ಬರೂ ಕುದುರೆಯ ಮೇಲೆ ಕುಳಿತಿದ್ದ ರಾದುದರಿಂದ ರಾಣನು ಕೃತಕಾರ್ಯನಾಗಲಿಲ್ಲ. ಬಾದಲನು ಮುಗುಳ್ಳಗೆ ನಕ್ಕು ರಾಣಾಜಿ, ತಮ್ಮ ಅಪ್ಪಣೆಯಂತೆ ನಡೆದುಕೊಳ್ಳುವೆನು ಏನಾದರೂ ಮಹಾ ಉತ್ರಾತವು ಒದಗುವ ಪ್ರಸಂಗವು ಬಂದರೆ ಮಾತ್ರ ಸನ್ನಿಧಿಗೆ ಅರಿಕೆ ಮಾಡಿಕೊಳ್ಳಲು ನಾನೇ ಬರುವೆನು. "ಎಂದು ಹೇಳಿ ತನ್ನ ಕುದುರೆಯ ಮುಖವನ್ನು ದುರ್ಗದ ಕಡೆಗೆ ತಿರುಗಿಸಿ ಹೊರಟನು. ರಾಣನೂ ಉತ್ಪಾತವು ಒದಗುವ ಪ್ರಸಂಗವೇ ? ' ಎನ್ನುತ್ತ ತನ್ನ ಕುದುರೆ ಯನ್ನು ನಾಲ್ಕು ಹೆಜ್ಜೆ ವೇಗವಾಗಿ ನಡೆಯಿಸಿ ಉಳಿದವರನ್ನು ಕೂಡಿಕೊಂಡನು. ಅದೇ ಉದಯ ಹೊಂದಿದ ಬಾಲರವಿನ ಹೊಂಬಣ್ಣದ ಹೊಸ ಕಿರಣ ಗಳು ಆರಾವಲೀ ಪರ್ವತದ ಶಿಖರಗಳನ್ನು ಭೇದಿಸಿಕೊಂಡು ಬಂದು ಜಗತ್ತನ್ನು ಬೆಳಗಹತ್ತಿದುವು. ರಜಪೂತ ಸೇನೆಯು ಮುಂದೆ ಸಾಗಿತು. ವಸಂತ ಋತುವಿನ ಆರಂಭದಲ್ಲಿ ಮೇವಾಡ ಪ್ರಾಂತದ ಪ್ರಾತಃಕಾಲದ ಸೃಷ್ಟಿ ಸೌಂದರ್ಯವನ್ನು ವರ್ಣಿಸಲಳವಲ್ಲ. ನಾಲ ದಿಕ್ಕುಗಳಲ್ಲಿ ತರು-ಲತೆ ಗಳು ಹೊಸ ಚಿಗುರುಗಳನ್ನು ಧರಿಸಿ, ಉಜ್ವಲವಾದ ಹಸರು ಬಣ ದಿಂದ ಕಂಗೊಳಿಸುವುವು. ಇಂತಹ ಸ್ಥಿತಿಯಲ್ಲಿ ಪ್ರಾತಃಕಾಲದ ಸೂರ್ಯನ ಹೊಂಬ ಣ್ಣದ ಕಿರಣಗಳು ಆ ತರುಲತೆಗಳ ಹಸುರೆಲೆಗಳ ಮೇಲೆಯೂ, ಆಗಲೇ ಅರಳಿ ನಿಂತಿರುವ ತರತರದ ಬಣ್ಣದ ಕಾಡುಹೂಗಳ ಮೇಲೆಯ, ಜುಳುಜುಳು ನಿನಾದದೊಡನೆ ಹರಿಯುತ್ತಿರುವ ಝರಿಗಳ ನೀಲಜಲದ ತರಂಗಗಳ ಮೇಲೆಯೂ ಬೀಳಲು ಅವಕ್ಕೆ ವಿಚಿತ್ರವಾದೊಂದು ಕಾಂತಿಯು ಬರುವುದು, ಪ್ರೇಕ್ಷಕರು ಅವುಗಳನ್ನು ನೋಡಿ ಸೃಷ್ಟಿ ದೇವತೆ ' ಮಾಟವ ಮಾಡಿದಳೊ ' ಎಂಬಂತೆ ಆನಂದಪರವಶತೆಯಿಂದ ತಟಸ್ಪರಾಗಿ ನಿಂತುಬಿಡುವರು. ೫೯