ಪದ್ವಿನಿ ಆ ಮಂಚಿಕೆಯ ಮೇಲಿನ ತರುಣಿಯನ್ನು ನೋಡುತ್ತಿದ್ದನು. ಬರಬರುತ್ತ ಅವನ ಕುದುರೆಯು ಆ ಮಂಚಿಕೆಯ ಸಮೀಪಕ್ಕೆ ಬಂದಿತು ರಜಪೂತವೀರರ ಕೋಲಾ ಹಲದಿಂದ ಬೆಚ್ಚಿ ಬೆರಗಾಗಿ ಗೂಡುಗಳನ್ನು ಬಿಟ್ಟು ಹಾರಾಡುವ ಪಕ್ಷಿಗಳು ತನ್ನ ಹೊಲದ ಪೈರಿನ ಮೇಲೆ ಬಂದು ಕೂತು ಅದನ್ನು ಮೇಯುವುದನ್ನು ನೋಡಿ, ಆ ತರುಣಿಯು ತನ್ನ ಬಳಿಯಲ್ಲಿದ್ದ ಕವಣೆಯನ್ನು ಬೀಸಿ ಕಲ್ಲನ್ನು ಒಗೆ ದಳು ಹಕ್ಕಿಗಳು ಪುನಃ ಚಲವಿಚಲವಾಗಿ ಹಾರಾಡತೊಡಗಿದವು. ಅರುಣಸಿಂಹ ನು ಇವನ್ನೆಲ್ಲ ನೋಡುತ್ತಲೇ ಇದ್ದನು. ಅವನು ಮನಸ್ಸಿನಲ್ಲಿ- “ಸ್ವಭಾವಸುಂದ ರಿಯಾದ ಈ ಅಬಲೆಯ ಶರೀರವನ್ನು ಕೊಳೆಯಾದ ಹರಕು ಬಟ್ಟೆಯ ಮಲಿನ ವಾದ ಸೊಟ್ಟಿಡೊಂಕ ಬೆಳ್ಳಿಯ ಆಭರಣಗಳೂ ಹೇಗೆ ಅಂದಗೆಡಿಸಿರುವುವು! ನಮ್ಮ ಅರಮನೆಯೊಳಗಿನ ವಸ್ತಾಲಂಕಾರಗಳನ್ನು ತೊಡಿಸಿದರೆ ಆಗ ಇವಳು ಹೇಗೆ ತೋರಬಹುದು? ಇಂತಹ ದೃಢವಾದ ಶರೀರಾವಯವಗಳುಳ್ಳ ಕಮನೀಯ ವಾದ ಕಾಮಿನಿಯ ಮೂರ್ತಿಯನ್ನು ನಾನು ಹಿಂದೆ ಎಂದಾದರೂ ನೋಡಿರು ವೆನೇ? ” ಎಂದು ಮುಂತಾಗಿ ಭಾವಿಸುತ್ತಲಿದ್ದನು. - ರಜಪೂತ ಸೈನಿಕರು ಮಂಚಿಕೆಯನ್ನು ದಾಟಿ ಮುಂದಕ್ಕೆನಡೆದರು. ಅರು ಣಸಿಂಹನ ಕುದುರೆಯ ಅವನ ಶರೀರವನ್ನು ಅವರೊಡನೆ ಎಳೆದೊಯ್ದು ಬಿಟ್ಟಿತು. ಆದರೆ ಅವನ ಮನಸ್ಸು ಮಾತ್ರ ಹಿಂದೆಯೇ ಉಳಿಯಿತು. ಅವನು ಪುನಃ ಪುನಃ ಹಿಂದಿರುಗಿ ನೋಡುತ್ತಲಿದ್ದನು. ಒಮ್ಮಿಂದೊಮ್ಮೆ “ ಜಯಮ್ ! ಮಹಾರಾಣಾಕೀ ಜಯಮ್! ” ಎಂಬ ಮಹಾಧ ನಿಯು ಎದುರಿನ ಆರಣ್ಯದಲ್ಲಿ ಮಾರ್ದನಿಗೊಂಡಿತು. ಅರುಣ ಸಿಂಹನು ಎಚ್ಚತ್ತು ನೋಡಿದನು. ಅವರೆಲ್ಲರೂ ನಿರ್ದಿಷ್ಟವಾದ ಸ್ಥಳಕ್ಕೆ ಒಂದು ಮುಟ್ಟಿದ್ದರು ! ಎದುರಿಗಿರುವುದೇ ಗಿರಿನಾರದ ಮಹಾರಣ್ಯ! ಅವರು ಇನ್ನು ಬೇಟೆಯನ್ನು ಆರಂಭಿಸಬೇಕು. ಆಗ ಮಹಾರಾಣನು:- ಸೈನಿಕರೇ ! ನೀವೆಲ್ಲರೂ ಅರಣ್ಯವನ್ನು ಸುತ್ತಿ ಕೊಂಡು ನಿಂತುಕೊಳ್ಳಿರಿ. ನಾನೂ ಕಾಕಜೆಯವರೂ ಒಳಗೆ ಸೇರಿ ಬೇಟೆ ಯನ್ನು ಆರಂಭಿಸುವೆವು. ಎಚ್ಚರದಿಂದಿರಬೇಕು! ಒಂದೇ ಒಂದು ಪ್ರಾಣಿಯು ಕೂಡ ತಪ್ಪಿಸಿಕೊಂಡು ಹೋಗಕೂಡದು. ಮೇವಾಡದ ಅದೃಷ್ಟವು ಇಂದು ನಿಮ್ಮ ಕೈಯಲ್ಲಿರುವುದು! ?” ಎಂದು ಗಾಂಭೀರ್ಯದಿಂದ ನುಡಿದನು. ೬೨
ಪುಟ:ಪದ್ಮಿನಿ .djvu/೭೭
ಗೋಚರ