ವರಸೆಯು ಖಂಡ ಎರಡನೆಯ ಪರಿಚ್ಛೇದ on - ಮಹಾರಾಣನು ಸೈನಿಕರಿಗೆ ಹೀಗೆಂದು ಆಜ್ಞಾಪಿಸಿ ಭೀಮಸಿಂಹನೊ ಡನೆ ಅರಣ್ಯವನ್ನು ಪ್ರವೇಶಿಸಿ ಬೇಟೆಯನ್ನು ಆರಂಭಿಸಿದನು. ರಜಪೂತರು ಅರ ಣ್ಯವನ್ನು ಬಳಸಿಕೊಂಡು ನಿಲ್ಲಲು ಬೇರೆ ಬೇರೆ ದಿಕ್ಕಿಗೆ ಹೊರಟರು. ಆಗ ರಾಜ ವುತ್ರನಾದ ಅರುಣಸಿಂಹನು' ನನಗೆ ಈ ಸ್ಥಳದ ವರಿಚಯವು ಚೆನ್ನಾಗಿರು ವುದು; ಅದರಿಂದ ನಾನು ಇಲ್ಲಿಯೇ ನಿಲ್ಲುವೆನು, ನೀವು ಉಳಿದ ಕಡೆಗಳಲ್ಲಿದ್ದು ಕೊಂಡು ಬೇಟೆಯನ್ನು ನೋಡಿಕೊಳ್ಳಿರಿ. ನಿಮಗೆ ಈ ದಿಕ್ಕಿನ ಯೋಚನೆಯೇ ಬೇಡ.” ಎಂದು ಹೇಳಿದನು, ಸೈನಿಕರೆಲ್ಲರೂ ದಿಕ್ಕು ದಿಕ್ಕಿಗೆ ಹೋಗಿ ಅರಣ್ಯವನ್ನು ಸುತ್ತುಗಟ್ಟಿ ನಿಂತು ಬೇಟೆಯನ್ನು ಆರಂಭಿಸಿದರು. ಅರುಣಸಿಂಹನು ನಿಂತಿದ್ದ ಭಾಗವು ಸ್ವಲ್ಪ ಬೈಲಾ ಗಿದ್ದುದರಿಂದ ಆ ಕಡೆಗೆ ಬೇಟೆಯ ಮೃಗಗಳು ಎಷ್ಟು ಹೊತ್ತಾದರೂ ಬರಲೇ ಇಲ್ಲ. ಅವನು ಭಲ್ಲೆಯನ್ನು ಹಿಡಿದುಕೊಂಡು ನಿಂತು ನಿಂತು ಬೇಸತ್ತನು. ಕಡೆಗೆ ಅವನ ಮನಸ್ಸು ಸಹಜವಾಗಿ ತನ್ನ ಪೂರ್ವದ ಬೇಟೆಯ ಕಡೆಗೆ ತಿರುಗಿತು ; ಅರುಣ ಸಿಂಹನು ತಿರುಗಿ ನೋಡಿದನು. ಆ ತರುಣಿಯು ಆಗಲೂ ಅದೇ ಮುಂಚಿ ಕೆಯ ಮೇಲೆ ಹಾಗೆಯೇ ನಿಂತಿದ್ದಳು ! ಅರುಣಸಿಂಹನಿಗೆ ಹೊರಗಿನ ಬೇಟೆಯು ಸಿಕ್ಕಲಿಲ್ಲ. ಆದುದರಿಂದ ಅವನು ಅಂತರಂಗದಲ್ಲಿ ಅಪೂರ್ವವಾದೊಂದು ಬೇಟೆಯ ಆಲೋಚನೆಯನ್ನು ಆರಂಭಿಸಿ ದ್ದನು. ಹೊರಗೆ ಬೇಟೆಗೆ ವನ್ಯಮೃಗವು ಸಿಕ್ಕದೆ ಇದ್ದುದರಿಂದ ಅವನು ಒಳಗೆ ಚಿಂತೆಯ ಮೇಲೆ ಚಿಂತೆಯ ಆಘಾತಗಳಿಂದ ಮನಸ್ಸನ್ನು ಕತವಿಕೃತವಾಗಿ ಮಾಡಿಬಿಟ್ಟನು ! ಅವನು '- “ ಈ ತರುಣಿಯು ಯಾರು ? ಇಂತಹ ನಿರ್ಜನ ವಾದ ಅರಣ್ಯದ ನೆರೆಯಲ್ಲಿ ಒಬ್ಬಳೇ ನಿಂತಿರುವಳಲ್ಲಾ ! ಈಕೆಯು ಭಿಲ್ಲರವಳೇ ? ರಜಪೂತ ಕನ್ನಿಕೆಯೇ ? ಇವಳ ಮನೆಯು ಎಲ್ಲಿರುವುದು ? ಒ೦ದು ತಾಸಾ ಯಿತು. ಎರಡು ತಾಸಯಿತು, ಸಾಯಂಕಾಲವಾಗುತ್ತ ಬಂದಿತು. ಇವಳು ೬೩
ಪುಟ:ಪದ್ಮಿನಿ .djvu/೭೮
ಗೋಚರ