ಮೂರನ, ಖ೦a ರಾಣನಿಗೆ ಆ ಮಾತುಗಳಿಂದ ಎಷ್ಟು ಮಾತ್ರವೂ ಸಮಾಧಾನವಾದಂತೆ ತೋರಲಿಲ್ಲ. ಅವನು ಅರುಣ ಸಿಂಹನನ್ನು ದುರದುರನೆ ನೋಡುತ್ತ ಬಳಿಯಲ್ಲಿದ್ದ ಖಡ್ಗವನ್ನು ಹಿರಿದು ಎರಡೇ ಹಾರು ಹಾರಿ ಅವನ ಬಳಿಗೆ ಹೋದನು. ಅಷ್ಟರಲ್ಲಿ ಭೀಮಸಿಂಹನು ನಡುವೆ ಬಂದು ಅವನನ್ನು ತಡೆದನು, ಮತ್ತೊಬ್ಬ ಸರದಾರನು ತಲೆತಗ್ಗಿಸಿ ನಿಂತಿದ್ದ ಅರುಣ ಸಿಂಹನನ್ನು ದೂರ ಸರಿಸಿ ನಿಲ್ಲಿಸಿಕೊಂಡನು. ಅಷ್ಟರಲ್ಲಿ ದೂರದಲ್ಲಿ ಮಹಾವೇಗದಿಂದ ಪುಟನೆಗೆದು ಹಾರುತ್ತ ಬರುತ್ತಿ ರುವ ಕುದುರೆಯ ಖುರಗಳ ಧ್ವಸಿಯು ಕೇಳಿಬರತೊಡಗಿತು. ಎಲ್ಲರೂ ಕಿವಿಗೊಟ್ಟು, ಆಲಿಸತೊಡಗಿದರು. ಆ ಕುದುರೆಯು ಚಿತ್ತೂರು ದುರ್ಗದ ದಾರಿಯಿಂದ ಅವರ ಕಡೆಗೆ ಬರುವುದೆಂದು ನಿರ್ಣಯವಾಯಿತು. ಸಕಲರೂ ವಿಸ್ಮಿತನೇತ್ರದಿಂದ ಆ ಕಡೆಗೇ ನೋಡುತ್ತ ನಿಂತುಕೊಂಡರು. ಕ್ಷಣಮಾತ್ರದಲ್ಲಿ ಅಶ್ವವೂ ಅಶ್ವಾ ರೋಹಿಯ ಅವರ ಎದುರಿಗೆ ಬಂದರು ಮೇಲೆ ಕುಳಿತ ಬಾಲಕನು ಕುದುರೆಯ ವೇಗವನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದನು. ಅದು ಅವರ ಬಳಿಯಲ್ಲಿ ಬಂದು ನಿಂತಿತು. ಈ ಅಶ್ವಾರೋಹಿಯು ಯಾರು ? ಬಾದಲನು 1 ಅವನ ಕುದರೆಯ ಬೆನ್ನ ಮೇಲೆ ಹಿಂಗಡೆಗೆ ಭಯಂಕರವಾದೊಂದು ವರಾಹದ ಶವವೂ ಇದ್ದಿತು ರಾಣನು ವಿಸ್ಮಿತಸ್ವರದಿಂದ ಬಾದಲ ! ಇದೇನು ? ನೀನು ಇಲ್ಲಿಗೇಕೆ ಬಂದೆ ? ” ಎಂದನು. ಬಾದಲ '—“ ರಾಣಾಜೀ, ಅತ್ಯಂತ ಅವಸರದ ಕೆಲಸವಿದ್ದುದರಿಂದ ಬಂದೆನು, ಅಲ್ಲಾವುದ್ದೀನ್ ! ಅಲ್ಲಾವುದ್ದೀನನು ಮಹಾ ಸೈನ್ಯದೊಂದಿಗೆ ಮೇವಾ ಡವನ್ನು ಪ್ರವೇಶಿಸಿರುವನಂತ. ಅವನ ಸೈನಿಕರು ನಮ್ಮ ದೇಶದ ಗಡಿಯಲ್ಲಿದ್ದ ಶಂಕರದೇವನ ಮಂದಿರವನ್ನು ಮುತ್ತಿದುದನ್ನು ನಮ್ಮ ಕಡೆಯ ಗುಪ್ತಚಾರರು ನೋಡಿ ಬಂದಿರುವರು, ದುರ್ಗದ ದ್ವಾರವನ್ನು ಮುಚ್ಚಲೇ ಬೇಕು ” ಎಂದು ತೇಕುತ್ತ ( ಉಬ್ಬ ಸಬಡುತ್ತ ) ಕುದುರೆಯ ಮೇಲೆ ಕುಳಿತೇ ಮಾತಾಡಿದನು. ಆಕಸ್ಮಿಕವಾದೊಂದು ಸ್ಫೂರ್ತಿ-ವಿಸ್ಮಯಗಳ ವಿದ್ಯುತ್ ಪ್ರವಾಹವು ಆ ರಜಪೂತ ಸೈನಿಕ ಸೇನಾಪತಿಗಳ ಅಂತರಂಗದೊಳಗಿಂದ ಹಾದು ಹೋಯಿತು. ಸಕಲರೂ ಖಡ್ಗವನ್ನು ಹಿರಿದು ನಿಂತರು. “ಜಯ್! ಮಹಾರಾಣಾಕಿ ಜಯಮ್!” ಎಂಬ ಜಯಘೋಷವು ವನವನಾಂತರವನ್ನು ವ್ಯಾಪಿಸಿತು. ೬೭
ಪುಟ:ಪದ್ಮಿನಿ .djvu/೮೨
ಗೋಚರ