ಪದ್ಮನಿ ರಾಣನೂ ಸರದಾರರೂ ನಗರಾಭಿಮುಖವಾಗಿ ಹೊರಟರು. ಆಗ ಬಾದ ಲನು ಸ್ವಲ್ಪ ಹಿಂದೆ ಉಳಿದು ಅರುಣ ಸಿಂಹನ ಬಳಿಗೆ ಹೋಗಿ- “ಕುಮಾರ, ಏನು ಮಾಡಿಬಿಟ್ಟೆ ? ಇಂತಹ ಆವತ್ತಿನ ಸಮಯದಲ್ಲಿ ನಿನ್ನನ್ನು ಕಳೆದುಕೊಂಡೆ ವಲ್ಲಾ ! ” ಎಂದನು. ಅರುಣಸಿಂಹನು ಬಾದಲನ ಕೋಮಲ ಹೃದಯದ ಮಾತುಗಳನ್ನು ಕೇಳಿ ಅವನ ಪ್ರೇಮಪೂರ್ಣವಾದ ಮುಖಭಾವವನ್ನೂ ಸಹಾನುಭೂತಿಗೂಡಿದ ದೃಷ್ಟಿ ಯನ್ನೂ ನೋಡಿ, ಕಣ್ಣೀರು ಸುರಿಸತೊಡಗಿದನು. ಅವನು - “ಬಾದಲ' ನೀನು ಇಂದು ಚಿತ್ತೂರನ್ನು ಉದ್ಧರಿಸಿದೆ, ಹಾಗೆಯೇ ಚಿತ್ತೂರಿಗೆ ಈಗ ಒದಗಿ ಬಂದಿ ರುವ ಸಂಕಟವನ್ನು ನೀನೇ ನೀಗುವೆಯೆಂದು ಆಶಿಸುವೆನು ನಾನು ದುರ್ದೈವಿಯು, ನನ್ನ ಸಲುವಾಗಿ ವ್ಯರ್ಥವಾಗಿ ವ್ಯಸನಡುವೆಯೇಕೆ? ನನ್ನ ಅಪರಾಧಕ್ಕೆ ತಕ್ಕ ಶಿಕ್ಷೆಯು ವಿಧಿಸಲ್ಪಟ್ಟಿತು. ರಾಣರವರು ನ್ಯಾಯಾನ್ಯಾಯಗಳನ್ನು ವಿಚಾರಿಸಿಯೇ ನನಗೆ ಈ ಶಿಕ್ಷೆಯನ್ನು ವಿಧಿಸಿದರು. ನಾನು ಇನ್ನು ಈ ಸುಟ್ಟ ಮೊರೆಯನ್ನು ತೋರಿಸಿಕೊಂಡು ಚಿತ್ತೂರನ್ನು ಪ್ರವೇಶಿಸಲಾರೆನು, ಹೋಗು; ವೀರಶ್ರೇಷ್ಟನೇ ಹೋಗು, ಪ್ರಾಣವನ್ನು ಕೂಡ ಲಕ್ಷಿಸದೆ, ಚಿತ್ತೂರನ್ನು ಉದ್ಧರಿಸಲು ಯತ್ನಿಸು. ನನ್ನ ದೈವದಲ್ಲಿ ಅಂತಹ ವುಣ್ಯಕರ್ಮವು ಇಲ್ಲದೆ ಹೋಯಿತು ತಡವಾಡ ಬೇಡ; ಎಲ್ಲರೂ ಹೋಗಿಬಿಟ್ಟರು' ನಾನು ವನವಾಸಕ್ಕೆ ಬೆದರುವುದಿಲ್ಲ. ಮಾತೃ ಭೂಮಿಗೆ ಆವತ್ತು ಒದಗಿರುವಾಗ ಅದನ್ನು ನೀಗುವುದಕ್ಕೆ ನಾನು ನೆರವಾಗದೆ ಹೋದೆನಲ್ಲ ! ಜನ್ಮದಾತೆಗೆ ನನ್ನ ಜನ್ಮವು ಭಾರವಾಗಿ ಸಂದಿತಲ್ಲ' ಎಂದು ಚಿಂತಿಸುವೆನು” ಎಂದನು. ಹಸುಳನಾದ ಬಾದಲನ ಕೋಮಲವಾದ ಅಂತಃಕರಣವು ದುಃಖದಿಂದ ಕರಿಗಿ ನೀರಾಯಿತು. ಆದರೆ ಮಾಡುವುದೇನು? ಅವನು ದುಃಖಿತಾಂತಃಕರಣದಿಂದ ಕುದುರೆಯನ್ನು ತಿರುಗಿಸಿಕೊಂಡು * ಅರುಣ, ಆದದ್ದು ಆಯಿತು. ಚಿತ್ತೂ ರನ್ನು ಮಾತ್ರ ಮರೆಯಬೇಡ,' ಎನ್ನುತ್ತ ವೇಗದಿಂದ ನಡೆದು ಉಳಿದವರನ್ನು ಸೇರಿಕೊಂಡನು. 9 0
ಪುಟ:ಪದ್ಮಿನಿ .djvu/೮೫
ಗೋಚರ