ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾವಿತ್ರಿದೇವಿ ಮೊದಲಾದ ಸ್ತ್ರೀರತ್ನಗಳ ಚರಿತ್ರಮಹಿಮೆಯು ನಮ್ಮ ವರ್ಗದ ಜೀವಾಣುಗಳಲ್ಲಿ ಸಹ ನೆಲೆಗೊಂಡಿರುವುದೇ ಕಾರಣವು ಇದೇ ಪ್ರಕಾರ ನಮ್ಮ ಅರ್ವಾಚೀನಕಾಲದ ಇತಿಹಾಸದಲ್ಲಿ ಹೆಸರಾದ ಸನೀ ಆಹಲ್ಯಾಬಾಯಿ ಮೊದಲಾದ ನಾರೀಮಣಿಗಳ ಚರಿತ್ರವನ್ನು ಕೇಳಿ ಕೇಳಿ ಓದಿ ಓದಿ ತನ್ಮಯವಾದರೆ ಅವರ ಉಜ್ವಲಗುಣಗಳಿಂದ ತುಂಬಿ ನಮ್ಮ ಸದ್ಯದ ಸ್ತ್ರೀಸಮಾಜವು ಹೊಸಕಳೆ ಯಿ-ದ ಕಂಗೊಳಿಸುವುದರಲ್ಲಿ ಸಂದೇಹವಿಲ್ಲ. ವೀರರೂ ಅಭಿಮಾನಿಗಳೂ ಕರ್ತವ್ಯ ತತ್ಪರರೂ ಆದ ಕಥಾನಾಯಕರ ಚರಿತ್ರ ವಾಚನದಿಂದ ಪುರುಷರಲ್ಲಿ ಹೊಸ ಹುರುವು ಹುಟ್ಟದಿರದು. ಅತಏವ ಸಾಮಾನ್ಯ ಕಥೆಕಾದ ಎರಿಗಳಿಗಿತ ಇಂಥ ಗ್ರಂಥಗಳನ್ನು ರಚಿಸುವದರ ಮನೋಧನಗಳನ್ನು ತೊಡ ಗಿಸಿರುವ ಲೇಖಕ ಅನಂತ ಉಪಕಾರವನ್ನು ಪೊ ತ್ಸಾ ಕ ರೂಪದಿಂದ ಕೆಲಮಟ್ಟಿಗಾದರೂ ತಿರುಗಿ ಮುಟ್ಟಿಸುವದು ಸಮಾಜದ ಕರ್ತವ್ಯವು. ನನ್ನ ವಿದ್ಯಾರ್ಥಿಯೊಬ್ಬನು ರಚಿಸಿರುವ ಇಂಥದೊಂದು ಗ್ರಂಧವನ್ನು ಸಹೃದಯರಾದ ಕರ್ನಾಟಕ ಬಂಧುಗಳ ಮುಂದಿರಿಸುವುದು ನನಗೆ ವಿಶೇಷ ಆನಂದದ ಮತ್ತು ಅಭಿಮಾನದ ಸ ಗತಿಯಾಗಿದೆ ಗುಣಗ್ರಾಹಕರಾದ ಕನ್ನಡಿಗರಿಂದ ತಕ್ಕ ಪ್ರೋತ್ಸಾ ಹನವು ದೊರೆಯಲೆಂದು ಕೋರುವೆನು, ಹೆಣ್ಣು ಮಕ್ಕಳ ಪ್ರಸಿಂಗ್ ಕಾಲೇಜ್ | ವೆಂಕಟರಾವ ನ. ಮಗದಲ. ಧಾರವಾಡ ಹೃದಯ ನಿವೇದನೆ. ಆರ್ಯರೇ, ದಯಾಘನನಾದ ಶ್ರೀ ಹರಿಯ ಕೃಪೆಯಿಂದ ಕರ್ಣಾಟಕ ಹಿತೈ ಷಿಣೀ ಗ್ರಂಥಮಾಲೆಯು ದ್ವಿತೀಯ ಪುಷ್ಪವನ್ನು ಸುಜ್ಞರಾದ ತಮ್ಮ ಮುಂದಿರಿ ಸುವ ಸುಯೋಗವು ಒದಗಿದ್ದು ಅತಿಶಯ ಆನಂದದ ಸಂಗತಿಯು, ಈ ಸತಾ ರ್ಯಕ್ಕೆ ಬಹುರೂವದಿಂದ ಗೋಚರಿಸಿ ಬಹು ವಿಧದಿಂದ ಸಹಾಯಮಾಡಿದ ಕರ್ಣಾಟಕ ಸಮಾಜರೂಪಿಯಾದ ಭಗವಂತನನ್ನು ಅನನ್ಯಭಾವದಿಂದ ಅಭಿವಂ ದಿಸುವೆನು. ಈ ವೀರ ರಸಪ್ರಧಾನವಾದ ಐತಿಹಾಸಿಕ ಕಥೆಯ ಐತಿಹಾಸಿಕ ಸಂಗತಿ ಗಳಲ್ಲಿ ಎಷ್ಟು ಮಾತ್ರವೂ ವಿಪರ್ಯಾಸವನ್ನುಂಟುಮಾಡದೆ ಸುನೀತಿ ಪ್ರತಿವಾದ ಕವಾದ ಮನೋಹರ ಕಾದಂಬರಿಯನ್ನು ರಚಿಸಿದ ವಂಗ ಕವಿಗಳ ಜಾಣೆಯು ಅತ್ಯಂತ ಪ್ರಶಂಸನೀಯವೇ ಸರಿ. ನಾನು ಆ ಬಂಗಾಲಿ ಭಾಷೆಯ ಗ್ರಂಥವನ್ನು ಕೆಲವು ಸಾಮಾಜಿಕ ಆಚಾರವಿಚಾರಗಳಲ್ಲಿ ಮಾತ್ರ, ನಮ್ಮ ಜನರಿಗೆ ರುಚಿಸಬ ಹುದಾದ ರೀತಿಯಿಂದ ಹೆಚ್ಚು ಕಡಿಮೆಗಳನ್ನ ಮಾಡಿ ಕನ್ನಡಕ್ಕೆ ರೂಪಾಂತರಿ