ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾರನೆಯ ದಿಂಡ ನಾಲ್ಕನೆಯ ಪರಿಚ್ಛೇದ -~- ರಾಣಾ ಲಕ್ಷಣ ಸಿಂಗನು ಆಹೇರಿಯಾದ ಬೇಟೆಯಿಂದ ಹಿಂದಿರುಗಿ ಬಂದು ದುರ್ಗವನ್ನು ಪ್ರವೇಶಿಸಿದ ಬಳಿಕ ಎಲ್ಲ ಸೈನಿಕರನ್ನೂ ಸರದಾರರನ್ನೂ ಕೂಡಿಸಿ ಸಭೆಗೊಂಡು'- ಪ್ರಿಯ ಸರದಾರರೇ, ಇಂದಿನಿಂದ ಈ ನಮ್ಮ ಅಭಿ ನವ ಅಭಿಮನ್ಯುವನ್ನು ಮೇವಾಡದ ಸೇನಾನಾಯಕನಾಗಿ ಆರಿಸಿರುವೆನು. ಎಲ್ಲರೂ ಆತನ ಅಪ್ಪಣೆಯಂತೆ ನಡೆದುಕೊಳ್ಳತಕ್ಕದ್ದು, ಬಾದಲ ! ನೀನು ನಿನ್ನ ಸೈನಿಕರಿಗೆ ಕಾಲಕಾಲಕ್ಕೆ ಯಧಾಯೋಗ್ಯವಾದ ಅಪ್ಪಣೆಗಳನ್ನು ಕೊಟ್ಟು ಅವರ ಕಡೆಯಿಂದ ಕೆಲಸಮಾಡಿಸಿಕೊಳ್ಳತಕ್ಕದ್ದು. ಸಂಪೂರ್ಣ ಸಾವಧಾನದಿಂದಿದ್ದು ಕೊಂಡು ವರಾಣರಿಂದ ದುರ್ಗವನ್ನು ರಕ್ಷಿಸಿಕೊಳ್ಳುವುದು ನಿನಗೆ ಕೂಡಿತು. ಸಿಂಹಳೀಯರ ಮರ್ಯಾದೆಗೆ ಭಂಗಬರದಂತೆ ನೋಡಿಕೋ, ಏನಾದರೂ ವಿಶೇ ನವಾದ ಆದ್ಯಾಲೋಚನೆಗಳಿದ್ದರೆ ರಾಣಾ ಭೀಮಸಿಂಹರ ಸಲಹೆಗಳನ್ನು ಕೇಳಿ ಕೊಂಡು ಅವರ ಅನುಮತಿಯಂತೆ ನಡೆಯಬಹುದು, ” ಎಂದು ಸೈನಿಕರಿಗೂ ಬಾದಲನಿಗೂ ಆಜ್ಞಾಪಿಸಿದನು. ಇನ್ನೂ ಹಲವು ಮಾತುಕಧೆಗಳಾದಬಳಿಕ ಸಭಾವಿಸರ್ಜನವಾಯಿತು, ಸರದಾರರೂ ಸೈನಿಕರೂ ಯುದ್ದದ ಸಿದ್ಧತೆಯ ವಿಷಯವಾಗಿ ಆವೇಶದ ಮಾತು ಗಳನ್ನಾಡುತ್ತ ತಮ್ಮ ತಮ್ಮ ಮನೆಗಳಿಗೆ ನಡೆದರು. ಬಳಿಕ ಬಾದಲನು ರಾಣನ ಅಪ್ಪಣೆಯನ್ನು ನಡೆದುಕೊಂಡು ನಮ್ಮಿನಿಯ ಕಕ್ಕನಾದ ಗೊರಾಸಿಂಗನ ಮನೆಗೆ ಬಂದನು. ಗೋರಾಸಿಂಗನು ಆ ಸಮಯದಲ್ಲಿ ಮನೆಯ ಮುಂದಿನ ಜಗುಲಿಯಲ್ಲಿ ಒಂದು ಮಂಚದ ಮೇಲೆ ಕುಳಿತುಕೊಂಡು ತನ್ನ ಅರ್ಧನರೆತ ಮೀಸೆಯ ಕುಡಿ ಯನ್ನು ಹುರಿ ಮಾಡುತ್ತ, ನಡುನಡುವೆ ಹುಬ್ಬುಗಳನ್ನು ಸುರುಗಿಸಿಕೊಂಡು ಏನೋ ಯೋಚನೆ ಮಾಡುತ್ತಲಿದ್ದನು. ಅವನು ಬಾದಲನನ್ನು ಕಂಡಕೂಡಲೆ ಕಿರು ನಗೆಯನ್ನು ನಕ್ಕು:- ಏನು ನಮ್ಮ ಸೌಭಾಗ್ಯವು ! ಸೇನಾವತಿ ಮಹಾ ೭೭