ಪದ್ಮನಿ ಶಯರೇ, ಪ್ರತ್ಯಕ್ಷ ನಮ್ಮ ಬಾಗಿಲಿಗೆ ಬಂದರು ! ಸೇನಾಪತಿಗಳೇ ಎಲ್ಲವೂ ಸರಿ ಯಾಗಿರುವುದಿಷ್ಟೇ ? ಎಂದನು. ಬಾದಲ'-ದಾದಾ' ಸೇನಾಪತಿಯು ಯಾರು ? ನಾನೋ ? ನೀವೋ ? ನಾನಂತೂ ನಿಮ್ಮನ್ನು ನಂಬಿಯೇ ಈ ಮಹಾಕಾರ್ಯವನ್ನು ಒಪ್ಪಿಕೊಂಡಿರುವೆನು. ಗೋರಾಸಿಂಗನು ಎದ್ದು ನಿಂತು ತನ್ನ ವಿಶಾಲವಾದ ಬಾಹುಗಳಿಂದ ಬಾದ ಲನನ್ನು ಅಪ್ಪಿಕೊಂಡು ಅವನ ಎರಡೂ ಹೆಗಲುಗಳ ಮೇಲೆ ತನ್ನ ಮುಂಗೈಗಳ ನ್ನಿಟ್ಟು ಎರಡು ಬಾರಿ ಗಟ್ಟಿಯಾಗಿ ಒತ್ತಿದನು, ಮತ್ತು ನಗುತ್ತ “ ಎಂಧ ಹುಚ್ಚು ಭ್ರಮೆ ನಮ್ಮ ಕಾಲವು ಕಳೆದು ಹೋಗಿದೆ. ತಲೆಯ ಕೂದಲೆಲ್ಲ ಬೆಳ್ಳಗಾಗಿ ಹೋಗಿವೆ. ಈಗ ನಮ್ಮ ಕೈಯಿಂದ ಏನಾದೀತು? ಮಾಡುವ ಕಾಲ ದಲ್ಲಿ ಎಲ್ಲವನ್ನೂ ಮಾಡಿದೆವು. ಈಗ ವಿಶ್ರಾಂತಿಯ ಕಾಲ; ಮಂಚದ ಮೇಲೆ ಕುಳಿತುಕೊಂಡು, ಸುತ್ತಲೂ ಸಣ್ಣ ಸಣ್ಣ ಹುಡುಗರು ಕುಳಿತು ಉತ್ಸುಕತೆ ಯಿಂದ ಕೇಳುತ್ತಿರಲು, ಅವರಿಗೆ ಆ ಸುದ್ದಿ ಈ ಸುದ್ದಿಗಳನ್ನು ಹೇಳುತ್ತ ಕಾಲ ಕಳೆಯುವ ದಿವಸವಿದು! ಈಗ ನಿಮ್ಮಂಥವರು ಮಾಡುವ ಶೌರ್ಯಸಾಹಸಗಳ ಸಂಗತಿಗಳನ್ನು ಕೇಳಿ ಆನಂದಬಡುವುದಿಷ್ಟೇ ನಮ್ಮ ಕೆಲಸವು.” ಎಂದನು. ಗೊರಾಸಿಂಗನ ಒತ್ತುವಿಕೆಯಿಂದ ಬಾದಲನ ಶರೀರವೆಲ್ಲಾ ಒಮ್ಮಿಂದೊ ಕುಸಿಯುವಂತೆ ತೋರಿತು. ಅವನು ಕಳವಳದಿಂದIC ದಾದಾ' ದಾದಾ! ಏನು ಮಾಡುತ್ತೀರಿ ? ಸೇನಾಪತಿಯ ಶರೀರದ ಕಸುವನ್ನು ಪರೀಕ್ಷಿಸುತ್ತೀ ರೇನು? ನನ್ನ ಹೆಗಲೂ ನಡುವೂ ಕುಸಿದು ಹೋದುವು. ತಮ್ಮ ಪರೀಕ್ಷೆಯಲ್ಲಿ ನಾನು ಸರಿಯಾಗಿ ಉತ್ತೀರ್ಣನಾಗಲಾರೆನು.” ಎಂದನು. ಗೊರಾಸಿಂಗ'- ಬಾಲಕನೇ, ನೀನು ನಿಜವಾಗಿಯೂ ಸೇನಾಪತಿಯ ಕಾರ್ಯಕ್ಕೆ ಯೋಗ್ಯನೇ ಸರಿ. ಸೇನಾಪತಿಗೆ ತಕ್ಕ ಶಾರೀರದಾರಣ್ಯವನ್ನು ದೇವರು ನಿನಗೆ ದಯಪಾಲಿಸಿರುವನು, ರಾಣಾ ಭೀಮಸಿಂಹನನ್ನೂ ನಾನು ಒಮ್ಮೆ ಇದೇ ರೀತಿಯಿಂದ ಪರೀಕ್ಷಿಸಿದ್ದನು. ಆದರೆ ಅವನು ಅದರಲ್ಲಿ ಸರಿಯಾಗಿ ಉತ್ತೀರ್ಣನಾಗಿರಲಿಲ್ಲ. ಅವನು ನನ್ನ ಮೊದಲನೆಯ ಆಘಾತಕ್ಕೆ ಕುಸಿದು ಕೂತುಬಿಟ್ಟಿದ್ದನು. ನೀನು ನನ್ನ ಮೂರು ಆಘಾತಗಳನ್ನೂ ಸರಿಯಾಗಿ ಸಹಿ ೬೮
ಪುಟ:ಪದ್ಮಿನಿ .djvu/೯೩
ಗೋಚರ