ಮರನಯ ಖಂಡ ಸಿಕೊಂಡೆ. ಚಿಂತೆಯಿಲ್ಲ; ರಾಣಾ ಲಕ ಣಸಿಂಗನು ಚೆನ್ನಾಗಿ ನೋಡಿಯೇ ನಿನ್ನನ್ನು ಆರಿಸಿದನು. ಅಭಿಮನ್ಯು ! ಚಕ್ರವ್ಯೂಹವನ್ನು ಪ್ರವೇಶಿಸಬೇಕಾದೀತು, ಎಚ್ಚರದಿಂದಿರು, ಯವನರ ಕೈಯೊಳಗಿಂದ ಚಿತ್ತೂರನ್ನು ರಕ್ಷಿಸುವ ಕಾರ್ಯವು ನಿನ್ನ ಕೈಯಿಂದ ಕೊನೆಗಾಣುವಂತೆ ತೋರುತ್ತದೆ. ಬಾದಲ:-ದಾದಾ, ಸುಮ್ಮಸುಮ್ಮನೆ ಮುಖಸ್ತುತಿ ಮಾಡಿ ನನ್ನನ್ನು ಉಬ್ಬಿಸಬೇಕೆನ್ನುತ್ತೀರೇನು ? ನಾನು ಸಿಕ್ಕಿದ ಹಾಗೆ ಹಾದಿ ತಪ್ಪಿ ಉಬ್ಬಿ ಕುಣಿ ದಾಡುವವನಲ್ಲ. ಮೊದಲು ನನಗೆ ಕೆಲವು ಉಪದೇಶಗಳನ್ನು ಹೇಳಿರಿ, ಪರಾಣ ರಂತೂ ಮೇವಾಡವನ್ನು ಪ್ರವೇಶಿಸಿರುವರು. ನಿಮ್ಮ ಹಂಚಿಕೆಯ ಚೀಲವನ್ನು ಬಿಚ್ಚಿರಿ. ಹಾಗಲ್ಲದೆ ನೀವು ಮತ್ತೂ ಮತ್ತೂ ಚೇಷ್ಟೆ ಮಾಡಿ ನನ್ನನ್ನು ಕುಣಿ ದಾಡಿಸುವ ಹಾಗಿದ್ದರೆ ನಾನು ನೆಟ್ಟಗೆ ಅಮ್ಮನ ಬಳಿಗೆ ಹೋಗಿ ನಿಮ್ಮ ಮೇಲೆ ( ಫಿರ್ಯಾದಿ ಮಾಡುವೆನು, ಆ ಸಮಯದಲ್ಲಿ ಅತ್ಯಂತ ಲಾವಣ್ಯವತಿಯಾದ ರಮಣಿಯೊಬ್ಬಳು ಅಲ್ಲಿಗೆ ಬಂದು,- ಬಾದಲ! ಏನಾಯಿತು. ಮಗು!” ಎಂದು ನಗುತ್ತ ಕೇಳಿದಳು. ಬಾದಲ:-ಅಮ್ಮಾ ' ದಾದನ ಅನ್ಯಾಯವನ್ನು ನೋಡಿದಿರಾ ? ಸಿಂಹ ಳೀಯನಾಗಿದ್ದು ಸಿಂಹಳೀಯರ ಮಾನವನ್ನು ರಕ್ಷಿಸಲು ಯತ್ನಿಸುವುದಿಲ್ಲ. ನಾನು ಇಂದು ಸೇನಾವತಿಯಾಗಿರುವೆನು. ಹೀಗಿದ್ದು ಇವರ ಹತ್ತಿರ ಒಂದು ಕೆಲವು ಆಪ್ತಾಲೋಚನೆಗಳನ್ನೂ ಹಂಚಿಕೆಗಳನ್ನೂ ಕೇಳಿದರೆ ನನಗೆ ಹೇಳುವು ದಿಲ್ಲ. ನೀವು ಇದರ ವಿಚಾರ ಮಾಡಬೇಕು. ಇದೇ ನನ್ನ 'ಫಿರ್ಯಾದಿ' ರಮಣಿಯು ನಗತ್ಯ:-“ಒಳ್ಳೇದು ಮಗು ! ನಾನು ಇದರ ವಿಚಾರ ಮಾಡುವೆನು; ಅಡ್ಡಿಯಿಲ್ಲ. ನಾನು ನಿನಗೊಂದು ಉಪಾಯವನ್ನೂ ಸೂಚಿಸು ವೆನು. ಹೇಗಿದ್ದರೂ ನೀನು ಸೇನಾವತಿ, ಆದುದರಿಂದ ನೀನು ಸೇನಾವತಿಯ ಆಧಿಕಾರವನ್ನು ನಡಿಸಿ ಅವರಿಗೆ ಅಪ್ಪಣೆ ಮಾಡಬಾರದೇ ? ಸುಮ್ಮನೆ ' ! > “ಜೀ! ' ಮಾಡುವೆಯೇಕೆ ?” ಎಂದಳು. ಬಾದಲ'-ದಾದಾ ! ಈಗ ಹೇಗೆ ? ಗೋರಾ ಸಿಂಗ:- ಹಾಗಾದರೆ ಉಪಾಯವಿಲ್ಲ. ಸೇನಾವತಿಗಳೇ, ಅಪ್ಪಣೆ ಯಾಗಬೇಕು; ನನ್ನ ಕರ್ತವ್ಯವೇನು ? ೭೯
ಪುಟ:ಪದ್ಮಿನಿ .djvu/೯೪
ಗೋಚರ