ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸದ್ದಿನಿ ಓಡುತ್ತೊಡುತ್ತ ಒಂದೇ ಉಸಿರಿಗೆ ಅವರಿಬ್ಬರೂ ದುರ್ಗದ ಬಾಗಿಲ ಬಳಿಗೆ ಬಂದರು, ಈಗಂತೂ ಪೂರ್ವದನಿಟ್ಟಿನಿಂದ (ಅಲ್ಲಾಹೊ ಅಕಬರ್*!” ಎಂಬ ಜಯಧ್ವನಿಯು ಸ್ಪಷ್ಟವಾಗಿ ಕೇಳಿಬಂದಿತು. ಗೋರಾಸಿಂಗನೂ ಬಾದಲನೂ ಕಲ್ಲುಮುಳ್ಳೆನ್ನದೆ ಆ ಕಡೆಗೆ ಧಾವಿಸಿ ನಡೆದರು, ಅವರು ಹೋಗುವಷ್ಟರಲ್ಲಿ ಅಲ್ಲಿ ಇನ್ನೂ ಬಹು ಜನರು ನೆರೆದಿದ್ದರು, ರಾಣಾ ಭೀಮಸಿಂಹನೂ ಅಲ್ಲಿದ್ದನು. ಅವನು ಸ್ವತಃ ಒಂದೇಸವನೆ ಶತ್ರುಗಳ ಮೇಲೆ ಕಲ್ಲಿನ ಮಳೆಯನ್ನು ಕರೆಯುತ್ತಲಿದ್ದನು. ಮೇಲಿನ ರಜಪೂತ ಸೈನಿಕರು ಎಸೆದ ಕಲ್ಲುಗಳಿಂದ ಕೆಳಗೆ ಕೃಷ್ಣಸಾಗರದಂತಿದ್ದ ವರಾಣರ ಸೈನ್ಯವು ಚಲ ವಿಚಲಿತವಾಗುತ್ತಿತ್ತು, ಹಾಗು ಆ ನಂಕ್ಷುಬ್ದ ವಾದ ಸಾಗರದಿಂದ “ಅಲ್ಲಾಹೋ ಅಕಬರ್ ! ” ಎಂಬ ಭೋರ್ಗರೆವ ಘನಗರ್ಜನೆಯು ರಾತ್ರಿಯ ಶಾಂತತೆಯನ್ನು ಭೇದಿಸಿಕೊಂಡು ದಿಗಂತವನ್ನು ವ್ಯಾಪಿಸುತ್ತಲಿತ್ತು. ಬಾದಲನೂ ಗೋರಾ ಸಿಂಗನೂ ತೇಕುತ್ತ ಭೀಮಸಿಂಹನ ಬಳಿಗೆ ಬಂದರು. ಆಗ ಭೀಮ ಸಿಂಹನು ದೊಡ್ಡದೊಂದು ಬಂಡೆಗಲ್ಲನ್ನು ಶತ್ರುಗಳ ಮೇಲೆ ಉರುಳಿಸುವ ಪ್ರಯತ್ನದಲ್ಲಿ ದ್ದನು. ಆದರೆ ಅದು ಅವನಿಗೆ ಎತ್ತಲಿಲ್ಲ. ಅಷ್ಟರಲ್ಲಿ ಗೋರಾಸಿಂಗನು ಕಾಲಿನ ಒಂದೇ ಒದೆತದಿಂದ ಅದನ್ನು ಕೆಳಗೆ ಉರುಳಿಸಿಬಿಟ್ಟನು, ಭೀಮಸಿಂಹನು ಮುಖ ವೆತ್ತಿ ನೋಡುವಲ್ಲಿ ಗೋರಾಸಿಂಗ' 'ಮಶಾಲಿ'ನ ಬೆಳಕಿನಲ್ಲಿ ಅವನು ತೇಕುತ್ತ ನಿಂತದ್ದು ಸ್ಪಷ್ಟವಾಗಿ ಕಾಣಿಸಿತು. ಭೀಮಸಿಂಹನು ಅವನನ್ನು ನೋಡಿ: - “ಕಾಕಾಜೀ, ವರಾಣರ ಸಾಹಸ ವನ್ನು ನೋಡಿದಿರಾ? ವರಾಣರು ಇಲ್ಲಿಗೆ ಬಂದು ಮುಟ್ಟಲಿಕ್ಕೆ ಇನ್ನೂ ಏನಿ ಲೆಂದರೂ ಎರಡು ದಿವಸಗಳು ಬೇಕೆಂತಲೂ ಅವರು ದಣಿದು ವಿಶ್ರಾಂತಿಗಾಗಿ ಗಿರಿನಾರದ ನೆರೆಯಲ್ಲಿ ಇಳಿದುಕೊಂಡಿರುವರೆಂತಲೂ ನಾವು ಭಾವಿಸಿದ್ದೆವು. ಕಪಟಿಗಳಾದ ಪರಾಣರು ಹೀಗೆ ನಡುರಾತ್ರಿಯಲ್ಲಿ ಕಿಲ್ಲೆಗೆ ಲಗ್ಗೆ ಹತ್ತಬಹು ದೆಂದು ನಾವು ಕನಸಿನಲ್ಲಿಯೂ ಕೂಡ ಭಾವಿಸಿರಲಿಲ್ಲ' ಸೇನಾಪತಿಯೆಲ್ಲಿ? ಈಗ ಊಟಮಾಡಲಿಕ್ಕೂ ನಿದ್ದೆ ಮಾಡಲಿಕ್ಕೂ ಸಮಯವಲ್ಲ. ಬಾಗಿಲಲ್ಲಿ ಬಂದು ನಿಂತ ಶತ್ರುಗಳನ್ನು ಹೊರಗೆ ಹಾಕುವುದು ಮೊದಲನೆಯ ಕೆಲಸ; ಅವನಿಗೆ ಈ ವರ್ತ ಮಾನವನ್ನು ತಿಳಿಸಬೇಕಾಗಿತ್ತು, ” ಎಂದನು. ೮೪